
ಶಿವಮೊಗ್ಗ: ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯ ಅಧಿಕ್ಷಕರಾಗಿ ಕಳೆದ ಮೂರು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಇ ಏನ್ ಟಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ/ ಶ್ರೀಧರ್ ಅಧಿಕ ಪ್ರಭಾರದಿಂದ ಮುಕ್ತಿಗೊಳಿಸಿದ್ದು .ಅವರ ಜಾಗಕ್ಕೆ ಡಾ/ ಟಿ, ಡಿ ತಿಮ್ಮಪ್ಪ ಸಹ ಪ್ರಾಧ್ಯಾಪಕರು ಇಎನ್‌ಟಿ ವಿಭಾಗ ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ಅಧಿಕ ಪ್ರಭಾರದಲ್ಲಿರಿಸಿ ಆದೇಶಿಸಲಾಗಿದೆ.
ಈ ಹಿಂದೆ 21.07.2020 ರಲ್ಲಿ ಅಧಿಕ ಪ್ರಭಾರದಲ್ಲಿ ಕಾರ್ಯ ನಿರ್ವಹಿಸುವಂತೆ ಆದೇಶಿಸಿ ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆದು ಇಎನ್‌ಟಿ ವಿಭಾಗದ ಶ್ರೀಧರ್ ಅವರ ಆದೇಶವನ್ನು ರದ್ದುಗೊಳಿಸಲಾಗಿದೆ.
ಆರೋಪಗಳ ನಡುವೆಯೂ ಡಾಕ್ಟರ್ ಶ್ರೀಧರ್ ಕಾರ್ಯ ಮೆಚ್ಚುವಂತದ್ದು :
ಇ ಏನ್ ಟಿ ವಿಭಾಗದ ಸಹಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾಕ್ಟರ್ ಶ್ರೀಧರ್ ಕಳೆದ ಮೂರು ವರ್ಷಗಳ ಹಿಂದೆ ಮೆಗ್ಗಾನ್ ಆಸ್ಪತ್ರೆಯ ಅಧಿಕ್ಷಕರಾಗಿ ಅಧಿಕ ಪ್ರಭಾರಿಯಾಗಿ ನೇಮಕಗೊಂಡಿದ್ದರು. ಅಧಿಕಾರ ವಹಿಸಿಕೊಂಡ ನಂತರ ಹಲವು ಮಹತ್ತರ ಬದಲಾವಣೆಗಳನ್ನು ಆಸ್ಪತ್ರೆಯ ವಾತಾವರಣದಲ್ಲಿ ತಂದರು ಯಾವುದೇ ಜಾತಿ ಬೇಧ ಮತ ಭಾವನೆಗಳು ಇಲ್ಲದೆ ಪ್ರತಿಯೊಬ್ಬರಿಗೂ ಸ್ಪಂದಿಸುತ್ತಿದ್ದ ಡಾ. ಶ್ರೀಧರ್ ಕೋವಿಡ್ ನಂತಹ ಭೀಕರ ಸಮಯದಲ್ಲಿ ಹಗಲು ರಾತ್ರಿ ಎನ್ನದೆ ಇದ್ದ ಸೌಲಭ್ಯಗಳನ್ನೇ ಉಪಯೋಗಿಸಿಕೊಂಡು ಕಾರ್ಯನಿರ್ವಹಿಸಿ ಎಲ್ಲರಿಗೂ ಸ್ಪಂದಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಗಲು ರಾತ್ರಿ ಎನ್ನದೇ ಯಾವಾಗ ಕರೆ ಮಾಡಿದರು ಸ್ಪಂದಿಸುವ ಗುಣ ಹೊಂದಿದ ಶ್ರೀಧರ್ ಹಲವು ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕರ, ಪ್ರಗತಿಪರ ಚಿಂತಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮೆಗ್ಗಾನ್ ಆಸ್ಪತ್ರೆಯಂತಹ ದೊಡ್ಡ ಹಡಗಿನಲ್ಲಿ ಪ್ರಯಾಣ ಅಷ್ಟು ಸುಲಭವಲ್ಲ ಭ್ರಷ್ಟಾಚಾರವೇ ತುಂಬಿ ತುಳುಕುತ್ತಿರುವ ಆಸ್ಪತ್ರೆಯ ಆವರಣದಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡುವುದು ಅಷ್ಟು ಸುಲಭ ಸಾಧ್ಯವಲ್ಲ ಆ ನಿಟ್ಟಿನಲ್ಲಿ ಶ್ರೀಧರ್ ಪ್ರಯತ್ನ ಪಡುತ್ತಿದ್ದರು . ಡಾಕ್ಟರ್ ಶ್ರೀಧರ್ ಮೇಲೆ ಕೂಡ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು ಆದರೆ ಆ ಆರೋಪಗಳ ನಡುವೆಯೂ ಅವರ ಕಾರ್ಯ ಮೆಚ್ಚುವಂತದ್ದು ಎರಡು ಕೋವಿಡ್ ಸಮಯದಲ್ಲಿ ಇವರು ಮಾಡಿದ ಕಾರ್ಯ ನಿಜಕ್ಕೂ ಶ್ಲಾಘನೀಯ ಹಲವರು ಇದನ್ನು ಒಪ್ಪಿಕೊಳ್ಳುತ್ತಾರೆ.
