
ಶಿವಮೊಗ್ಗ: ಜಿಲ್ಲೆಯ ಹಲವು ಕಡೆ ಅಕ್ರಮ ಮರಗಳನ್ನು ಕಡಿದು ಮಾರಾಟ ಮಾಡುವ ಬೃಹತ್ ಜಾಲವೊಂದು ಕಾರ್ಯನಿರ್ವಹಿಸುತ್ತಿದ್ದು. ಸಾಗರ, ತೀರ್ಥಹಳ್ಳಿ, ಹೊಸನಗರ ಭಾಗಗಳಲ್ಲಿ ಈ ದಂದೆ ವ್ಯಾಪಕವಾಗಿ ನಡೆಯುತ್ತಿದೆ.
ಅದರಲ್ಲೂ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಮಂಡಗದ್ದೆಯ ಭಾಗದಲ್ಲಿ ಮರಗಳನ್ನು ಕಡಿದು ಮಾರಾಟಮಾಡುವ ಜಾಲವೊಂದು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಇವರು ಇಲ್ಲಿನ ಬೆಳೆಬಾಳುವ ಮರಗಳನ್ನು ಕಡಿದು ತುಮಕೂರು ಮಾರ್ಗವಾಗಿ ಬೆಂಗಳೂರು ಭಾಗಗಳಿಗೆ ರವಾನಿಸುತ್ತಿದ್ದಾರೆ.
ಹೇಗೆ ನಡೆಸುತ್ತಾರೆ ಈ ದಂದೆ..?!
ಕೆಲವರು ಅಕೇಶಿಯ ಮರಗಳನ್ನು ಕಡಿದು ಲಾರಿಗಳಲ್ಲಿ ತುಂಬಿಕೊಂಡು ಅದರ ಜೊತೆಗೆ ಬೆಲೆಬಾಳುವ ಮರಗಳನ್ನು ಹಾಕಿ ಲಾರಿಗಳಲ್ಲಿ ಮಾರಾಟ ಮಾಡುತ್ತಾರೆ. ಇನ್ನೂ ಕೆಲವರು ಮರಳು ಲಾರಿಗಳಲ್ಲಿ ಮೇಲೆ ಮರಳನ್ನು ಹಾಕಿ ಕೆಳಗಡೆ ಮರಗಳನ್ನು ಇಟ್ಟು ಮಾರಾಟ ಮಾಡುತ್ತಾರೆ. ಇತರ ದಂಧೆ ನಡೆಸುವ ಈ ಮರ ಕಳ್ಳರು ಇನ್ನೊಂದಷ್ಟು ವರ್ಷ ಹೀಗೆ ಬಿಟ್ಟರೆ ಮಲೆನಾಡಿನಲ್ಲಿ ಸಂಪೂರ್ಣವಾಗಿ ಬೆಲೆಬಾಳುವ ಜಾತಿಯ ಮರಗಳೇ ಇಲ್ಲದ ಹಾಗೆ ಮಾಡಿಬಿಡುತ್ತಾರೆ.
