
ರಾಜ್ಯದಲ್ಲಿ ಮತ್ತೆ ಮದ್ರಾಸ್ ಐ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿದ್ದು ಇದನ್ನು ಕಂಜಕ್ಟಿವೈಟಿಸ್ ಪ್ರಕರಣ ಎಂದು ಸಹ ಕರೆಯುತ್ತಾರೆ.
ಮದ್ರಾಸ್ ಐ ಯಾವ ಸಮಯದಲ್ಲಿ ಬರುತ್ತದೆ..?!
ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಅಥವಾ ಚಳಿಯಿಂದಾಗಿ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಬೀರುತ್ತವೆ ಇಂತಹ ಸಂದರ್ಭದಲ್ಲಿ ಬರುವುದು ಸಹಜ ಎನ್ನುತ್ತಾರೆ ತಜ್ಞ ವೈದ್ಯರು…
ಮದ್ರಾಸ್ ಐ ಲಕ್ಷಣಗಳು :
ಕಣ್ಣು ಕೆಂಪಗಾಗುವುದು
ಕಣ್ಣಿನಿಂದ ನೀರು ಸೋರುವುದು
ಕಣ್ಣಿನ ತುರಿಕೆ
ನಿರಂತರವಾಗಿ ಕಣ್ಣು ನೋವು, ಚುಚ್ಚಿದಂತಹ ಅನುಭವ
ದೃಷ್ಟಿ ಮಂಜಾಗುವುದು
ಬೆಳಕು ನೋಡಲು ಸಾಧ್ಯವಾಗದ ಸ್ಥಿತಿ
ಕಣ್ಣಿನ ಎರಡು ರೆಪ್ಪೆಗಳಲ್ಲಿ ಕೀವು ಮಿಶ್ರಿತದಿಂದ ಕೂಡಿರುವುದು..
ಈ ಮೇಲಿನ ಲಕ್ಷಣಗಳು ಕಂಡು ಬಂದರೆ ಮದ್ರಾಸ್ ಐ ಆಗಿರುವುದು ಗ್ಯಾರಂಟಿ ಎಂದಾಗುತ್ತದೆ.
ಮದ್ರಾಸ್ ಐ ಬಂದಾಗ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳು :
ಸ್ವಚ್ಛತೆಯಿಂದ ಇರಬೇಕು.
ಸೋಂಕು ಇರುವ ವ್ಯಕ್ತಿಯ ನಡುವೆ ಕಣ್ಣಿನ ನೇರ ಸಂಪರ್ಕ ಮಾಡಬಾರದು.
ಮದ್ರಾಸ್ ಐ ಸೋಂಕಿತ ವ್ಯಕ್ತಿ ಬಳಸುವ ಕರವಸ್ತ್ರ, ಇನ್ನಿತರ ವಸ್ತುಗಳನ್ನು ಬಳಸಬಾರದು.
ಸೋಪು ನೀರಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು.
ಸೋಂಕಿತ ವ್ಯಕ್ತಿಗೆ ಜ್ವರ, ಶೀತ, ಕೆಮ್ಮು ಇದ್ದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು
ಸೋಂಕು ತೀವ್ರವಾಗಿದ್ದರೆ ನೇತ್ರತಜ್ಞರನ್ನು ಭೇಟಿಯಾಗಬೇಕು.
ಸ್ವಚ್ಚವಾದ ನೀರಿನಿಂದ ಕಣ್ಣುಗಳನ್ನು ಶುಚಿಗೊಳಿಸಿ
ಸೋಂಕು ಕಂಡುಬಂದ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಿರಿ
ಸೋಂಕಿತರು ಪೌಷ್ಠಿಕ ಆಹಾರ ಸೇವಿಸಬೇಕು
ಕರವಸ್ತ್ರ, ಇತರ ವಸ್ತ್ರಗಳನ್ನು ಸಂಸ್ಕರಿಸಿ ಬಳಸಬೇಕು.
ಪದೇ ಪದೇ ಕಣ್ಣುಗಳನ್ನು ಮುಟ್ಟಬಾರದು…. ಎನ್ನುತ್ತಾರೆ ತಜ್ಞ ವೈದ್ಯರು….