Wednesday, April 30, 2025
Google search engine
Homeರಾಜ್ಯಕಲೆ, ಸಂಸ್ಕೃತಿ ಹಾಗೂ ಸಾಮಾಜ ಸೇವೆಯಲ್ಲಿ ಅರಳುತಿದೆ "ಕುಸುಮಾ ಫೌಂಡೇಶನ್" ಬೈಂದೂರು : ಆ ಕಟ್ಟಡದೊಳಕ್ಕೆ...

ಕಲೆ, ಸಂಸ್ಕೃತಿ ಹಾಗೂ ಸಾಮಾಜ ಸೇವೆಯಲ್ಲಿ ಅರಳುತಿದೆ “ಕುಸುಮಾ ಫೌಂಡೇಶನ್” ಬೈಂದೂರು : ಆ ಕಟ್ಟಡದೊಳಕ್ಕೆ ಕಾಲಿಟ್ಟಾಗ ಒಂದು ಕ್ಷಣ ನೀವು ದಂಗಾದರೆ ಆಶ್ಚರ್ಯವಿಲ್ಲ. ಕಲೆ, ಸಾಹಿತ್ಯ, ಸಂಸ್ಕ್ರತಿಯ ಅನಾವರಣದ ಸಾಮ್ರಾಜ್ಯ ಈ ‌ಸಂಕೀರ್ಣ…..

ಕುಂದಾಪುರದಿಂದ ಸುಮಾರು 25ಕಿ.ಮೀ ದೂರದ ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಗೆ ವಿರುಧ್ಧ ದಿಕ್ಕಿನಲ್ಲಿ ಇರುವ ಮೂರು ಮಳಿಗೆಗಳ ಆ ಸಂಕೀರ್ಣದ ಹೆಸರು “ಹಿಲ್ ವಿವ್”.
ಈ ಕಟ್ಟಡದ ಮೊದಲ ಹಾಗೂ ಎರಡನೆಯ ಮಳಿಗೆಗಳು ಕಲೆ ಹಾಗೂ ಸಂಸ್ಕೃತಿಯಿಂದ‌ ಅನಾವರಣಗೊಂಡು ಆಧರದ ಸ್ವಾಗತ ನೀಡುತ್ತಿದೆ‌.

ಈ‌ ಕಟ್ಟಡದೊಳಗೆ ಸಂಗೀತ, ನ್ರತ್ಯ, ಚಿತ್ರಕಲೆ, ತಬಲವಾದಕ ಹೀಗೆ ಹಲವಾರು ಕಲೆಗಳನ್ನು ಆಸಕ್ತರಿಗೆ ಧಾರೆಯೆರೆಯಲಾಗುತ್ತಿದೆ. ಅಷ್ಟೆ ಅಲ್ಲದೇ, ಕಸುಮಾ ಫೌಂಡೇಶನ್ ಎನ್ನುವ ಚಾರಿಟೇಬಲ್ ಟ್ರಸ್ಟ್‌ನ ಮೂಲಕ ಸರ್ಕಾರಿ ಶಾಲೆಯ ಅಭಿವೃದ್ಧಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡವರಿಗೆ ಸನ್ಮಾನ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಯಲ್ಲಿ ‌ತೋಡಗಿಸಿಕೊಳ್ಳುವುದಲ್ಲದೆ ನಾಡಿನ ಹೆಸರಾಂತ ವ್ಯಕ್ತಿಗಳಿಂದ ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಕೆಲಸವನ್ನೂ ಅನೇಕ ವರ್ಷಗಳಿಂದ ಸಂಸ್ಥೆಯು ನಿರಂತರವಾಗಿ ಮಾಡುತ್ತಾ ಬಂದಿದೆ.

ಈ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ನಳಿನ್ ಕುಮಾರ ಶೆಟ್ಟಿ ಅವರು ವ್ರತ್ತಿಯಲ್ಲಿ ಇಂಜಿನಿಯರ್ ಆದರೂ ನಾಡಿನ ಕಲೆ ಹಾಗೂ ಸಂಸ್ಕ್ರತಿಯಲ್ಲಿ‌ ಅವರ ಆಸಕ್ತಿ ಹಾಗೂ ಶ್ರದ್ಧೆ ಅಪಾರ‌. ತನ್ನ ಸಂಪಾದನೆಯ ಕೆಲ ಭಾಗವನ್ನು ಸಾಮಾಜಿಕ‌ ಸೇವೆಗಾಗಿ ಮೀಸಲಿಟ್ಟು ಹಲವಾರು ಸಮಾಜಿಕ ಸೇವೆಗಳಲ್ಲಿ‌ ನಿತ್ಯ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ‌. ಅಲ್ಲದೇ ಇವರು ತಮ್ಮ ಕಾರ್ಯಗಳನ್ನು ಎಂದೂ ಪ್ರಚಾರಕ್ಕೆ ಬಳಸಿಕೊಳ್ಳದೆ ಯಾರಿಂದಲೂ ಸನ್ಮಾನ,ಗೌರವದ ಅಷೇಕ್ಷೆಯನ್ನೂ ಮಾಡದೇ ಸಮಾಜ ಸೇವೆ ಪ್ರತಿಯೊಬ್ಬರ ಸಾಮಾಜಿಕ‌ ಜವಾಬ್ದಾರಿ ಎಂದು ಹೇಳುವ ಮೂಲಕ ನಿಸ್ವಾರ್ಥ ಸೇವೆಗೆ ನೈಜ ನಿದರ್ಶನವಾಗಿದ್ದಾರೆ.