ಈಗ ಸರ್ಕಾರದ ಆದೇಶದ ಮೇರೆಗೆ ಅವರನ್ನು ಆ ಸ್ಥಾನದಿಂದ ಮುಕ್ತಿಗೊಳಿಸಲಾಗಿದೆ ಈಗ ಆ ಸ್ಥಾನಕ್ಕೆ ಬಂದಿರುವ ನೂತನ ಅಧೀಕ್ಷಕರಿಗೆ ಸಾಕಷ್ಟು ಸವಾಲುಗಳಿವೆ ಆ ಸವಾಲುಗಳನ್ನು ಮೆಟ್ಟಿನಿಂತು ಕಾರ್ಯ ನಿರ್ವಹಿಸುತ್ತಾರಾ..?! ಭ್ರಷ್ಟಾಚಾರವೇ ತುಂಬಿ ತುಳುಕುತ್ತಿರುವ ಆಸ್ಪತ್ರೆಯ ಆವರಣವನ್ನು ಸರಿಪಡಿಸುತ್ತಾರ..?! ಸಾಕಷ್ಟು ಸೌಲಭ್ಯಗಳು ಇದ್ದರೂ ಉಪಯೋಗಿಸಿದೆ ಹಾಗೆ ಬಿಟ್ಟಿರುವುದನ್ನು ಪುನಂ ಪ್ರಾರಂಭಿಸಿ ರೋಗಿಗಳಿಗೆ ಅನುಕೂಲ ಮಾಡಿಕೊಡುತ್ತಾರ..?! ಹೀಗೆ ಹತ್ತು ಹಲವು ಸಮಸ್ಯೆಗಳ ನಡುವೆ ಅಧಿಕಾರ ವಹಿಸಿಕೊಂಡಿರುವ ನೂತನ ಅಧೀಕ್ಷಕರ ಮುಂದೆ ಸಾಕಷ್ಟು ಸವಾಲುಗಳಿವೆ ಅದನ್ನು ಹೇಗೆ ನಿರ್ವಹಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕು…
ಎಲ್ಲಕ್ಕಿಂತ ಮುಖ್ಯವಾಗಿ ಸ್ಪಂದನೆ ಯಾವುದೇ ಸಮಯದಲ್ಲಿ ಅಧಿಕಾರಿಗಳಾಗಲಿ, ಪತ್ರಕರ್ತರಾಗಲಿ, ಸಾಮಾಜಿಕ ಹೋರಾಟಗಾರರಾಗಲಿ ,ಸಾರ್ವಜನಿಕರಾಗಲಿ, ಕರೆ ಮಾಡಿದರೆ ಸ್ವೀಕರಿಸಿ ಮಾತನಾಡಿ ಸ್ಪಂದಿಸಿ ಅವರ ಸಮಸ್ಯೆ ಬಗೆಹರಿಸುವ ಗುಣ ಹೊಂದಿರಬೇಕು ಆ ದಿಕ್ಕಿನಲ್ಲಿ ನೂತನ ಅಧೀಕ್ಷಕರು ಕಾರ್ಯನಿರ್ವಹಿಸಿ ಮೆಗ್ಗಾನ್ ಆಸ್ಪತ್ರೆಯನ್ನು ಉತ್ತಮ ಗುಣಮಟ್ಟದ ಆಸ್ಪತ್ರೆಯಾಗಿ ಪರಿವರ್ತಿಸಲಿ ಎನ್ನುವುದು ನಮ್ಮ ಆಶಯ…
ರಘುರಾಜ್ ಹೆಚ್.ಕೆ..9449553305…