

ತೀರ್ಥಹಳ್ಳಿ: ಶಿವಮೊಗ್ಗದಿಂದ ಫಾರ್ಚುನರ್ ಕಾರಿನಲ್ಲಿ ಸುಮಾರು 200 ಗ್ರಾಂ ಗಾಂಜಾ ತರುತ್ತಿದ್ದ ಯೂಸುಫ್ ಖಾನ್ , ಅತೀಫ್, ಮನೋಜ್ ಎನ್ನುವ ಮೂವರು ತೀರ್ಥಹಳ್ಳಿ ಮೂಲದ ಯುವಕರನ್ನು ಖಚಿತ ಮಾಹಿತಿಯ ಮೇರೆಗೆ ತೀರ್ಥಹಳ್ಳಿಯ ಯುವ ಡಿವೈಎಸ್ಪಿ ಗಜಾನನಾ ವಾಮನ್ ಸುತಾರ್ ಅವರ ಮಾರ್ಗದರ್ಶನದಲ್ಲಿ ಮಾಲೂರು ಠಾಣೆಯ ನವೀನ್ ಮಠಪತಿ ಅವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳು ಸೇರಿ ಕಾರನ್ನು ತಡೆದು ಪರಿಶೀಲಿಸಿದಾಗ 200 ಗ್ರಾಂ ಗಾಂಜಾ ಪತ್ತೆಯಾಗಿದೆ. ಹಾಗೆ ಫಾರ್ಚುನರ್ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಈ ಮೂವರನ್ನು ಗಾಂಜಾ ಸೇವನೆ ಪರೀಕ್ಷೆಗೆ ಒಳಪಡಿಸುವ ತಯಾರಿಯಲ್ಲಿದ್ದು ನಂತರ ಕೇಸ್ ದಾಖಲಿಸುವ ಸಾಧ್ಯತೆ ಇದೆ.
ಮೂಲತ ಕುರಿ ವ್ಯಾಪಾರಿಯಾದ ಯೂಸುಫ್ ಖಾನ್ ಈ ದಂಧೆಯನ್ನು ಹಲವು ದಿನಗಳಿಂದ ಮಾಡುತ್ತಿದ್ದ ಎನ್ನುವ ಅನುಮಾನ ಪೊಲೀಸ್ ಇಲಾಖೆಗೆ ಇದೆ ಆದರೆ ಈತ ಸಿಕ್ಕಿಕೊಂಡಿರಲಿಲ್ಲ. ಈಗ ಬಂದ ಖಚಿತ ಮಾಹಿತಿಯ ಮೇರೆಗೆ ಸಿಕ್ಕಿಬಿದ್ದಿದ್ದಾರೆ. ಇವರ ಇನ್ನಷ್ಟು ಮಾಹಿತಿಗಳನ್ನು ಪೊಲೀಸ್ ಇಲಾಖೆ ಕಲೆ ಹಾಕುತ್ತಿದ್ದು ಇವರ ಈ ಗಾಂಜಾ ಜಾಲ ಇನ್ನಷ್ಟು ಕಡೆ ಹಬ್ಬಿರುವ ಸಾಧ್ಯತೆ ಇದೆ.
ಗಾಂಜಾ ಹಿಡಿಯುವಲ್ಲಿ ತೀರ್ಥಹಳ್ಳಿ ಪೊಲೀಸರ ಪಾತ್ರ ಮೆಚ್ಚುವಂತದ್ದು :
ಗಾಂಜಾ ಹಿಡಿಯುವಲ್ಲಿ ತೀರ್ಥಹಳ್ಳಿ ಪೊಲೀಸರು ಫುಲ್ ಅಲರ್ಟ್ ಆಗಿದ್ದು ಇತ್ತೀಚಿಗೆ ಕೋಣಂದೂರು ಭಾಗದಲ್ಲಿ ಗಾಂಜಾ ಬೆಳೆಯುತ್ತಿದ್ದ ತೋಟವನ್ನು ಖಚಿತ ಮಾಹಿತಿಯ ಮೇರೆಗೆ ವಶಪಡಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು…
ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರವು ಗಾಂಜಾ ಮಟ್ಟ ಹಾಕುವಲ್ಲಿ ಬಹಳ ಮುಖ್ಯ ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಕೂಡ ಮಾಹಿತಿ ನೀಡಬಹುದು… ಅಂತವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎನ್ನುತ್ತಾರೆ ತೀರ್ಥಹಳ್ಳಿಯ ಯುವ ಡಿವೈಎಸ್ಪಿ ಗಜಾನನ್ ವಾಮನ್ ಸುತಾರ್…
ರಘುರಾಜ್ ಹೆಚ್.ಕೆ..9449553305….