ಇದೇ ತಿಂಗಳ 6ನೇ ತಾರೀಕು ರಾತ್ರಿ 10:30 ರಿಂದ 11:30 ರ ಸುಮಾರಿನಲ್ಲಿ ಶಿವಮೊಗ್ಗ ಭದ್ರಾವತಿ ಮೂಲಕ ತರೀಕೆರೆಗೆ ಹೋಗುವ ಬೈಪಾಸ್ ರಸ್ತೆಯಲ್ಲಿ ಹೋಗುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿದ ಭದ್ರಾವತಿ ವಲಯ ಅರಣ್ಯ ಅಧಿಕಾರಿಗಳು ಲಾರಿಯನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಮರದ ತುಂಡುಗಳು ಇದ್ದಿದ್ದು ಕಂಡು ಬಂತು ಆದರೆ ಸೂಕ್ತವಾದ ಯಾವುದೇ ದಾಖಲೆಗಳು ಇರಲಿಲ್ಲ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳಿಗೆ ತನಿಖೆ ನಡೆಸಿದಾಗ ಆ KA 06 AB -5612 ಸಂಖ್ಯೆಯ ರಾಘವೇಂದ್ರ ಎನ್ನುವವರ ಮಾಲೀಕತ್ವದ ಲಾರಿಯನ್ನು ರಫಿ ಉಲ್ಲಾ ಎನ್ನುವ ಚಾಲಕನು ಚಲಾಯಿಸಿಕೊಂಡು ಗಣೇಶ ಎನ್ನುವ ಸುಮಾರು 35 ವರ್ಷದ ವ್ಯಕ್ತಿ ಈ ಲಾರಿಯಲ್ಲಿ ಸುಮಾರು 9:30ಕ್ಕೆ ತೀರ್ಥಹಳ್ಳಿ ತಾಲೂಕಿನ ಅಗ್ರಹಾರ ಹೋಬಳಿಯ ಗುಡ್ಡೆಕೊಪ್ಪ ಗ್ರಾಮದಿಂದ ಅಕೇಶಿಯ ಪಲ್ಪ್ ವುಡ್ ಸುಮಾರು 2.10 ಮೀ ಎತ್ತರ ಮತ್ತು 6ಮೀ ಉದ್ದ, 2.70 ಮೀ ಆಗಲ ದ ಮರದ ತುಂಡುಗಳನ್ನು ತುಂಬಿಕೊಂಡು ಭದ್ರಾವತಿ, ಅರಸಿಕೆರೆ, ತಿಪಟೂರು, ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದು ನಕಲಿ ಪಹಣಿಯನ್ನು ಇಟ್ಟುಕೊಂಡು ಹೋಗುತ್ತಿದ್ದ ಲಾರಿ ಅದಾಗಿತ್ತು.
ವಲಯ ಅರಣ್ಯ ಅಧಿಕಾರಿಗಳು ಲಾರಿಯನ್ನು ವಶಪಡಿಸಿಕೊಂಡು ಚಾಲಕನ ವಿರುದ್ಧ ಹಾಗೂ ಈ ಅಕ್ರಮ ಮರಗಳನ್ನು ಸಾಗಾಟ ಮಾಡುತ್ತಿದ್ದ ಗಣೇಶ್ ಎನ್ನುವ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಆದರೆ ಇದು ಕೇವಲ ಪಲ್ಪ್ ವುಡ್ ಅಕೇಶಿಯಾ ಮರಗಳ ಕಥೆಯಲ್ಲ..!
ಇದು ಕೇವಲ ಎಂಪಿಎಂ ತೋಪಿನಲ್ಲಿ ನೆಡುವ ಪಲ್ಪ್ ಫುಡ್ ಅಕೇಶಿಯ ಮರಗಳ ಕಥೆಯಲ್ಲ ಇದರ ಹಿಂದೆ ಬೇರೆನೇ ಕಥೆ ಇದೆ ಈ ಅಕೇಶಿಯ ಮರಗಳ ಜೊತೆಗೆ ಬೆಲೆಬಾಳುವ ಮರಗಳನ್ನು ಇಟ್ಟು ನಕಲಿ ಪಹಣಿಗಳನ್ನು ಸೃಷ್ಟಿ ಮಾಡಿಕೊಂಡು ಕೆಲವು ಭ್ರಷ್ಟ ಅರಣ್ಯ ಅಧಿಕಾರಿಗಳನ್ನು ಇದರಲ್ಲಿ ಸೇರಿಸಿಕೊಂಡು ನಡೆಸುತ್ತಿರುವ ವ್ಯವಸ್ಥಿತವಾದ ಬೃಹತ್ ಜಾಲ..
ಇದರ ಹಿಂದೆ ಯಾರಿದ್ದಾರೆ..?! ಅರಣ್ಯ ಅಧಿಕಾರಿಗಳ ಪಾತ್ರವೇನು..?! ಇದು ಮಾರಾಟವಾಗುವುದು ಯಾರಿಗೆ..?! ಎನ್ನುವ ಎಲ್ಲಾ ಸತ್ಯವನ್ನು ಸದ್ಯದಲ್ಲೇ ನಿಮ್ಮ “”ನ್ಯೂಸ್ ವಾರಿಯರ್ಸ್ ಪತ್ರಿಕೆ”” ಸಾರ್ವಜನಿಕರ ಮುಂದೆ ತೆರೆದಿಡಲಿದೆ… ನಿರೀಕ್ಷಿಸಿ…
ರಘುರಾಜ್ ಹೆಚ್.ಕೆ..9449553305…