
ಶಿವಮೊಗ್ಗ: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವಾಹನಗಳ ಸಂಖ್ಯೆಯು ಸಹಜವಾಗಿಯೇ ಅಧಿಕವಾಗಿದೆ .
ಆದರೆ ಸಂಚಾರಿ ಪೊಲೀಸರಿಗೆ ಸಂಚಾರಿ ದಟ್ಟಣೆಯನ್ನು ನಿಯಂತ್ರಣ ಮಾಡುವುದು ಹಾಗೂ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದವರನ್ನು ನಿಯಂತ್ರಿಸುವುದು , ಹೆಲ್ಮೆಟ್ ವಾಹನ ರೆಕಾರ್ಡ್ಸ್ ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ.
ಟ್ರಾಫಿಕ್ ಪೊಲೀಸ್ ನವರು ಇದೆಲ್ಲವನ್ನು ನಿಯಂತ್ರಣ ಮಾಡುವುದರ ಜೊತೆಗೆ ಅಂತವರಿಗೆ ತಿಳುವಳಿಕೆ ನೀಡಿ ಇನ್ನು ಮುಂದೆ ಈಗಾಗದಂತೆ ಎಚ್ಚರ ವಹಿಸುವಂತೆ ಗಾಂಧಿಗಿರಿ ಕೂಡ ಮಾಡುತ್ತಿದ್ದಾರೆ.
ಇದು ಸಾರ್ವಜನಿಕರು ಅಭಿನಂದಿಸುವ ಕೆಲಸವಾಗಿದ್ದು ಪೊಲೀಸರ ಈ ಕಾರ್ಯಕ್ಕೆ ಸಂಚಾರಿಗಳು ಸಹಕರಿಸಬೇಕು…
ಆಗ ಮಾತ್ರ ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯ ಹಾಗೂ ಅಪಘಾತಗಳು ಆಗದಂತೆ ತಡೆಯಬಹುದು…
ರಘುರಾಜ್ ಹೆಚ್.ಕೆ..9449553305…