
ತೀರ್ಥಹಳ್ಳಿ : ಆನ್ ಲೈನ್ ಬೆಟ್ಟಿಂಗ್ ಗೆ ತಾಲೂಕಿನ ಬೊಮ್ಮನಹಳ್ಳಿ ನಾಗದೇವಸ್ಥಾನದ ಪಾದ್ರಿ ಸಂಜೀವ್ ಶೆಟ್ಟಿ ಮೂರನೇ ಮಗ 22 ವರ್ಷದ ಮಿಥುನ್ ಶೆಟ್ಟಿ ಬಲಿಯಾಗಿದ್ದು. ಮಿಥುನ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಿನ್ನೆ ತಡರಾತ್ರಿ ಸುಮಾರು 12:30 ರಿಂದ 2 ಗಂಟೆಯ ಅವಧಿಯಲ್ಲಿ ಮಿಥುನ್ ಆತ್ಮಹತ್ಯೆ ಮಾಡಿಕೊಂಡಿದ್ದು. ಆನ್ ಲೈನ್ ಬೆಟ್ಟಿಂಗ್ ರಾಜ್ಯದ್ಯಂತ ವ್ಯಾಪಕವಾಗಿ ನಡೆಯುತ್ತಿದ್ದು ಇತ್ತೀಚಿಗೆ ಇದಕ್ಕೆ ದಾಸರಾಗಿರುವ ಯುವಕರು ಈ ಬೆಟ್ಟಿಂಗ್ ದಂಧೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಲ ಮಾಡಿಕೊಳ್ಳುತ್ತಾರೆ. ನಂತರ ಸಾಲಗಾರರು ಇವರಿಗೆ ಕಾಟ ಕೊಟ್ಟಾಗ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಬೆಟ್ಟಿಂಗ್ ನಲ್ಲಿ ಕ್ರಿಕೆಟ್ ಸೇರಿದಂತೆ ಹಲವಾರು ಗೇಮ್ ಗಳು ಇವೆ ಮಾಡಿರುವ ಸಾಲ ತೀರಿಸಲಾಗದೆ ಮಿಥುನ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ.
ಆದರೆ ಮಿಥುನ್ ಗೆ ಕಾಟಕೊಟ್ಟವರು ಯಾರು..?! ಕಡ್ತೂರು ಭಾಗದ ಬೆಟ್ಟಿಂಗ್ ಕೋರನಾ..?!, ತೀರ್ಥಹಳ್ಳಿಯ ಭಾಗದ ಒಬ್ಬನ ಹೆಸರು ಹಾಗೆ ಹಣಗೆರೆ ಮೂಲದ ಫೈನಾನ್ಸಿಯರ್ ಒಬ್ಬ ಇರುವ ಶಂಕೆ ವ್ಯಕ್ತವಾಗಿದೆ.
ತೀರ್ಥಹಳ್ಳಿ ಪೊಲೀಸ್ ಇಲಾಖೆಯ ಸಮಗ್ರ ತನಿಖೆಯಿಂದ ಎಲ್ಲವೂ ಹೊರಬರುವ ಸಾಧ್ಯತೆ ಇದೆ…
ರಘುರಾಜ್ ಹೆಚ್.ಕೆ..9449553305…