
ತೀರ್ಥಹಳ್ಳಿ : ತಾಲೂಕಿನ ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರತಿದಿನ ಭಾರಿ ಪ್ರಮಾಣದ ಅಕ್ರಮ ಮರಳು ದಂಧೆ ನಡೆಯುತ್ತಿದ್ದು. ದುರಂತವೆಂದರೆ ಇದನ್ನ ತಡೆಯಬೇಕಾದ ಸ್ಥಳೀಯ ಪೊಲೀಸ್ ಇಲಾಖೆಯು ಕೆಲವು ಭ್ರಷ್ಟ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವುದರಿಂದ ನಿರಂತರವಾಗಿ ಮರಳು ದಂಧೆ ನಡೆಯುತ್ತಿದೆ.
ಮಹಿಷಿ ಸೇತುವೆ ಬಳಿ ಜೆಸಿಬಿ ಯಂತ್ರ ಬಳಸಿ ಮರಳು ಲೂಟಿ…!
ಕೋನರಿ ಪುರ, ಮಹಿಷಿ ತುಂಗಾ ಸೇತುವೆ ಸಮೀಪ ನ್ಯಾಯಾಲಯದ ಆದೇಶ ಉಲ್ಲಂಘಿಸಿ,
ಹಾಡಹಗಲೇ ರಾಜಾ ರೋಷವಾಗಿ ಅಕ್ರಮ ಮರಳು ದಂದೆ ನಡೆಯುತ್ತಿದ್ದು ಅನೇಕ ಬಾರಿ ಈ ಭಾಗದ ಗ್ರಾಮಸ್ಥರು ಅಕ್ರಮ ಮರಳು ದಂದೆಯ ಬಗ್ಗೆ ತಿಳಿಸಿದರು ಪತ್ರಿಕೆಗಳಲ್ಲಿ ಸುದ್ದಿಯಾದರು, ಕರೆ ಮಾಡಿ ಮಾಹಿತಿ ನೀಡಿದರು ಕೆಲವು ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವುದರಿಂದ ಮರಳು ಸಾಗಾಟ ಯಾರ ಭಯವಿಲ್ಲದೆ ನಡೆಯುತ್ತಿದೆ.
ಈ ಅಕ್ರಮ ಮರಳು ಸಾಗಾಟದಿಂದ ರೋಸಿ ಹೋದ ಗ್ರಾಮಸ್ಥರು ತಾವೇ ಜೆಸಿಬಿ ಯಂತ್ರವನ್ನು ಬಳಸಿ, ಟ್ರಾಕ್ಟರ್ ನಲ್ಲಿ ಮರಳು ಸಾಗಾಟ ಮಾಡುತ್ತಿರುವ ವೇಳೆ ಈ ಅಕ್ರಮ ಮರುಳು ದಂದೆಯ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದ್ದು
ನಂತರ ಬೇರೆ ದಾರಿ ಇಲ್ಲದೆ ಪೊಲೀಸರು ಅಕ್ರಮ ಮರಳು ಸಾಗಾಟಕ್ಕೆ ಬಳಸಿದ ಜೆಸಿಬಿ ಮತ್ತು ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದಿದ್ದು 1) ರಾಜೇಶ ಬಿನ್ ಪ್ರಾಣೇಶ 2) ಸಂದೀಪ ಬಿನ್ ಕೃಷ್ಣನಾಯ್ಕ 3) ರಜನಿಕಾಂತ ಬಿನ್ ಬೊಮ್ಮಪ್ಪ ಎನ್ನುವರ ಮೇಲೆ ಕೇಸ್ ದಾಖಲಿಸಿದ್ದಾರೆ. ತಾಲೂಕಿನ ಕುಡುವತಿಯಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡಿರುವ ರಾಜೇಶ್ ಭಟ್ ಈ ಮರಳು ದಂಧೆಯ ಗಾಡ್ ಫಾದರ್ ಈತ ಯಾರ ಭಯವಿಲ್ಲದೆ ಮರಳು ದಂಧೆಯನ್ನು ನಡೆಸುತ್ತಾನೆ ಎನ್ನುವುದು ಸ್ಥಳೀಯರ ಆರೋಪ .. ಈತನ ಅಕ್ರಮದ ಬಗ್ಗೆ ಸಾಕಷ್ಟು ಮಾಹಿತಿಗಳು ಪತ್ರಿಕೆಗೆ ಲಭ್ಯವಾಗುತ್ತಿದ್ದು ಮುಂದಿನ ದಿನಗಳಲ್ಲಿ ಪ್ರಕಟವಾಗಲಿದೆ…
ಕುಂಸಿ ಠಾಣೆಯಲ್ಲಿ ಹಿಂದೆ ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರ ಪ್ರಶಂಸಗೆ ಪಾತ್ರವಾಗಿದ್ದ ಜನಸ್ನೇಹಿ, ಪ್ರಾಮಾಣಿಕ ದಕ್ಷ ಅಧಿಕಾರಿ ಎನಿಸಿಕೊಂಡಿದ್ದ ಪಿಎಸ್ಐ ನವೀನ್ ಮಠಪತಿ ಮಾಲೂರು ಠಾಣೆಗೆ ವರ್ಗಾವಣೆಯಾಗಿ ಬಂದ ಮೇಲೆ ಸಾರ್ವಜನಿಕರಿಗೂ ಒಂದಷ್ಟು ನಿರೀಕ್ಷೆಗಳು ಇದ್ದವು. ಇವರಿಂದ ಇಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ , ಕುರುವಳ್ಳಿ ಬಂಡೆಯಿಂದ ಬರುವ ಕಲ್ಲುಗಳ ಲಾರಿಗಳ ವಶ, ಅಕ್ರಮ ಮಧ್ಯ ಮಾರಾಟ, ಗೋವುಗಳ ಸಾಗಾಟ ಇನ್ನಿತರ ದಂಧೆಗಳ ಮೇಲೆ ನಿಯಂತ್ರಣ ತರುತ್ತಾರೆ ಎನ್ನುವ ಭರವಸೆ ಸಾರ್ವಜನಿಕರಾಗಿತ್ತು.
