
ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ಜೋಗದಲ್ಲಿ ಇಬ್ಬರು ಯುವಕರು ಅಪ್ರಾಪ್ತ ಬಾಲಕಿಗೆ ಮತ್ತು ಬರುವ ಔಷಧಿ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ಧ ಜಾತಿನಿಂದನೆ ಹಾಗೂ ಫೋಕ್ಸೋ ಕಾಯ್ದೆ ದಾಖಲಿಸಲಾಗಿದೆ.
ಏನಿದು ಘಟನೆ :
ಆಗಸ್ಟ್ 19 ರಂದು ಸಂಜೆ ಸಾಗರದ ಅಜಯ್(32) ಹಾಗೂ ಶಾಬಾಸ್ (26) ಎನ್ನುವ ಇಬ್ಬರು ಯುವಕರು ತಮಗೆ ಪರಿಚಯವಿದ್ದ ಬಾಲಕಿಯನ್ನ ಪುಸಲಾಯಿಸಿ ಪ್ರವಾಸಕ್ಕೆ ಕರೆದೊಯ್ದಿದ್ದಾರೆ ನಂತರ ಆಕೆಗೆ ಗೊತ್ತಿಲ್ಲದ ಹಾಗೆ ಮತ್ತು ಬರುವ ಔಷಧಿ ನೀಡಿ ಅತ್ಯಾಚಾರ ನಡೆಸಿದ್ದಾರೆ.
ತಡವಾಗಿ ಪ್ರಕರಣ ದಾಖಲು :
ಆಗಸ್ಟ್ 19 ರಂದು ಸಂಜೆ ನಡೆದ ಘಟನೆ ನಿನ್ನೆ ಅಂದರೆ 21ನೇ ತಾರೀಖು ಪ್ರಕರಣ ದಾಖಲಾಗಿದೆ. ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು ಕೆಲವು ಪ್ರಕರಣಗಳು ತಡವಾಗಿ ಬೆಳಕಿಗೆ ಬರುತ್ತಿದ್ದು ಕೆಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ…
ರಘುರಾಜ್ ಹೆಚ್ .ಕೆ..9449553305…