
ನಿವೃತ್ತಿಯ ನಂತರ ಎಲ್ಲರೂ ಬರ್ನ್ ಆದ ಬಲ್ಪ್ ಗಳಂತೆ .ಈಗೆಷ್ಟು ವ್ಯಾಟ್ ಗಳನ್ನು ಹೊಂದಿದ್ದೇವೆ,ಎಷ್ಟು ಪ್ರಜ್ವಲಿಸಿದ್ದೇವೆ ಎನ್ನುವುದು ಆಗ ನಗಣ್ಯವಾಗುತ್ತದೆ.ಹಾಗಾಗಿ ಇಂದು ನಾವು ಎಷ್ಟು ದೊಡ್ಡ ಹುದ್ದೆಯಲ್ಲಿದ್ದೇವೆ ಎನ್ನುವುದಕ್ಕಿಂತ ಅದನ್ನು ಹೇಗೆ ನಿರ್ವಹಿಸಿದ್ದೇವೆ ಎನ್ನುವುದೇ ಮುಖ್ಯ ನೈಜ ಗೌರವ ತಂದು ಕೊಡುವ ಶಕ್ತಿ ಇರುವುದು ವ್ಯಕ್ತಿತ್ವಕ್ಕೇ ಹೊರತು ಕುರ್ಚಿಗಲ್ಲ.ಇದನ್ನರಿತು ಸೌಜನ್ಯತೆ, ಸೌಹಾರ್ಧತೆಗಳಿಂದ ಕರ್ತವ್ಯ ನಿರ್ವಹಿದಾಗ ಮಾತ್ರ ನಿವೃತ್ತಿಯ ನಂತರವೂ ಆತ್ಮವಿಶ್ವಾಸದಿಂದ ಬದುಕಲು ಸಾಧ್ಯ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ನುಡಿದರು. ಅವರು ವಯೋ ನಿವೃತ್ತಿ ಹೊಂದಿದ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರೂ, ತೀರ್ಥಹಳ್ಳಿ ಉಪ ಖಜಾನೆಯ ಅಧೀಕ್ಷಕರೂ ಆದ ವಿಜಯ್ ಕುಮಾರ್ ರನ್ನು ಉಪ ಖಜಾನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಆತ್ಮೀಯವಾಗಿ ಗೌರವಿಸಿ ಮಾತನಾಡಿದರು.
ಮುಂದುವರೆದು ಈ ನಿಟ್ಟಿನಲ್ಲಿ ವಿಜಯ ಕುಮಾರರ ಕರ್ತವ್ಯ ನಿರ್ವಹಣೆ ಶ್ಲಾಘನೀಯ.ಇಂತವರ ನಿವೃತ್ತಿ ಇಲಾಖೆಗೆ, ಸರ್ಕಾರಕ್ಕೆ ನಷ್ಟ ಇವರ ನಿವೃತ್ತ ಬದುಕಿಗೆ ಹಾರ್ದಿಕ ಶುಭ ಹಾರೈಕೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರಾಮು ಬಿ, ಉಪಾಧ್ಯಕ್ಷೆ ಸುಷ್ಮ ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್, ಸುದರ್ಶನ್, ಪಿಂಟೋ,ಮತ್ತಿತರರು ವಿಜಯ ಕುಮಾರ್ ಕಾರ್ಯ ವೈಖರಿಯನ್ನು ಶ್ಲಾಘಿಸಿ ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಖಜಾನಾಧಿಕಾರಿ ಗಿರಿರಾಜ್ ಮಾತನಾಡಿ, ಅದೆಷ್ಟೇ ಕೆಲಸದ ಒತ್ತಡವಿದ್ದರೂ ವಿಜಯ ಕುಮಾರ್ ಅತ್ಯಂತ ತಾಳ್ಮೆಯಿಂದ ಎಲ್ಲರೊಂದಿಗೆ ಸೌಹಾರ್ಧತೆಯಿಂದ ವರ್ತಿಸುತಿದ್ದರು. ನೌಕರರ ಸಮಸ್ಯೆಗಳನ್ನು ಅರಿತು ತಮ್ಮಿಂದಾದ ಸಹಕಾರವನ್ನು ನೀಡುವ ಮೂಲಕ ಅದನ್ನು ಪರಿಹರಿಸಲು ಪ್ರಯತ್ನಿಸುತಿದ್ದರು. ಇವರ ಕಾರ್ಯ ವೈಖರಿ ಕಚೇರಿಯ ಸುಸಲಿತ ಕಾರ್ಯ ನಿರ್ವಹಣೆಗೆ ಬಹಳ ಸಹಕಾರಿಯಾಗಿತ್ತು. ಸರ್ಕಾರಿ ವೃತ್ತಿಯಲ್ಲಿ ನಿವೃತ್ತಿ ಸಹಜ.ನನ್ನ ಆತ್ಮೀಯರೂ ಆದ ಅವರ ನಿವೃತ್ತ ಬದುಕಿಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದರು.
ಉಪ ಖಜಾನೆ , ತಾಲ್ಲೂಕು ಪಂಚಾಯತ್,,ತಾಲ್ಲೂಕು ಕಚೇರಿ, ಭೂ ಮಾಪನಾ ಇಲಾಖೆ, ,ಶಿಕ್ಷಣ ಇಲಾಖೆಗಳ ವತಿಯಿಂದಲೂ ಅವರನ್ನು ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ವಿಜಯ ಕುಮಾರ್ ತಮ್ಮ ವೃತ್ತಿ ಬದುಕಿನ ಪಯಣವನ್ನು ನೆನಪಿಸಿಕೊಂಡು.ನನ್ನ ಕರ್ತವ್ಯ ಅವಧಿಯಲ್ಲಿ ಸಹೋದ್ಯೋಗಿಗಳು, ಎಲ್ಲಾ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಸಹಕಾರ ನೀಡಿದ್ದಾರೆ. ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಸತೀಶ್ ಟಿ ಆರ್, ಜಂಟಿ ಕಾರ್ಯದರ್ಶಿ ಸುಧೀರ್,ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣಮೂರ್ತಿ,ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಕಟ್ಟೆ ಮಂಜುನಾಥ್,ಶಿರಸ್ತೇದಾರ್ ಸತ್ಯಮೂರ್ತಿ, ಶಿವಪ್ರಸಾದ್, ಕಂದಾಯ ನಿರೀಕ್ಷಕ ಸೂರತ್ ಕುಮಾರ್ ಸೇರಿದಂತೆ ತಾಲ್ಲೂಕು ಕಚೇರಿ,ತಾಲ್ಲೂಕು ಪಂಚಾಯತ್,ಶಿಕ್ಷಣ ಇಲಾಖೆ,ಮತ್ತಿತರ ಇಲಾಖೆಗಳ ಅದಿಕಾರಿ,ಸಿಬ್ಬಂದಿಗಳು ಇದ್ದರು.
ಉಪ ಖಜಾನೆಯ ಸಂಪತ್ ಸ್ವಾಗತಿಸಿ ನಿರೂಪಿಸಿದರು, ಮಹಾನಂದ ವಂದಿಸಿದರು….