
ಶಿವಮೊಗ್ಗ: ನಗರದ ವಾರ್ಡ್ ನಂಬರ್ 13ರ ವ್ಯಾಪ್ತಿಗೆ ಒಳಪಡುವ ಕೋಟೆ ರಸ್ತೆಯ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಹತ್ತಿರ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣವಾದ ಉದ್ಯಾನವನದ ಶೆಟರ್ ನ್ ಹಂಚುಗಳು ಬೀಳುತ್ತಿದ್ದು ವೃದ್ಧರು, ಮಕ್ಕಳು, ಇದರಿಂದ ಭಯಭೀತರಾಗಿದ್ದರು. ಇದನ್ನು ಕೂಡಲೇ ಸರಿಪಡಿಸುವಂತೆ ಕೋಟೆ ಗೆಳೆಯರ ಬಳಗ , ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಹೇಳಿ ಸರಿಪಡಿಸುವಂತೆ ಶಾಸಕರಾದ ಚನ್ನಬಸಪ್ಪನವರು ಹಾಗೂ ಸ್ಥಳೀಯ ಕಾರ್ಪೊರೇಟರ್ ಪ್ರಭು ಅವರಿಗೆ ಪತ್ರಿಕೆ ಮೂಲಕ ಮನವಿ ಮಾಡಿತ್ತು…
ಸುದ್ದಿಗೆ ಸ್ಪಂದಿಸಿರುವ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಬಿದ್ದೋಗುತ್ತಿದ್ದ ಹಂಚುಗಳನ್ನು ಜೋಡಿಸಿ ಮುಂದೆ ಆಗಬೇಕಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ..
ಉದ್ಯಾನವನದಲ್ಲಿ ದಿನನಿತ್ಯ ಓಡಾಡುತ್ತಿದ್ದ ಸ್ಥಳೀಯರು ಕೋಟೆ ಗೆಳೆಯರ ಬಳಗದ ಆಸಕ್ತಿ ಹಾಗೂ ಪತ್ರಿಕೆಯ ಬರಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ…