

ಶಿವಮೊಗ್ಗ: ಮೂಲತಃ ಜಿಲ್ಲೆಯ ಸಾಗರ ತಾಲೂಕಿನ ಜೋಗದ ವಾಸಿಯಾದ ಫ್ರಾನ್ಸಿಸ್ ಫರ್ನಾಂಡಿಸ್ ಶಿವಮೊಗ್ಗಕ್ಕೆ ಬಂದು 20 ವರ್ಷಗಳಾಗಿವೆ.
ಬಂದ ಶುರುವಿನಲ್ಲಿ ಅಸಿಸ್ಟೆಂಟ್ ಫಾದರ್ ಆಗಿ 10 ವರ್ಷಗಳ ಕಾಲ ಕಾರ್ಯನಿರ್ವಹಿಸಿ ನಂತರ ಮಲ್ಲಿಗೆ ಹಳ್ಳಿಯಲ್ಲಿ ಇರುವ ಧರ್ಮಧ್ಯಕ್ಷ ಬಿಷಪ್ ರವರ ಆದೇಶದ ಮೇರೆಗೆ ಪ್ರಿನ್ಸಿಪಾಲ್ ಆಗಿ ಆಯ್ಕೆಯಾಗುತ್ತಾರೆ .
ಸುಮಾರು 51 ವರ್ಷದ ಫ್ರಾನ್ಸಿಸ್ ಉತ್ತಮ ಸಿಂಗರ್ ಆಗಿದ್ದು ಬಯಾಲಜಿ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದರು. ಕಳೆದ 10 ವರ್ಷಗಳಿಂದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಫರ್ನಾಂಡಿಸ್ ಅಪ್ರಾಪ್ತ ಯುವತಿಯ ಮೇಲೆ ಲೈಂಗಿಕ ಕಿರುಕುಳ ನಡೆಸಿರುವ ಆರೋಪಕ್ಕೆ ಒಳಗಾಗಿದ್ದಾರೆ.
ಏನಿದು ಪ್ರಕರಣ… !
ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ 17 ವರ್ಷದ ಬಾಲಕಿಯೊಂದಿಗೆ ಪ್ರಾನ್ಸಿಸ್ ಮೊಬೈಲ್ ಪೋನ್ ನಲ್ಲಿ ಮೇಸೇಜ್ ಹಾಗೂ ಕಾಲ್ ಮಾಡುವುದು ಹಾಗೂ ಬಾಲಕಿಯ ಅಪ್ರಾಪ್ತ ವಯಸ್ಸಿನವಳೆಂದು ಹಾಗೂ ಹಿಂದುಳಿದ ಲಂಬಾಣಿ (ಬಂಜಾರ )ಜಾತಿಗೆ ಸೇರಿದವಳೆಂದು ಗೊತ್ತಿದ್ದರೂ ಸಹ ಆರೋಪಿ ಫ್ರಾನ್ಸಿಸ್ ಫರ್ನಾಂಡಿಸ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಫೆಬ್ರವರಿ 14/ 2023 ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನಾಚರಣೆ)ಯಂದು ಬಾಲಕಿಯನ್ನು ಫೋನ್ ಮೂಲಕ ತನ್ನ ಮನೆಗೆ ಕರೆಸಿಕೊಂಡು ಆಕೆಗೆ ಚಾಕ್ಲೇಟ್ ನೀಡಿ ತಬ್ಬಿಕೊಂಡು ಬಾಲಕಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿ ಲೈಂಗಿಕ ಕಿರುಕುಳ ನೀಡುತ್ತಾನೆ ನಂತರ ಬಾಲಕಿ ಫ್ರಾನ್ಸಿಸ್ ಗೆ ಫೋನ್ ನಲ್ಲಿ ಮೆಸೇಜ್ ಮಾಡಿ ಐ ಲವ್ ಯು ಎಂದು ಹೇಳುತ್ತಾಳೆ .ನಂತರ ಫ್ರಾನ್ಸಿಸ್ ಆಫೀಸ್ ಚೇಂಬರ್ ಗೆ ಹೋಗಿ ನನ್ನ ಜೊತೆ ನೀವು ಅನುಚಿತವಾಗಿ ವರ್ತನೆ ಮಾಡಿದ್ದೀರಾ ಎಂದಾಗ ಆರೋಪಿ ಪ್ರಾನ್ಸಿಸ್ ಅದನ್ನು ಒಪ್ಪಿಕೊಳ್ಳುತ್ತಾನೆ ಹಾಗಾದರೆ ನನ್ನನ್ನು ಮದುವೆಯಾಗಿ ಎಂದು ಆಕೆ ಕೇಳುತ್ತಾಳೆ ಆಗ ಪ್ರಾನ್ಸಿಸ್ ಮದುವೆ ಆಗುವುದಾಗಿ ಒಪ್ಪಿಕೊಳ್ಳುತ್ತಾನೆ ಆದರೆ ನಂತರದಲ್ಲಿ ನಾವು ಮದುವೆಯಾಗುವುದು ಬೇಡ ನಿನ್ನ ಬೆನ್ನೆಲುಬಾಗಿ ಇರುತ್ತೇನೆ ಎಂದು ಹೇಳುತ್ತಾನೆ ಹೀಗೆ ಇವರ ಸಂಪರ್ಕ ನಿರಂತರವಾಗಿ ನಡೆದುಕೊಂಡು ಹೋಗಿರುತ್ತದೆ.
