ಶಿವಮೊಗ್ಗ : ನಿನ್ನೆ ಅಂದರೆ ದಿನಾಂಕ 06-07-2023 ರಂದು ಖಾಸಗಿ ಬಸ್ ನ ಚಾಲಕನು ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡುತ್ತಿರುವ ವಿಡಿಯೋವೊಂದನ್ನು ಸಾರ್ವಜನಿಕರೊಬ್ಬರು ಶಿವಮೊಗ್ಗ ಸಂಚಾರ ಪೊಲೀಸ್ ನವರಿಗೆ ವಾಟ್ಸ್ ಅಪ್ ಮುಖಾಂತರ ಕಳುಹಿಸಿ ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ಸಂತೋಷ್ ಕುಮಾರ್ ಪೊಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರ ವೃತ್ತ ರವರು ಸದರಿ ವಿಡಿಯೋವನ್ನು ಪರಿಶೀಲಿಸಿ, ಸಂಚಾರ ನಿಯಮ ಉಲ್ಲಂಘನೆ ಮಾಡಿ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡಿದ್ದ ಮನ್ಸೂರ್ ಅಲಿ, ಗಜಾನನ ಬಸ್ ಚಾಲಕ, ಸಕ್ರೆಬೈಲ್, ಶಿವಮೊಗ್ಗ ಈತನ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ ರೂ 5,000/- ದಂಡ ವಿಧಿಸಿ ಕ್ರಮ ಕೈಗೊಂಡಿರುತ್ತಾರೆ.
ಖಾಸಗಿ ಬಸ್ ಚಾಲಕನಿಗೆ ಬಿತ್ತು 5,000 ಸಾವಿರ ದಂಡ..!
RELATED ARTICLES