ಸಂಸ್ಥೆಯು “ಕುಸುಮಾಂಜಲಿ” ಎನ್ನುವ ಕಾರ್ಯಕ್ರಮದ ಮೂಲಕ ನಾಡಿನ ಹೆಸರಾಂತ ಗಣ್ಯರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಜೀವನ ಮೌಲ್ಯಗಳನ್ನು ತಿಳಿಸಿಕೊಡುವ ಕಾರ್ಯಕ್ರಮಗಳನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಈ ಕಾರ್ಯಕ್ರಮದಲ್ಲಿ ಸುಪ್ರೀಮ್ ಕೋರ್ಟ್‌ನ ನಿವ್ರತ್ತ ನ್ಯಾಯ‌ಮೂರ್ತಿಗಳಾದ ಶ್ರೀ ಸಂತೋಷ ಹೆಗ್ಗಡೆ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ,ಮೋಹನ್ ಆಳ್ವ, ಹೆಸರಾಂತ ಗೀತರಚನೆಕಾರ ಶ್ರೀ ಜಯಂತ ಕಾಯ್ಕಿಣಿ, ಮಂಗಳೂರು ಆಕಾಶವಾಣಿಯ ನಿರ್ದೇಶಕರಾದ ಡಾ,ವಸಂತ ಕುಮಾರ ಪೇರ್ಲ, ಕಟೀಲು ಎಸ್‌ಡಿಪಿಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ, ಎಂ ಬಾಲಕ್ರಷ್ಣ ಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದಾರೆ.

ಕಣ್ಮನ ಸೆಳೆಯುವ ಕುಂಚ ಕಲೆ.
ಕುಸುಮಾ ಫೌಂಡೇಶನ್ ವತಿಯಿಂದ ಸಂಗೀತ, ನ್ರತ್ಯ, ತಬಲವಾದಕದ ಜೊತೆಗೆ ಚಿತ್ರಕಲೆಯ ತರಬೇತಿಯನ್ನು ನೀಡಲಾಗುತ್ತದೆ. ಸಂಸ್ಥೆಯು ಸುಂದರವಾದ ಆರ್ಟ್ ಗ್ಯಾಲರಿಯನ್ನು ಹೊಂದಿದ್ದು ಕಲಾವಿದರ ಕುಂಚ ಕಲೆ ಕಣ್ಮನ ಸೆಳೆಯುತ್ತದೆ. ಈ ಸುಂದರ ಚಿತ್ರಗಳ ಖರೀದಿಗೂ ಅವಕಾಶವಿದ್ದು ಆಸಕ್ತರು ಕೊಂಡು ತಮ್ಮ ಮನೆ,ಕಛೇರಿಯ ಸ್ಥಳಗಳಿಗೆ ಮತ್ತಷ್ಟು ಮೆರಗು ನೀಡಬಹುದು…

ᐃ “ಬ್ಲೋಸಮ್” ಮೂಲಕ‌ ಹಾಡು ಕುಣಿತ.
ಸಂಸ್ಥೆಯು “ಬ್ಲೋಸಮ್” ಎನ್ನುವ ಸಂಗೀತ ಹಾಗೂ ನ್ರತ್ಯ ಶಾಲೆಯ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮವಾದ ತರಬೇತಿಯನ್ನು ನೀಡುತ್ತಿದ್ದು. ಇಲ್ಲಿ ತರಬೇತಿ ಪಡೆದ ಹಲವಾರು ವಿದ್ಯಾರ್ಥಿಗಳು ರಾಜ್ಯಾದ್ಯಂತ ಅನೇಕ ಪ್ರದರ್ಶನಗಳನ್ನು ನೀಡಿ ಕಲಾ ಆರಾಧಕರಿಂದ ಅಪಾರ ಮೆಚ್ಚುಗೆಯನ್ನು ಪಡೆದಿದ್ದಾರೆ.

ᐃ ಸರ್ಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿ
ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿರುವುದು ಕಳವಳದ ಸಂಗತಿಯಾಗಿದ್ದು, ಅಳಿವಿನ ಅಂಚಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ಆಭಿಯಾನದಲ್ಲಿ ಎಲ್ಲರೂ ಕೈಜೋಡಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಸ್ಥಳೀಯ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದು ಶಾಲೆಗೆ ಅಗತ್ಯ ಮೂಲಭೂತ ಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಕೆಲಸದಲ್ಲಿ‌ ಕುಸುಮಾ ಫೌಂಡೇಶನ್ ಯಶಸ್ವಿಯಾಗಿದೆ. ಕೇವಲ ಶಾಲೆಯಷ್ಟೇ ಅಲ್ಲದೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಎಲ್ಲಾ ರೀತಿಯ ನೆರವುಗಳನ್ನು ನೀಡುವಲ್ಲಿ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ.