ಈ ವಿಷಯ ಆ ಬಾಲಕಿಯ ತಾಯಿಗೆ ಒಂದು ದಿನ ಗೊತ್ತಾಗುತ್ತದೆ ತಾಯಿಗೆ ಗೊತ್ತಾದ ಮೇಲೆ ಮಗಳು ಎಲ್ಲಿ ಫ್ರಾನ್ಸಿಸ್ ಫರ್ನಾಂಡಿಸ್ ಅವರ ಮರ್ಯಾದೆ ಹಾಳಾಗುತ್ತದೆಯೋ ಎನ್ನುವ ಭಯದಿಂದ ಆ ಬಾಲಕಿ ತಾನು ವಾಸವಿದ್ದ ಹಾಸ್ಟೆಲ್ ನಲ್ಲಿ ಕಟರ್ ನಿಂದ ಎಡಗೈನ ಮುಂಗೈಯನ್ನು ಕುಯ್ದುಕೊಂಡಿರುತ್ತಾಳೆ. ನಂತರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ದಾಖಲಿಸುತ್ತಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೋಟೆ ಠಾಣೆಯ ಪೊಲೀಸರು ಪೋಕ್ಸೋ ಕಾಯ್ದೆ ಯಡಿ ಲೈಂಗಿಕ ಕಿರುಕುಳ ಪ್ರಕರಣ ದಾಖಲು ಮಾಡಿದ್ದು ಹಾಗೇ ಬಾಲಕಿ ಹಿಂದುಳಿದ ಜನಾಂಗಕ್ಕೆ ಸೇರಿದವಳು ಆದ್ದರಿಂದ ಜಾತಿ ನಿಂದನೆ ಪ್ರಕರಣ ಕೂಡ ದಾಖಲು ಮಾಡಿದ್ದಾರೆ.
ಪ್ರಾನ್ಸಿಸ್ ಫರ್ನಾಂಡಿಸ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ಹಾಗೂ ಜಾತಿನಿಂದಲೇ ಪ್ರಕರಣ ದಾಖಲಿಸಿರುವ ಕೋಟೆ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ .
ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಮುಂದಿನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ, ಆದೇಶಿಸಿದ್ದಾರೆ.
ಫ್ರಾನ್ಸಿಸ್ ಫರ್ನಾಂಡಿಸ್ ವಿರುದ್ಧ ಇನ್ನೊಂದಷ್ಟು ಸುದ್ದಿಗಳು ಹರಿದಾಡುತ್ತಿದ್ದು ಅದು ನಿಜವೋ ಅಥವಾ ಸುಳ್ಳು ಎನ್ನುವ ತನಿಖೆಯಲ್ಲಿ ಪತ್ರಿಕೆ ಇದೆ ಮುಂದಿನ ದಿನಗಳಲ್ಲಿ ಪತ್ರಿಕೆ ಆ ಸುದ್ದಿಗಳನ್ನು ಕೂಡ ಸಮಗ್ರ ದಾಖಲೆಗಳೊಂದಿಗೆ ಸಂಗ್ರಹ ಮಾಡಿ ಓದುಗರ ಮುಂದೆ ಇಡಲಿದೆ ಯಾರಿಗಾದರೂ ಯಾವುದಾದರೂ ಮಾಹಿತಿ ಇದ್ದರೆ ಪತ್ರಿಕೆಯನ್ನು ಸಂಪರ್ಕಿಸಬಹುದು.
ಅಸಿಸ್ಟೆಂಟ್ ಫಾದರ್ ಆಗಿ ಬಂದು ನಂತರ ಪ್ರಿನ್ಸಿಪಾಲಾಗಿ ಕಾರ್ಯ ನಿರ್ವಹಿಸುತ್ತಿದ್ದ ಫ್ರಾನ್ಸಿಸ್ ಫರ್ನಾಂಡಿಸ್ ತನ್ನ ವಿದ್ಯಾರ್ಥಿಯ ಮೇಲೆ ಲೈಂಗಿಕ ಕಿರುಕುಳ ಹಾಗೂ ಜಾತಿನಿಂದನೆ ಮಾಡಿ ಅನುಚಿತವಾಗಿ ವರ್ತನೆ ಮಾಡಿರುವುದು ಆ ಸ್ಥಾನಕ್ಕೆ ಅವಮಾನ ಮಾಡಿದಂತೆ…
ಪ್ರಾನ್ಸಿಸ್ ಫರ್ನಾಂಡಿಸ್ ವಿರುದ್ಧ ಹಲವು ಸಂಘಟನೆಗಳು ಬೀದಿಗಿಳಿಯಲು ಸಜ್ಜಾಗಿವೆ ಈಗಾಗಲೇ ಬಂಜಾರ ಸಮುದಾಯದವರು ಫ್ರಾನ್ಸಿಸ್ ಫರ್ನಾಂಡಿಸ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ .ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳುತ್ತಿದ್ದಾರೆ… ಇದೆ ಶನಿವಾರ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ…
ಮುಗ್ಧ ಹೆಣ್ಣು ಮಕ್ಕಳು ಸಹ ಇಂಥವರ ಸಹವಾಸ ಮಾಡುವ ಮುನ್ನ ಯೋಚನೆ ಮಾಡಬೇಕು.. ಏಕೆಂದರೆ ನಿಮ್ಮನ್ನೇ ನಂಬಿ ನಿಮ್ಮ ತಂದೆ ತಾಯಿಗಳು ಇರುತ್ತಾರೆ… ನೆನಪಿರಲಿ…
ರಘುರಾಜ್ ಹೆಚ್.ಕೆ…9449553305….