
ನಿರಂತರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಧಾ ಸುದ್ದಿಯಲ್ಲಿರುವ ಗ್ರಾಮೀಣ ಪ್ರತಿಭೆಗಳನ್ನು ಸೇರಿದಂತೆ ಹಲವು ಕವಿಗಳಿಗೆ ಸಾಹಿತಿಗಳಿಗೆ ಒಂದೊಳ್ಳೆ ಸದಾವಕಾಶವನ್ನು ನೀಡುವ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಜಾಗೃತಿ ಟ್ರಸ್ಟ್ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡುವುದರ ಮೂಲಕ ಕನ್ನಡ ತೇರನ್ನು ಎಳೆಯುತ್ತಿರುವ ಜಾಗೃತಿ ಟ್ರಸ್ಟ್ 25 ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯನ್ನು ಆಚರಿಸುತ್ತಿದೆ.
ಇದರ ವಿಶೇಷವಾಗಿ ಎಂ ,ಎಸ್ ನರಸಿಂಹಮೂರ್ತಿಯವರ
ಹುಟ್ಟುಹಬ್ಬ ಆಚರಣೆ ಮಾಡುವುದರ ಮೂಲಕ ನಗೆ ಹಬ್ಬ,
ಕೆಂಪಮ್ಮ ಪುರಸ್ಕಾರ ,ಸಾಧಕರಿಗೆ ಸನ್ಮಾನ, ಕವಿಗೋಷ್ಠಿ ,ಸಾಂಸ್ಕೃತಿಕ ಕಾರ್ಯಕ್ರಮಗಳು , ಸೇರಿದಂತೆ ಅದ್ದೂರಿಯಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಅಕ್ಟೋಬರ್ 20 ರಂದು ನಡೆಯಲಿದ್ದು ನೂರು ಕವಿತೆಗಳನ್ನು ಒಳಗೊಂಡ ಕಾವ್ಯ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು.
ಆಸಕ್ತ ಕವಿಗಳು ಹಾಗೂ ಕವಯತ್ರಿಯರಿಂದ ಕವಿತೆಗಳನ್ನು ಆಹ್ವಾನಿಸಲಾಗಿದೆ.
ಕಾರ್ಯಕ್ರಮಕ್ಕೆ ಸಾಹಿತಿಗಳು, ಕನ್ನಡ ಅಭಿಮಾನಿಗಳಿಗೂ , ಸರ್ವರಿಗೂ ಸ್ವಾಗತವಿದೆ.
ಸರ್ವರು ಸಾಹಿತ್ಯದ ಸವಿರುಚಿಯನ್ನು ಸವಿಯಬಹುದು.
ಕನ್ನಡಾಂಬೆಯ ಪ್ರಣತೆಯನ್ನು ಹಚ್ಚಲು ಒಂದೊಳ್ಳೆ ಸುವರ್ಣ ಅವಕಾಶ ಬನ್ನಿ ಎಲ್ಲರೂ ಸೇರಿ
ಕನ್ನಡ ತಾಯಿಯ ತೇರನ್ನು ಎಳೆಯೋಣ
ಸಹಬಾಳ್ವೆ ಭಾವೈಕ್ಯತೆಯಲ್ಲಿ ಸಂಭ್ರಮಿಸೋಣ ಎಂದು ಸಂಸ್ಥಾಪಕ ಅಧ್ಯಕ್ಷರಾದ ಬಿ ನಾಗೇಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕೆಳಗಿನ ವಿಳಾಸಕ್ಕೆ ಕವಿತೆಗಳನ್ನು ಕಳುಹಿಸಬೇಕು. ಅಂಚೆಯ ಮುಖಾಂತರ …
ಬಿ ನಾಗೇಶ್
ಅಕ್ಕಿತಿಮ್ಮನಹಳ್ಳಿ ಶಾಂತಿನಗರ
ಬೆಂಗಳೂರು 560027 ..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9590939909… ಜಾಗೃತಿ ಟ್ರಸ್ಟ್….