
ಶಿವಮೊಗ್ಗ: ನಗರದ ಪ್ರತಿಷ್ಠಿತ ಹೈಟೆಕ್ ಆಸ್ಪತ್ರೆ ಮ್ಯಾಕ್ಸ್ ಆಸ್ಪತ್ರೆಗೆ ಮಹಾನಗರ ಪಾಲಿಕೆಯವರು ನೋಟಿಸ್ ಜಾರಿಗೊಳಿಸಿ ದಿಟ್ಟ ಕ್ರಮ ತೆಗೆದುಕೊಂಡಿದ್ದಾರೆ. ಮ್ಯಾಕ್ಸ್ ಆಸ್ಪತ್ರೆಯ ಮುಂಭಾಗ ಪಾದಚಾರಿಗಳು ಓಡಾಡುವ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದು ಕೂಡಲೇ ಅದನ್ನು ತೆರವುಗೊಳಿಸಬೇಕು ಹಾಗೂ ನೆಲಮಾಹಡಿ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದು ಕಂಡುಬಂದಿದ್ದು ಅದನ್ನು ಪಾರ್ಕಿಂಗ್ಗೆ ಬಳಸಿ ಆಸ್ಪತ್ರೆಯ ಸುತ್ತಮುತ್ತಲಿನ ಜಾಗವನ್ನು ಅತಿಕ್ರಮ ಮಾಡಿಕೊಂಡು ವಾಹನ ನಿಲ್ಲಿಸುತ್ತಿರುವುದು ಹಾಗೂ ವಾಹನ ನಿಲ್ಲಿಸುತ್ತಿರುವುದಕ್ಕೆ ಅನುವು ಮಾಡಿಕೊಳ್ಳುತ್ತಿರುವುದು ಸೇರಿದಂತೆ ಕನ್ಸ್ಯುರೆನ್ಸಿಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಕೂಡಲೇ ತೆರುವು ಗೊಳಿಸಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕು ಎಂದು ತಿಳುವಳಿಕೆ ನೋಟಿಸ್ ಒಂದನ್ನು ನೀಡಿದ್ದಾರೆ.

ಈ ನೋಟಿಸ್ ಅನ್ನು ಮ್ಯಾಕ್ಸ್ ಆಸ್ಪತ್ರೆಯವರು ನಿರ್ಲಕ್ಷ್ಯ ಮಾಡುವಂತಿಲ್ಲ ಏಕೆಂದರೆ ಇದು ಪ್ರಾಥಮಿಕ ನೋಟಿಸ್ ಆಗಿದ್ದು ಇನ್ನೂ ಎರಡು ನೋಟಿಸ್ ನೀಡಿದರೆ ಅದಕ್ಕೂ ಮ್ಯಾಕ್ಸ್ ಆಸ್ಪತ್ರೆಯವರು ನಿರ್ಲಕ್ಷ ಮಾಡಿ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಮುಂದೆ ಮಹಾನಗರಪಾಲಿಕೆಯವರು ಕಾನೂನು ಮೂಲಕ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಅದನ್ನು ಎದುರಿಸಬೇಕಾಗುತ್ತದೆ ಎಚ್ಚರ…
ಈಗ ಸ್ವಲ್ಪ ದಿನಗಳ ಹಿಂದೆ ನಿಮ್ಮ ನ್ಯೂಸ್ ವಾರಿಯರ್ಸ್ ಪತ್ರಿಕೆ ಮ್ಯಾಕ್ಸ್ ಆಸ್ಪತ್ರೆಯವರು ಫುಟ್ಬಾತ್ ಜಾಗವನ್ನು ಅತಿಕ್ರಮಣ ಮಾಡಿರುವುದನ್ನು ಸುದ್ದಿ ಮಾಡಿತ್ತು. ಹಾಗೂ ಮಹಾ ನಗರಪಾಲಿಕೆ ಅವರಿಗೆ ಸಾರ್ವಜನಿಕರ ಹಿತದೃಷ್ಟಿಯಿಂದ ದೂರು ನೀಡಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದು ಅದರ ಪ್ರಕಾರ ಮಹಾನಗರ ಪಾಲಿಕೆಯವರು ದಿಟ್ಟ ಕ್ರಮ ತೆಗೆದುಕೊಂಡಿದ್ದು. ಮ್ಯಾಕ್ಸ್ ಆಸ್ಪತ್ರೆಯವರಿಗೆ ನೋಟಿಸ್ ನೀಡಿದ್ದಾರೆ.
ಇನ್ನು ಮುಂದಾದರೂ ಮ್ಯಾಕ್ಸ್ ಆಸ್ಪತ್ರೆಯವರು ಎಚ್ಚೆತ್ತುಕೊಂಡು ಅಲ್ಲಿ ಪಾದಚಾರಿಗಳ ಜಾಗವನ್ನು ಅತಿಕ್ರಮಣ ಮಾಡಿರುವುದನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಸುಲಭವಾಗಿ ಓಡಾಡಲು ಅನುಕೂಲವಾಗುವಂತೆ ಅನುವು ಮಾಡಿಕೊಡಲಿ ಎನ್ನುವುದು ಪತ್ರಿಕೆಯ ಆಶಯ…
ರಘುರಾಜ್ ಹೆಚ್.ಕೆ…9449553305…