
ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ಮರ್ಕಾಜ್ ಸ್ಕೂಲ್ ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು ಆರು ವರ್ಷದ ಮೂರು ತಿಂಗಳ ಬಾಲಕನ ಭವಿಷ್ಯವನ್ನೇ ಬಲಿ ಪಡೆದ ಖ್ಯಾತಿಗೆ ಒಳಗಾಗಿದೆ.
ಏನಿದು ಘಟನೆ..?
ಕಳೆದ ತಿಂಗಳು 26ನೇ ತಾರೀಕು ಎಂದಿನಂತೆ ಸೈಯಾದ್ ಇಬ್ರಾಹಿಂ ಕೊಯಾ ಮತ್ತು ಕೈರ್ ಉನ್ನಿಸಾ ದಂಪತಿಗಳ ಹಿರಿಯ ಪುತ್ರ ಆರು ವರ್ಷದ ಮೂರು ತಿಂಗಳ ಮಗು ತಾಲೂಕಿನ ತ್ಯಾಗರ್ತಿಯ ಬಳಿ ಇರುವ ಮರ್ಕಾಜ್ ಸ್ಕೂಲ್ ಗೆ ಶಾಲೆಗೆ ಹೋಗಿದ್ದ ಆದರೆ ಆ ದಿನ ಅವ್ಯವಸ್ಥೆಯ ಆಗರವಾಗಿರುವ ಶಾಲೆಯ ಬಳಿ ಇರುವ ಡ್ರಮ್ಮಿನಲ್ಲಿ ಈ ಪುಟ್ಟ ಮಗು ಬಿದ್ದುಬಿಟ್ಟಿದೆ ಇದರಿಂದ ತುಂಬಾ ಗಲೀಜು ನೀರು ಕುಡಿದಿದ್ದಾನೆ. ಆದರೆ ಶಾಲೆಯ ಶಿಕ್ಷಕರು ಪ್ರಾಂಶುಪಾಲರು ಪುಟ್ಟ ಮಗು ಎನ್ನುವುದನ್ನು ನೋಡದೆ ಮಗುವಿಗೆ ಎರಡು ಪೆಟ್ಟುಕೊಟ್ಟು ಗದರಿಸಿ ಮನೆಗೆ ಕಳಿಸಿದ್ದಾರೆ. ಮನೆಗೆ ಬಂದ ನಂತರ ಮಗುವಿಗೆ ಜ್ವರ ಬಂದಿದೆ ಮಗುವಿನ ತಂದೆ ತಾಯಿ ಸಾಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಅಲ್ಲಿ ತಪಾಸನೆ ನಡೆಸಿದ ವೈದ್ಯರು ಒಂದಷ್ಟು ಚಿಕಿತ್ಸೆ ನೀಡಿ ಮನೆಗೆ ಕಳಿಸಿದ್ದಾರೆ.
ಆದರೆ ಪುನಃ ಜ್ವರ ಬಂದಾಗ ಮತ್ತೆ ವೈದ್ಯರಲ್ಲಿ ಕರೆದುಕೊಂಡು ಹೋಗಿದ್ದಾರೆ ಆಗ ವೈದ್ಯರು ಇದನ್ನು ಸ್ಕ್ಯಾನಿಂಗ್ ಮಾಡಿಸಿ ನೋಡೋಣ ಏನಾಗಿದೆ ಎಂದು ಹೇಳಿದ್ದಾರೆ.
ಅದೇ ರೀತಿ ಮಗುವಿನ ತಂದೆ ತಾಯಿ ಸ್ಕ್ಯಾನಿಂಗ್ ಮಾಡಿಸಿದ್ದಾರೆ ಸ್ಕ್ಯಾನಿಂಗ್ ಮಾಡಿದಾಗ ಮಗುವಿನ ಹೊಟ್ಟೆ ಒಳಗೆ ಒಂದಷ್ಟು ಗಲೀಜು ನೀರು ಇರುವುದು ಕಂಡುಬಂದಿದೆ ಕೂಡಲೇ ನೀವು ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಾಗರದ ಖಾಸಗಿ ಆಸ್ಪತ್ರೆಯವರು ಹೇಳಿದ್ದಾರೆ.
ಅದೇ ರೀತಿ ಮಗುವಿನ ಪೋಷಕರು ಸರ್ಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಮಗುವನ್ನು ತಪಾಸನೆ ನಡೆಸಿದ ಸರ್ಜಿ ಆಸ್ಪತ್ರೆಯವರು ಮಗುವಿನ ಹೊಟ್ಟೆ ಒಳಗೆ ಕಲುಷಿತ ನೀರು ಇದೆ ಇದನ್ನು ಆಪರೇಷನ್ ಮಾಡಿ ಹೊರ ತೆಗೆಯಬೇಕು ಎಂದು ಹೇಳಿದ್ದಾರೆ. ಮಗುವಿನ ಪೋಷಕರು ಸರ್ಜಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭಿಸಿದ ವೈದ್ಯರು ಮಗುವಿನ ಹೊಟ್ಟೆ ಒಳಗೆ ಒಂದಷ್ಟು ಕಲುಷಿತ ನೀರು ತುಂಬಿಕೊಂಡಿದೆ ಇದು ಹೇಗೆ ನಡೆದ ಘಟನೆ ಎಂದು ಕೇಳಿದ್ದಾರೆ. ಆಗ ಸ್ವತಃ ಮಗು ಘಟನೆಯನ್ನು ವಿವರವಾಗಿ ಮಣಿಪಾಲ್ ವೈದ್ಯರಿಗೆ ತಿಳಿಸಿದ್ದಾನೆ.
