
ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಕೊಠಾರಿ ಜಾತಿಗೆ ಸೇರಿದ 16 ವರ್ಷ 05 ತಿಂಗಳು ತುಂಬಿರುವ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಮಹಮ್ಮದ್ ಮುಜಾಪುರ್ ಅಲಿಯಾಸ್ @ ಮುಜುಬಿನ್ ಮೆಹಬೂಬ್ ಆಲಿ ಎನ್ನುವ 28 ವರ್ಷದ ಮುಸ್ಲಿಂ ಜಾತಿಗೆ ಸೇರಿದ ವೆಲ್ಡಿಂಗ್ ಕೆಲಸ ಮಾಡುವ ಸೋಮವಾರಪೇಟೆ ಮೂಡುಗೊಪ್ಪ ಗ್ರಾಮ ಹೊಸನಗರ ತಾಲೂಕಿನಲ್ಲಿ ಹಾಲಿ ವಾಸವಾಗಿರುವ ಮೂಲತಃ ಹಾವೇರಿ ಜಿಲ್ಲೆಯ ಕೊರಟಗೆರೆ ಓಣಿಯ ಹುಬ್ಬಳ್ಳಿ ರಸ್ತೆ ಹಾನಗಲ್ ನಿವಾಸಿಯಾದ ಮಹಮ್ಮದ್ ಮುಜಾಫರ್ 16 ವರ್ಷದ ಒಂಬತ್ತನೇ ತರಗತಿ ವಿದ್ಯಾರ್ಥಿಯನ್ನು ನಂಬಿಸಿ ಆಕೆಯ ಜೊತೆ ನಿರಂತರವಾಗಿ ಲೈಂಗಿಕ ಸಂಪರ್ಕ ಇಟ್ಟುಕೊಂಡು ಗರ್ಭಿಣಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ..
ಏನಿದು ಪ್ರಕರಣ..?!
ಹೊಸನಗರ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ತಂದೆ ತಾಯಿ ಮೀನು ಹಿಡಿಯುವ ಕೆಲಸ ಮಾಡುತ್ತಿದ್ದು ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಆರೋಪಿ ಮಹಮ್ಮದ್ ಮುಜಾಫರ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಬಾಲಕಿಯ ತಂದೆ ತಾಯಿಯ ಪರಿಚಯವನ್ನು ಮಾಡಿಕೊಳ್ಳುತ್ತಾನೆ. ಎರಡು ವರ್ಷಗಳಿಂದ ನಿರಂತರವಾಗಿ ಬಾಲಕಿಯ ತಂದೆ ತಾಯಿಯ ಜೊತೆ ಪರಿಚಯದಲ್ಲಿ ಇರುತ್ತಾನೆ. ಹೀಗೆ ಪರಿಚಯವಾದಾಗ ದಿನನಿತ್ಯ ಮನೆಗೆ ಬಂದು ಹೋಗುತ್ತಿದ್ದ ಮಹಮದ್ ಮುಜಫರ್ ಆ ದಂಪತಿಗಳ ಮಗಳ ಜೊತೆ ಮಾತನಾಡುತ್ತಾ ನಿನ್ನ ಜೊತೆ ನಾನು ಮದುವೆಯಾಗುತ್ತೇನೆ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳುತ್ತಾನೆ.
ಆದರೆ ಆ ಬಾಲಕಿ ನನಗಿನ್ನು 18 ವರ್ಷ ತುಂಬಿಲ್ಲ ನಾನಿನ್ನು ಚಿಕ್ಕವಳು ಎಂದು ಹೇಳುತ್ತಾಳೆ ಆದರೂ ಮುಜಾಫರ್ ದಿನಾಂಕ 12 /4 /2023 ರಂದು ಬಾಲಕಿಯ ತಂದೆ ತಾಯಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ನಿನ್ನ ಪ್ರೀತಿಸುತ್ತಿದ್ದೇನೆ ನಿನ್ನನ್ನೇ ಮದುವೆಯಾಗುತ್ತೇನೆ ಇಂದು ಪುಸಲಾಯಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ನಡೆಸುತ್ತಾನೆ.
