
ಪರವಾನಿಗೆ ಪಡೆದಿದ್ದೂ ಕೆಳ ಅಂತಸ್ತಿನಲ್ಲಿ ಗೃಹ ನಿರ್ಮಾಣಕ್ಕೆ – ಕಟ್ಟಡ ನಿರ್ಮಾಣ ಮಾಡುತ್ತಿರುವುದು ವಾಣಿಜ್ಯ ಸಂಕಿರ್ಣ – ಅದೂ ನೆಲ ಅಂತಸ್ತು ಸೇರಿ 03 ಅಂತಸ್ತು – ಇತ್ತ ಕಾರ್ಮಿಕ ನಿಧಿಗೂ ದೋಖಾ ಅತ್ತ ಗ್ರಾಮ ಪಂಚಾಯಿತಿ ಆದಾಯಕ್ಕೂ ದೋಖಾ – ಅಕ್ರಮಕ್ಕೆ, ಸರ್ಕಾರದ ಭೋಕ್ಕಸಕ್ಕೆ ತೀವ್ರ ನಷ್ಟವಾಗಲು ಕ್ಷೇತ್ರ ಪಾಲಕ ಆಂಜನೇಯನ ಸಾಥ್……!?
ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ತಾಳಗುಪ್ಪ ಗ್ರಾಮ ಪಂಚಾಯಿತಿಯಲ್ಲಿಯೂ ಕೂಡ ಇದೇ ರೀತಿಯ ಪ್ರಕರಣಗಳು ಮಿತಿ ಮೀರಿದ್ದು, ಮನೆ ಕಟ್ಟುಲು ಅದರಲ್ಲೂ ನೆಲ ಅಂತಸ್ತು ನಿರ್ಮಿಸಲು ಮಾತ್ರಾ ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಪಡೆದು ವಾಣಿಜ್ಯ ಮಳಿಗೆಗಳನ್ನೂ ಒಂದರ ಮೇಲ್ಲೊಂದರಂತೆ ನೆಲ ಅಂತಸ್ತು ಸೇರಿ 4 ಅಂತಸ್ತು ಕಟ್ಟಡ ನಿರ್ಮಿಸುತ್ತಿದ್ದೂ, ಅದರಲ್ಲೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೆಲ ಅಂತಸ್ತು ಸೇರಿ 2 ಅಂತಸ್ತು ಕಟ್ಟಲು ಅನುಮತಿಯನ್ನೂ ಪಂಚಾಯತ್ ರಾಜ್ ಅಧಿ ನಿಯಮದಲ್ಲಿ ಆದೇಶವಿದ್ದರೂ, ತಾಳಗುಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಾತ್ರಾ ಅಕ್ರಮವಾಗಿ ನೆಲ ಅಂತಸ್ತು ಸೇರಿ 04 ಅಂತಸ್ತು ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದರೂ, ವಾಹನ ನಿಲುಗಡೆಗಾಗಿ ಕೆಳ ಅಂತಸ್ತು ಮೀಸಲಿಡದೇ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸುತ್ತಿದ್ದರೂ ಕುಂಭ ಕರ್ಣ ನಿದ್ರೆಯಲ್ಲಿ ತಾಳಗುಪ್ಪ ಗ್ರಾಮ ಪಂಚಾಯಿತಿ ಆಡಳಿತ….. ಸಾಗರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿಯ ಮೇಲುಸ್ತುವಾರಿ ನೋಡಿಕೊಳ್ಳಲು ಸರ್ಕಾರಿ ವಾಹನ ನೀಡಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಆಗಿದೆ ಸಾಗರ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಥೆ ವ್ಯಥೆ…
ಓಂಕಾರ ಎಸ್. ವಿ. ತಾಳಗುಪ್ಪ….