Wednesday, April 30, 2025
Google search engine
Homeಶಿವಮೊಗ್ಗಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗಳ ಜಂಟಿ ಪರಿವೀಕ್ಷಣೆಗೆ ದಿನಾಂಕ ನಿಗದಿ..!

ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗಳ ಜಂಟಿ ಪರಿವೀಕ್ಷಣೆಗೆ ದಿನಾಂಕ ನಿಗದಿ..!


ಶಿವಮೊಗ್ಗ,: ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಪ್ಯಾಕೇಜ್‌ಗಳಲ್ಲಿ ಆಯ್ದ ವಾರ್ಡ್ಗಳಲ್ಲಿ ರಸ್ತೆ, ಚರಂಡಿ, ಫುಟ್‌ಪಾತ್, ಪಾರ್ಕ್, ಬಸ್ ಶೆಲ್ಟರ್, ಕನ್ಸರ್‌ವೆನ್ಸಿ, ಸರ್ಕಲ್ ಅಭಿವೃದ್ಧಿ, ಶೌಚಾಲಯ ಇತ್ಯಾದಿಗಳ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಎಲ್ಲಾ ನಿರ್ಮಾಣ ಕಾಮಗಾರಿಗಳನ್ನು ಹಸ್ತಾಂತರಿಸಲು ಶಿವಮೊಗ್ಗ ಮಹಾನಗರ ಪಾಲಿಕೆಯು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಜಂಟಿ ಪರಿವೀಕ್ಷಣೆಯನ್ನು ನಡೆಸಿ, ನ್ಯೂನ್ಯತೆ ಇದ್ದಲ್ಲಿ ಸರಿಪಡಿಸಿಕೊಂಡು ಹಸ್ತಾಂತರಿಸಿಕೊಳ್ಳಲು ನಿರ್ಣಯಿಸಿದೆ.


ಪ್ರಾಥಮಿಕ ಹಂತವಾಗಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿ., ವತಿಯಿಂದ ಅಳವಡಿಸಲಾಗಿರುವ ಭೂಗತ ಕೇಬಲ್, ಬೀದಿ ದೀಪದ ಕಂಬಗಳ ಸಂಬಂಧ ಮೆಸ್ಕಾಂ, ಶಿವಮೊಗ್ಗ ಮಹಾನಗರ ಪಾಲಿಕೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಇತರೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳು, ವಾರ್ಡ್ ಸದಸ್ಯರುಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗುತ್ತಿಗೆದಾರರ ಸಮ್ಮುಖದಲ್ಲಿ ಆ. 22 ರಿಂದ 25ರವರೆಗೆ ಬೆಳಗ್ಗೆ 10.00 ರಿಂದ ಮ.12.00ರವರೆಗೆ ಜಂಟಿ ಸ್ಥಳ ಪರಿಶೀಲನೆ, ಸಮೀಕ್ಷೆ ನಡೆಸಿ ನ್ಯೂನ್ಯತೆ ಗುರುತಿಸಿ ನಂತರದ ದಿನದಲ್ಲಿ ಸರಿಪಡಿಸಿಕೊಳ್ಳಲು ತೀರ್ಮಾನಿಸಿದೆ.
ಆ.22 ರಂದು ದುರ್ಗಿಗುಡಿ, ಸವರ್‌ಲೈನ್‌ರಸ್ತೆ ದೇವಸ್ಥಾನದ ಹತ್ತಿರ, ಗಾರ್ಡನ್‌ಏರಿಯಾ, ಗೌರವ್ ಲಾಡ್ಜ್ ಎದುರುಗಡೆ, ಗಾರ್ಡನ್ ಏರಿಯಾ ಸ್ಕಾçಪ್ ಷಾಪ್ ಎದುರುಗಡೆ, ಜ್ಯೂಯಲ್‌ರಾಕ್ ರಸ್ತೆ, ಪಂಚಮುಖಿ ಆಂಜನೇಯ ದೇವಸ್ಥಾನದ ಹತ್ತಿರ, ಮಿಷನ್ ಕಾಂಪೌಂಡ್, ಖಾಸಗಿ ಬಸ್ ನಿಲ್ದಾಣದ ಎದುರು.
ಆ. 23 ರಂದು ಜೈಲ್‌ರಸ್ತೆ, ಎಎನ್‌ಕೆ ರಸ್ತೆ, ವೆಂಕಟೇಶ್‌ನಗರ, ಗಾಂಧಿನಗರ, ಚೆನ್ನಪ್ಪ ಲೇಔಟ್, ರವೀಂದ್ರನಗರ, ಅಚ್ಯುತರಾವ್ ಲೇಔಟ್, ಗಾಂಧಿನಗರ ಮುಖ್ಯರಸ್ತೆ, ಶರಾವತಿನಗರ, ಹೊಸಮನೆ, ಕುವೆಂಪುರಸ್ತೆ, ಲಾಸ್ಟ್ ಮೈಲ್ ಕನೆಕ್ಟಿವಿಟಿ.
ಆ.24ರಂದು ಜಯನಗರ, ಬಸವನಗುಡಿ, ವಿನಾಯಕನಗರ, ಹನುಮಂತನಗರ, ಎ.ಎ.ಕಾಲೋನಿ.
ಆ.25 ರಂದು ಸೋಮಯ್ಯ ಲೇಔಟ್, ಬಾಪೂಜಿನಗರ, ಟ್ಯಾಂಕ್‌ಮೊಹಲ್ಲಾ, ಕೋಟೆರಸ್ತೆ, ಸಿಎಲ್ ರಾಮಣ್ಣ ರಸ್ತೆ, ಎಸ್‌ಪಿಎಂ ರಸ್ತೆ, ಗುಂಡಪ್ಪ ಶೆಡ್, ಶೇಷಾದ್ರಿಪುರಂ

ಈ ಎಲ್ಲಾ ಪ್ರದೇಶಗಳ ಸಾರ್ವಜನಿಕರು, ಸಂಘಸಂಸ್ಥೆಗಳು ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿ., ನಿಂದ ನಿರ್ವಹಿಸಿದ ಭೂಗತ ಕೇಬಲ್, ಬೀದಿದೀಪ ಕಂಬಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿರ್ಧಿಷ್ಟ ದೂರು, ಸಮಸ್ಯೆ ಇದ್ದಲ್ಲಿ ಲಿಖಿತವಾಗಿಯಾಗಲೀ ಅಥವಾ ಪರಿಶೀಲನೆ ದಿನ ಸೂಚಿತ ಸಮಯದಂದು ಸ್ಥಳದಲ್ಲಿ ಹಾಜರಿದ್ದಾಗಲಿ ಪರಿವೀಕ್ಷಣೆಗೆ ಸಹಕರಿಸುವಂತೆ ಸ್ಮಾರ್ಟ್ ಸಿಟಿ ಲಿ., ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ….

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...