
ಸಾಗರ, ದ್ವೀಚಕ್ರ ವಾಹನವನ್ನು ಕಳವು ಮಾಡಿದ ಆರೋಪಿಯನ್ನು ಬಂಧಿಸಿದ ಸಾಗರ ನಗರ ಠಾಣೆಯ ಪೋಲೀಸ್
ಆರೋಪಿತನಿಂದ ಸುಮಾರು 40,000/ರೂ ಮೌಲ್ಯದ ದ್ವೀಚಕ್ರ ವಾಹನ ಜಪ್ತಿ..
ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 30/07/2023 ರಂದು ಸಾಗರ ಪಟ್ಟಣದ ಉಳವಿ ಸೊರಬ ರಸ್ತೆಯಲ್ಲಿ ಇರುವ ಮನೆಯೊಂದರ ಪಕ್ಕದಲ್ಲಿ ನಿಲ್ಲಿಸಿದ ಬೈಕ್ ಕಳ್ಳತನವಾಗಿರುವ ಬಗ್ಗೆ ಸಾಗರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೈಕ್ ಪತ್ತೆ ಸಲುವಾಗಿ ಮಿಥುನ್ ಕುಮಾರ್ ಐಪಿಎಸ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಮತ್ತು ಅನಿಲ್ ಕುಮಾರ್ ಭೂಮ್‌ರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ರವರು ಬೈಕ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲು ಆದೇಶಿಸಿದ ಮೇರೆಗೆ ರೋಹನ್ ಜಗದೀಶ್ ಐಪಿಎಸ್ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು ಸಾಗರ ಉಪ ವಿಭಾಗ ಸಾಗರ ಮತ್ತು ಸಾಗರ ಪೇಟೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸೀತಾರಾಂ ಜೆ ಬಿ. ಹಾಗೂ ಪ್ರಭಾರ ಇನ್ಸ್‌ಪೆಕ್ಟರ್ ಕೆ.ವಿ ಕೃಷ್ಣಪ್ಪ ರವರ ಮಾರ್ಗದರ್ಶನದಲ್ಲಿ ಸಾಗರ ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಪತಿ ಗಿನ್ನಿ ನೇತೃತ್ವದಲ್ಲಿ ಸಾಗರ ಟೌನ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂಧಿಗಳಾದ ಹೆಚ್.ಸಿ. 85 ಶ್ರೀ ರತ್ನಾಕರ್, ಸಿಪಿಸಿ, 1066 ಪ್ರಭಾಕರ್ ಕೆ.ಸಿ, ಸಿಪಿಸಿ 1455 ಶ್ರೀಧರ್, ಸಿಪಿಸಿ 1154 ನಾಗರಾಜ್ ನಾಯ್ಕ, ಮತ್ತು ಸಿಪಿಸಿ: 1691 ವಿಶ್ವನಾಥ ಡಿ ಕೆ ರವರನ್ನು ಒಳಗೊಂಡ ತಂಡ
ದಿ:31-07-2023 ರಂದು ಆರೋಪಿತನಾದ ಸೈಯದ್ ಸೈಯದ್ ಅಬ್ದುಲ್ ಖಾದರ್ @ ಕಲಂದರ್ ಬಿನ್ ಸೈಯದ್ ಹನೀಫ್ 22 ವರ್ಷ, ಮುಸ್ಲಿಂ ಜನಾಂಗ, ಗಾರೆ ಕೆಲಸ, ವಾಸ 3ನೇ ಕ್ರಾಸ್ ಜಂಡೆಕಟ್ಟೆ, ಜೆ.ಪಿ ನಗರ ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ ಆಲೋ ಪಿತ ಸುಮಾರು 40,000/ ಮೌಲ್ಯದ ಅಮಾನತ್ತುಪಡಿಸಿಕೊಂಡು ಹಿರೋ ಸ್ಪೆಂಡರ್ ಬೈಕ್ ಅನ್ನು ಆರೋಪಿತನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಓಂಕಾರ ಎಸ್. ವಿ. ತಾಳಗುಪ್ಪ….