
ಶಿವಮೊಗ್ಗ: ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆಯಾಗಿ ಎಲ್ಲೆಡೆ ಸುದ್ದಿ ಆಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಈಗ ಅದಕ್ಕೆ ಹೊಸ ಸೇರ್ಪಡೆ ನಗರದ ಕೋಟೆ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಇರುವ ಸಾರ್ವಜನಿಕ ಉದ್ಯಾನವನ್ನು ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆಯ ಅನುದಾನದಲ್ಲಿ ನಿರ್ಮಿಸಿದ್ದಾರೆ
ಆದರೆ ಕಳಪೆ ಕಾಮಗಾರಿಯಿಂದಾಗಿ ಹಂಚುಗಳು ಕಿತ್ತೋಗಿ ಚಲ್ಲಾಪಿಲ್ಲಿಯಾಗಿ ಮೇಲಿಂದ ಬೀಳುತ್ತಿವೆ ಸರಿಯಾಗಿ ಹಂಚು ಜೋಡಿಸಿದೆ ಆಟವಾಡಲು ಬರುವ ಸಣ್ಣ ಮಕ್ಕಳು ಹಾಗೂ ವೃದ್ಧರು ಬೆಳಗ್ಗೆ ಹಾಗೂ ಸಾಯಂಕಾಲ ವಾಕಿಂಗ್ ಮಾಡುವವರ ಮೇಲೆ ಬಿದ್ದು ಜೇವ ಹಾನಿಯಾದರೆ ಯಾರು ಹೊಣೆ. ಸಂಬಂಧಪಟ್ಟ ಅಧಿಕಾರಿಗಳು ವಾರ್ಡ್ ನಂಬರ್ 13 ಅರಮನೆ ಪ್ರದೇಶದ ಮಹಾನಗರ ಪಾಲಿಕೆಯ ಸದಸ್ಯ ಪ್ರಭು ಹಾಗೂ ಶಾಸಕರಾದ ಚನ್ನಬಸಪ್ಪನವರು ಇತ್ತ ಗಮನಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ಕೋಟೆ ಗೆಳೆಯರ ಬಳಗ ವಿನಂತಿಸಿದೆ.
ರಘುರಾಜ್.ಹೆಚ್.ಕೆ…9449553305…