ನಂತರ ಹಲವು ಬಾರಿ ಹೀಗೆ ನಿರಂತರವಾಗಿ ದೈಹಿಕ ಸಂಪರ್ಕ ನಡೆಸುತ್ತಾನೆ ಇದು ಹೀಗೆ ಮುಂದುವರೆದಾಗ ಆ ಬಾಲಕಿಗೆ ತಿಂಗಳ ಮುಟ್ಟಾಗದೆ ಇದ್ದಾಗ ಪ್ರೆಗ್ನೆನ್ಸಿ ಮೆಡಿಕಲ್ ಕಿಟ್ ತೆಗೆದುಕೊಂಡ ಆ ಬಾಲಕಿ ಚೆಕ್ ಮಾಡಿದಾಗ ತಾನು ಗರ್ಭಿಣಿ ಆಗಿರುವುದು ದೃಢಪಟ್ಟಿತು ಆಕೆಗೆ, ನಂತರ ಅದನ್ನು ಮುಜಾಫರ್ ಗೆ ತಿಳಿಸಿದಾಗ ಯಾವುದಾದರೂ ಹತ್ತಿರದ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರೋಣ ಎಂದು ಹೇಳುತ್ತಾನೆ.
ಅದಕ್ಕೆ ಆ ಬಾಲಕಿ ಹತ್ತಿರದ ಆಸ್ಪತ್ರೆಗೆ ಹೋದರೆ ನನ್ನ ತಂದೆ ತಾಯಿಗೆ ವಿಷಯ ಗೊತ್ತಾಗಬಹುದು ಎಂದು ತಿಳಿಸುತ್ತಾಳೆ ಅದಕ್ಕೆ ಮುಜಫರ್ ನನ್ನ ಊರಾದ ಹಾನಗಲ್ ಗೆ ಹೋಗಿ ತೋರಿಸೋಣ ಎಂದು ಹೇಳುತ್ತಾನೆ. ಹೀಗೆ ಅವರ ತಾಯಿಯೊಂದಿಗೆ ದಿನಾಂಕ 18.07.2023 ರಂದು ಹೊಸನಗರದಿಂದ ಹೊರಟು ಹಾನಗಲ್ಗೆ ಹೋಗಿ ಆಸ್ಪತ್ರೆಯಲ್ಲಿ ಚೆಕ್ ಮಾಡಿಸಿದಾಗ ಆಕೆ ಗರ್ಭಿಣಿ ಅನ್ನೋದು ವೈದ್ಯರಿಗೆ ತಿಳಿಯುತ್ತದೆ ನಂತರ ವೈದ್ಯರು ಈಕೆಯ ವಯಸ್ಸೆಷ್ಟು ಎಂದು ಕೇಳುತ್ತಾರೆ ಅದಕ್ಕೆ 16 ವರ್ಷ 5 ತಿಂಗಳು ಎಂದಾಗ ವೈದ್ಯರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಆ ಬಾಲಕಿಯನ್ನು ತಾಯಿಯ ಜೊತೆಯಲ್ಲಿ ಆಸ್ಪತ್ರೆಯಲ್ಲಿ ಇರಿಸಿಕೊಂಡು ನಗರಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಆಕೆ ಅಪ್ರಾಪ್ತೇ 18 ವರ್ಷ ತುಂಬಿಲ್ಲ ಎನ್ನುವುದು ಗೊತ್ತಿದ್ದೂ ಕೂಡ ಆಕೆಯೊಂದಿಗೆ ನಿರಂತರವಾಗಿ ಲೈಂಗಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿದ ಆರೋಪದ ಮೇಲೆ ಮಹಮ್ಮದ್ ಮುಜಾಫರ್ ವಿರುದ್ಧ ಫೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿ ಹೊಸನಗರ ಪೊಲೀಸರು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಿದ್ದಾರೆ ನಂತರ ಜೈಲಿಗೆ ಕಳುಹಿಸಲಾಗಿದೆ…
ರಘುರಾಜ್ ಹೆಚ್.ಕೆ..9449553305…