
ತೀರ್ಥಹಳ್ಳಿ : ವಿಹಂಗಮ ರೆಸಾರ್ಟ್ ನಲ್ಲಿ ಹಲವು ವರ್ಷಗಳಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ವಿದೇಶಿ ಮಧ್ಯಗಳ ಸರಬರಾಜು, ಕಾಡುಪ್ರಾಣಿಗಳ ಕೊಂಬು ಮಾರಾಟದ ಬಗ್ಗೆ ಅಲ್ಲಲ್ಲಿ ಗುಸು ಗುಸು ಪಿಸು ಪಿಸು ಮಾತುಗಳು ನಡೆಯುತ್ತಿದ್ದವು.
ತೀರ್ಥಹಳ್ಳಿ ಪೊಲೀಸ್ ಇಲಾಖೆಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ,
ಗಜಾನನ ವಾಮನ ಸುತಾರ ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ ಮತ್ತು ಅಶ್ವತ್ ಗೌಡ ಪೋಲಿಸ್ ನಿರೀಕ್ಷಕರು ತೀರ್ಥಹಳ್ಳಿ ಪೊಲೀಸ್ ಠಾಣೆ ರವರ ನೇತೃತ್ವದ ಸಾಗರ್ ಅತ್ತರವಾಲ ಪೊಲೀಸ್ ಉಪನಿರೀಕ್ಷಕರು ತೀರ್ಥಹಳ್ಳಿ ಪೊಲೀಸ್ ಠಾಣೆ, ನವೀನ್ ಕುಮಾರ್ ಮಠಪತಿ ಪೊಲೀಸ್ ಉಪನಿರೀಕ್ಷಕರು ಮಾಳೂರು ಪೊಲೀಸ್ ಠಾಣೆ, ರಂಗನಾಥ ಅಂತರಗಟ್ಟಿ ಪೋಲಿಸ್ ಉಪನಿರೀಕ್ಷಕರು ಆಗುಂಬೆ ಪೊಲೀಸ್ ಠಾಣೆ, ಪ್ರವೀಣ್, ಪೊಲೀಸ್ ಉಪ ನಿರೀಕ್ಷಕರು, ರಿಪ್ಪನ್ ಪೇಟೆ ಪೊಲೀಸ್ ಠಾಣೆ ಹಾಗೂ 50 ಜನ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡ ತಂಡವು ನಿನ್ನೆ ಅಂದರೆ ದಿನಾಂಕ : 12-08-2023 ರಂದು ರಾತ್ರಿ ಸ್ಥಳಕ್ಕೆ ಹೋಗಿ ವಿಹಂಗಮ ರೆಸಾರ್ಟ್ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 1) ಅಂದಾಜು ಮೌಲ್ಯ 1,00,000/- ರೂಗಳ ಒಂದು ಡಬಲ್ ಬ್ಯಾರಲ್ ಬಂದೂಕು, 2) ಅಂದಾಜು ಮೌಲ್ಯ 25,000 /- ರೂಗಳ 310 ಜೀವಂತ ಗುಂಡುಗಳು 3) ಒಂದು ಕತ್ತಿ ಮತ್ತು ಒಂದು ಚಾಕು 4) ಮೂರು ಕಾಡು ಕೋಣದ ಕೊಂಬಿನ ಟ್ರೊಫಿ, 5) ಆರು ಜಿಂಕೆ ಕೊಂಬಿನ ಟ್ರೊಫಿ, 6) ಒಂದು ಸಿಸಿ ಟಿವಿ ಡಿವಿ ಆರ್ 7) ಅಂದಾಜು ಮೌಲ್ಯ 7,650/- ರೂ ಗಳ ಒಟ್ಟು 51 ಬಿಯರ್ ಟಿನ್ ಗಳು, 8) ಅಂದಾಜು ಮೌಲ್ಯ 1,00,000/- ರೂ ಗಳ ಮದ್ಯ ತುಂಬಿದ ಬಾಟಲ್ ಗಳು 9) ಅಂದಾಜು ಮೌಲ್ಯ 750/- ರೂ ಗಳ ಒಟ್ಟು 6 Breezer ಬಾಟಲ್ ಮತ್ತು 10) 3 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ದಕ್ಷ ಪ್ರಾಮಾಣಿಕ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜೆ ಕೆ ಅವರ ಆದೇಶದ ಮೇರೆಗೆ ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ್ ವಾಮನ್ ಸುತಾರ್ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಪೊಲೀಸ್ ಇಲಾಖೆ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ .
ರಘುರಾಜ್ ಹೆಚ್.ಕೆ…9449553305…