ಆದರೆ ಅವರ ವ್ಯಾಪ್ತಿಯಲ್ಲಿ ಈ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದರು ನೋಡಿಕೊಂಡು ಸುಮ್ಮನಿರುವುದು ನೋಡಿದರೆ ನವೀನ್ ಮಠಪತಿ ಮೇಲೆ ಅನುಮಾನ ಬರುತ್ತದೆ. ಇನ್ನು ಮುಂದೆ ಈಗಾಗದಿರಲಿ ಅಕ್ರಮ ಮರಳು ದಂಧೆಯನ್ನು ನಿಲ್ಲಿಸಿ ಹಾಗೆ ತೀರ್ಥಹಳ್ಳಿಯ ಮೇಲಿನ ಕುರುವಳ್ಳಿ ಬಂಡೆಯಿಂದ ಬರುವ ಅಕ್ರಮ ಮರಳು ಕ್ವಾರೆ ಕಲ್ಲುಗಳ ಲಾರಿಗಳನ್ನು ತಡೆದು ನಿಲ್ಲಿಸಿ ಆ ಮೂಲಕ ನಿಮ್ಮ ಮೇಲೆ ಇರುವ ಉತ್ತಮ ಅಭಿಪ್ರಾಯವನ್ನು ಹಾಗೆ ಉಳಿಸಿಕೊಳ್ಳಿ ಎನ್ನುವುದು ಪತ್ರಿಕೆಯ ಆಶಯ..
ತೀರ್ಥಹಳ್ಳಿ ತಾಲೂಕಿನ ಹಲವು ಕಡೆ ಮರಳು ಸ್ಟಾಕ್ ಮಾಡಿಕೊಂಡಿದ್ದು ಈ ಮಳೆಗಾಲದಲ್ಲಿ ಆ ಸ್ಟಾಕ್ ಮಾಡಿರುವ ಮರಳನ್ನು ಹೊಡೆಯುತ್ತಿದ್ದಾರೆ. ಇದರ ಮೇಲೆ ತಾಲೂಕ್ ಆಡಳಿತ, ಪೋಲಿಸ್ ಇಲಾಖೆ, ಗಣಿ ಮತ್ತು ವಿಜ್ಞಾನ ಇಲಾಖೆ, ಗಾಡಿಗಳನ್ನು ಹಿಡಿದು ಸ್ಟಾಕ್ ನಲ್ಲಿರುವ ಮರಳನ್ನು ವಶಪಡಿಸಿಕೊಂಡು ಸರ್ಕಾರದ ಬಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು, ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿರುವುದನ್ನು ತಪ್ಪಿಸಬೇಕು ಇಲ್ಲವಾದಲ್ಲಿ ಇದರಲ್ಲಿ ಅಧಿಕಾರಿಗಳು ನೇರವಾಗಿ ಶಾಮಿಲ್ ಆಗಿದ್ದಾರೆ ಎನ್ನುವ ಸಾರ್ವಜನಿಕರ ಆರೋಪ ನಿಜವಾಗುತ್ತದೆ ನೆನಪಿರಲಿ…
ಜಿಲ್ಲೆಯಲ್ಲಿ ದಕ್ಷ, ಪ್ರಾಮಾಣಿಕ, ನಿಷ್ಠಾವಂತ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದ್ದಾರೆ ಅವರಿಗೂ ಕೂಡ ಲಿಖಿತ ರೂಪದಲ್ಲಿ ಮರಳು ಸ್ಟಾಕ್ ಮಾಡಿರುವ ಪ್ರದೇಶ ಅದರ ಫೋಟೋ, ವಿಡಿಯೋಗಳ ಸಮೇತ ಲಿಖಿತ ದೂರನ್ನು ನೀಡಲಾಗುವುದು ….
ರಘುರಾಜ್ ಹೆಚ್.ಕೆ..9449553305….