ಚಿಣ್ಣರ ಚಿಲಿಪಿಲಿಗೆ ಸಮ್ಮರ್ ಕ್ಯಾಂಪ್
ಸಮ್ಮರ್ ಕ್ಯಾಂಪ್‌ಗಳು ಮಕ್ಕಳ ಮನೋವಿಕಾಸಕ್ಕೆ ಸಹಕಾರಿ. ಪ್ರತಿ ದಿನ ಕೇವಲ ಶೈಕ್ಷಣಿಕ ವಿಚಾರಗಳ ಸುತ್ತ ಸುತ್ತುತ್ತಿದ್ದ ಮನಸ್ಸಿಗೆ, ಹಿತಕಾರಕ ಎನ್ನಿಸುವ ಸರಳ ಚಟುವಟಿಕೆಗಳು, ಹೊಸ ಹುರುಪು ಸಮ್ಮರ್ ಕ್ಯಾಂಪ್ ನೀಡುತ್ತದೆ. ಗುಂಪು ಚಟುವಟಿಕೆಗಳ ಮೂಲಕ ಮಕ್ಕಳಿಗೆ ಹೇಗೆ ಇತರರೊಡನೆ ಬೆರೆಯಬೇಕು- ಉಳಿದವರೊಡನೆ ಒಟ್ಟಾಗಿ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ತಿಳಿಸಿಕೊಡಲಾಗುತ್ತದೆ. ಮುಖ್ಯವಾಗಿ ಶಿಕ್ಷಣದ ಜೊತೆ ಜೀವನ ಕೌಶಲ್ಯ ಹಾಗೂ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ಮಕ್ಕಳಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಇದು ಜೀವನದ ಹಾದಿಯಲ್ಲಿ ಮಕ್ಕಳಿಗೆ ಹೊಸ ದಾರಿಗಲ್ಲಾಗುತ್ತದೆ.

ಮರೆಯಾಗುತ್ತಿರು ನಮ್ಮ ಸಂಸ್ಕ್ರತಿಯನ್ನುವ ಉಳಿಸುವುದು ಹಾಗೂ ಕಲೆಯನ್ನು ಬೆಳೆಸುವ ಮುಖ್ಯ ಉದ್ದೇಶದಿಂದ ಕುಸುಮಾಂಜಲಿ ಫೌಂಡೇಶನ್ ಕೆಲಸ ಮಾಡುತ್ತಿದೆ. ಮಕ್ಕಳಲ್ಲಿ ಕ್ಷೀಣಿಸುತ್ತಿರುವ ಜೀವನ ಮೌಲ್ಯಗಳ ಮಹತ್ವವನ್ನು ಮನವರಿಕೆ ಮಾಡಿಕೊಡುವ ಹಾಗೂ ಅವರ ಸಾಮಾಜಿಕ ಕರ್ತವ್ಯ ಹಾಗೂ ಬದ್ಧತೆಯನ್ನು ತಿಳಿಸಿಕೊಡುವ ದೊಡ್ಡ ಜವಾಬ್ದಾರಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ. ಈ‌ ಕೆಲಸಕ್ಕೆ ನೆರವು ನೀಡುತ್ತಿರುವ ಸಂಸ್ಥೆಯ ಎಲ್ಲಾ ಸದಸ್ಯರಿಗೆ ಧನ್ಯವಾದಗಳು. – ನಳಿನ್ ಕುಮಾರ್ ಶೆಟ್ಟಿ
ಮ್ಯಾನೇಜಿಂಗ್ ಟ್ರಸ್ಟಿ.

ಸಂಪರ್ಕಕ್ಕಾಗಿ :
Kusuma Foundation
Hillview Complex, N.H.66, Nagoor, Byndoor Tq., Udupi Dist. Karnataka-576219
📱: 9483130844, 9483916833.
Website: kusumafoundation.com
ಕಲೆ, ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವಲ್ಲಿ ಕುಸುಮ ಫೌಂಡೇಶನ್ ಕಾರ್ಯ ನಿರಂತರವಾಗಿ ಸಾಗಲಿ. ಅವರ ಸಾಮಾಜಿಕ‌ ನೆರವು ಅನೇಕರಿಗೆ ಸಿಗುವಂತಾಗಲಿ. ಸಂಸ್ಥೆಯ ಸಮಾಜಮುಖಿ ಕಾರ್ಯಗಳಲ್ಲಿ ಮತ್ತಷ್ಟು ಜನ ಜೊತೆಯಾಗಲಿ.

ನಾಗೇಂದ್ರ ಉಪ್ಪುಂದ.

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...