
ದಾರಿಯಲ್ಲಿ ಸಿಕ್ಕಿದ್ದ ಮೊಬೈಲಿನ ವಾರಸುದಾರರನ್ನು ಹುಡುಕಿ,ಮರಳಿಸಿ ಪ್ರಾಮಾಣಿಕತೆ ಮೆರೆದ ಪ್ರಾ.ಆ.ಕೇಂದ್ರ ಮೇಗರವಳ್ಳಿಯ ಸಮುದಾಯ ಆರೋಗ್ಯ ಅಧಿಕಾರಿ ಕೈಲಾಶ್ ರವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮೊಬೈಲಿನ ವಾರಸುದಾರರಾದ ಮೇಗರವಳ್ಳಿ ಮೆಸ್ಕಾಂ ಕಚೇರಿಯ ಸಿಬ್ಬಂದಿ ದಿಲೀಪ್ ಮತ್ತವರ ಸಹೋದ್ಯೋಗಿಗಳು ಪ್ರಾ. ಆ. ಕೇಂದ್ರಕ್ಕೆ ಆಗಮಿಸಿ ಕೈಲಾಶ್ ವರನ್ನು ಗೌರವಿಸಿ, ಅಭಿನಂಧಿಸಿದರು.
ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ, ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ.ರಂಜಿತ,ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ನೀಲಮ್ಮ, ಶುಶ್ರೂಷಣಾಧಿಕಾರಿ ನಿರ್ಮಲ, ಫಾರ್ಮಸಿ ಅಧಿಕಾರಿ ಸನ್ನಿಧಿ, ಪ್ರ.ದ. ಸಹಾಯಕ ನವೀನ್, ಡಿ ದರ್ಜೆ ನೌಕರರಾದ ಪಾರ್ವತಿ, ಗಣೇಶ್ ಮತ್ತಿತರರು ಉಪಸ್ಥಿತರದ್ದರು…