
ಸಾಗರ:- ಶಿವಮೊಗ್ಗ ಜಿಲ್ಲೆ ಸಾಗರ ಪೇಟೆ ವ್ಯಾಪ್ತಿಯಲ್ಲಿ ವೆಂಟಿಲೇಟರ್ ಮೂಲಕ ಮನೆಯ ಒಳಗೆ ಇಳಿದು ಕಳ್ಳತನ ಮಾಡುತಿದ್ದ ಆರೋಪಿಗಳ ಬಂಧನ, 7,45,729/ರೂ ಮೌಲ್ಯದ ಕಾರು,ವಾಚ್ ಆಭರಣ ಜಪ್ತಿ..
ಸಾಗರ ಪೇಟೆ ಠಾಣಾ ವ್ಯಾಪ್ತಿಯಲ್ಲಿ ವೆಂಟಿಲೇಟರ್ ಬಳಸಿ ಕಳ್ಳತನ ಮಾಡಿದ ಪ್ರಕರಣ ಭೇದಿಸಿದ ಸಾಗರದ ಪೋಲಿಸ್ ಇಲಾಖೆ…
ಮಿಥುನ್ ಕುಮಾರ್ ಐಪಿಎಸ್ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಮತ್ತು ಅನಿಲ್ ಕುಮಾರ್ ಎಸ್ ಭೂಮರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಅವರ ಆದೇಶದ ಮೇರೆಗೆ
ಸಾಗರ ನಗರದ ಶಿವಮೊಗ್ಗ ರಸ್ತೆ ತೋಟಗಾರಿಕೆ ಇಲಾಖೆ ಹತ್ತಿರದ ಮನೆಯೊಂದರಲ್ಲಿ ವೆಂಟಿಲೇಟರ್ ಮೂಲಕ ಮನೆಯ ಒಳಗೆ ಇಳಿದು ವಾಚ್ ಹಾಗೂ ಆಭರಣ ಕಳ್ಳತನ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಹಚ್ಚಲು ಆದೇಶಿಸಿದ ಮೇರೆಗೆ .ರೋಹನ್ ಜಗದೀಶ್ ಐಪಿಎಸ್ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು ಸಾಗರ ಉಪ ವಿಭಾಗ ಸಾಗರ
ಸಾಗರ ಟೌನ್ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸೀತರಾಂ ಜೆ ಬಿ ಮತ್ತು ಕೃಷ್ಣಪ್ಪ ಕೆ ವಿ ಸರ್ಕಲ್ ಇನ್ಸ್‌ಪೆಕ್ಟರ್ ಸಾಗರ ಗ್ರಾಮಾಂತರರವರ ಮಾರ್ಗದರ್ಶನದಲ್ಲಿ ಪಿಎಸ್‌ಐ ರವರಾದ ಶ್ರೀಪತಿ ಗಿನ್ನಿ ಟಿ ಡಿ ಸಾಗರರ್‌ರವರ ನೇತೃತ್ವದಲ್ಲಿ ಸಾಗರ ಟೌನ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂಧಿಗಳಾದ. ರತ್ನಾಕರ್, ನಾಗರಾಜ ನಾಯ್ಕ, ಶ್ರೀಧರ್ ಪ್ರಭಾಕರ್ ವಿಶ್ವನಾಥ ಡಿ ಕೆ.ರಾಮನಗೌಡ ಪಾಟೀಲ್ ಅವರ ತಂಡ. ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಆರೋಪಿ 1)ಮಹಮದ್ ಇಪ್ಜಾಲ್ @ ಇಫಜಾಲ್ ಬಿನ್ ಆಪ್ಟಲ್ ಹುಸೇನ್.25 ವರ್ಷ.ಮುಸ್ಲಿಂ ಜಾತಿ.ಚಾಲಕ ವೃತ್ತಿ,ವಾಸ 2 ನೇ ಕ್ರಾಸ್,ಮದೀನಾ ಕಾಲೋನಿ ಭಟ್ಕಳ 2)ಯಾಸೀನ್ ಸಾಹೇಬ’ ಬಿನ್ ಭಾಷಾ ಸಾಹೇಬ 38 ವರ್ಷ,ಪೈಂಟಿಂಗ್ ಕೆಲಸ,ವಾಸ ಶಿರೂರು ಭಟ್ಕಳ 3)ಮಹಮದ್ ಮುಸಾಧಿಕ್ ಬಿನ್ ಅಬ್ದುಲ್ ರೆಹಮಾನ್ 33 ವರ್ಷ.ಇಂಟಿರಿಯಲ್ ವರ್ಕ್ ವಾಸ ಅಮರ್ ಕಾಲೋನಿ ಹೆಗ್ಗಲ್ ರೋಡ್ ಭಟ್ಕಳ ಇವರನ್ನು ದಸ್ತಗಿರಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರೂ 7,45,729/ರೂ ಮೌಲ್ಯದ ಕಾರು,ವಾಚ್ ಮತ್ತು ಆಭರಣ ಜಪ್ತಿ ಮಾಡಿ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ…
ಓಂಕಾರ ಎಸ್. ವಿ. ತಾಳಗುಪ್ಪ….