ಮಣಿಪಾಲ ವೈದ್ಯರು ಇದು ಪೊಲೀಸ್ ಕೇಸ್ ಆಗಬೇಕು ಎಂಎಲ್ಸಿ ಆಗದೆ ಚಿಕಿತ್ಸೆ ನೀಡುವಂತಿಲ್ಲ ಎಂದು ಹೇಳಿದ್ದಾರೆ. ಅದರಂತೆಯೇ ಪೋಷಕರು ಸಾಗರದ ಠಾಣೆಗೆ ಬಂದು ಕಂಪ್ಲೇಂಟ್ ನೀಡಿದ್ದಾರೆ. ಮಗುವಿನ ಪೋಷಕರು ಹೇಳುವ ಪ್ರಕಾರ ನಾವು ನೀಡಿದ ದೂರ ಬೇರೆ ಆದರೆ ಹಣದ ಆಸೆಗೆ ಬಿದ್ದ ಸಾಗರದ ಪೊಲೀಸರು ಅಪಘಾತಕ್ಕೆ ಹಾಕುವ ಸೆಕ್ಷನ್ ಗಳನ್ನು ಹಾಕಿ ಹಣ ತೆಗೆದುಕೊಂಡು ನಮಗೆ ಮೋಸ ಮಾಡಿದ್ದಾರೆ ಎಂದು ಹೇಳುತ್ತಾರೆ.
ನಂತರ ಠಾಣೆಯ ಒಂದು ಇಬ್ಬರು ಸಿಬ್ಬಂದಿಗಳು ಇದನ್ನು ಇಲ್ಲಿಗೆ ಬಿಟ್ಟುಬಿಡಿ ನಿಮಗೆ ಒಂದಷ್ಟು ಹಣ ಕೊಡಿಸುತ್ತೇವೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಪ್ರಕರಣ ಮುಚ್ಚಿ ಹಾಕುವ ಎಲ್ಲಾ ಪ್ರಯತ್ನಗಳು ನಡೆದಿದೆ ಎನ್ನುತ್ತಾರೆ ಪೋಷಕರು ಇಷ್ಟು ಸಾಲದೆಂಬಂತೆ ಶಾಲೆಯ ಆಡಳಿತ ಮಂಡಳಿಯವರು ಮಣಿಪಾಲ ಆಸ್ಪತ್ರೆಗೆ ಬಂದು ಆಸ್ಪತ್ರೆಯವರನ್ನು ಬುಕ್ ಮಾಡಿಕೊಂಡು ಪ್ರಕರಣವನ್ನು ತಿರುಚುವ ಪ್ರಯತ್ನ ನಡೆಸಿದ್ದಾರೆ ಎನ್ನುತ್ತಾರೆ ಪೋಷಕರು.
ನಂತರ ಆಡಳಿತ ಮಂಡಳಿಯವರು ಪೋಷಕರಿಗೆ ನಿಮ್ಮಿಂದ ನಮ್ಮನ್ನು ಏನೂ ಮಾಡಿಕೊಳ್ಳಲು ಆಗುವುದಿಲ್ಲ ಎಂದು ದಮ್ಕಿ ಹಾಕಿದ್ದಾರೆ ಎನ್ನುತ್ತಾರೆ ಪೋಷಕರು.
ಪೋಷಕರು ಈಗ ಮಾನವ ಹಕ್ಕುಗಳ ಆಯೋಗಕ್ಕೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಯೋಗಕ್ಕೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ವಿಷಯವನ್ನು ತರಲು ಮುಂದಾಗಿದ್ದಾರೆ.
ಈ ಪುಟ್ಟ ಮಗುವಿಗೆ ನ್ಯಾಯ ಸಿಗಬೇಕು ಈ ಮಗುವಿಗೆ ಆದಂತೆ ಬೇರೆ ಮಕ್ಕಳಿಗೆ ಆಗಬಾರದು ಎನ್ನುವುದು ಪೋಷಕರ ಅಳಲು..
ತಗ್ಗು , ಗುಂಡಿಗಳಿಂದ ಗಲೀಜು ವ್ಯವಸ್ಥೆಗಳಿಂದ ತುಂಬಿಕೊಂಡಿರುವ ಈ ಶಾಲೆಯಲ್ಲಿ ಮಕ್ಕಳು ಹೇಗೆ ಕಲಿಯುತ್ತಾರೆ ಈ ಶಾಲೆಗೆ ನಮ್ಮ ಮಗುವನ್ನು ಸೇರಿಸಿದ್ದೆ ನಮ್ಮ ದೊಡ್ಡ ತಪ್ಪು ಎನ್ನುತ್ತಾರೆ ಪೋಷಕರು…
ನಮ್ಮ ಮಗುವಿನ ಭವಿಷ್ಯವನ್ನೇ ಹಾಳು ಮಾಡಿದ ಶಾಲೆಯ ಆಡಳಿತ ಮಂಡಳಿಯವರನ್ನು ನಾವು ಸುಮ್ಮನೆ ಬಿಡುವುದಿಲ್ಲ ನಮಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಪತ್ರಿಕೆಯ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ…
ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲಿಯೇ ಇಂತದ್ದೊಂದು ಅಮಾನವೀಯ ಘಟನೆ ನಡೆದಿದೆ ಶಿಕ್ಷಣ ಸಚಿವರು ಕೂಡಲೇ ಸಂಬಂಧಪಟ್ಟ ಶಾಲೆ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು ಎನ್ನುವುದು ಪೋಷಕರ ಮನವಿ…
ರಘುರಾಜ್ ಹೆಚ್.ಕೆ…9449553305…