
ಶಿವಮೊಗ್ಗ: ರಾಜ್ಯದಲ್ಲಿ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಮಹತ್ತರ ಬೆಳವಣಿಗೆಗಳು ನಡೆಯುತ್ತಿದ್ದು ಮತ್ತೆ ಪಕ್ಷಾಂತರದ ಮುನ್ಸೂಚನೆಗಳು ಸಿಗುತ್ತಿವೆ. ಹಿಂದೆ ಬಿಜೆಪಿ ಪಕ್ಷ ಪ್ರಾರಂಭ ಮಾಡಿದ್ದ ಆಪರೇಷನ್ ಕಮಲವನ್ನು ಈಗ ಕಾಂಗ್ರೆಸ್ ಪಕ್ಷ ಆಪರೇಷನ್ ಹಸ್ತದ ಮೂಲಕ ಮುಂದುವರಿಸುತ್ತಿದೆ. ಹಲವು ಜೆಡಿಎಸ್ ಹಾಗೂ ಬಿಜೆಪಿ ನಾಯಕರನ್ನು ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ ನತ್ತ ಸೆಳೆಯಲು ಮುಂದಾಗಿದೆ.
ಕಾಂಗ್ರೆಸ್ ತೆಕ್ಕೆಗೆ ಆಯನೂರು ಮಂಜುನಾಥ್ :
ಹಿಂದೆ ಬಿಜೆಪಿ ಪಕ್ಷದಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಆಯನೂರು ಮಂಜುನಾಥ್ ನಂತರ ಬದಲಾದ ಪರಿಸ್ಥಿತಿಯಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ ಕೆಎಸ್ ಈಶ್ವರಪ್ಪನವರ ಜೊತೆಗೆ ಮುನಿಸಿಕೊಂಡು ಈಶ್ವರಪ್ಪನವರ ಮಗನಿಗೆ ಟಿಕೆಟ್ ನೀಡುವುದಾದರೆ ನನಗೆ ಟಿಕೆಟ್ ನೀಡಲಿ ಇಲ್ಲವಾದಲ್ಲಿ ನಾನು ನನ್ನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ದಿಟ್ಟವಾದ ನಿರ್ಧಾರ ತೆಗೆದುಕೊಂಡು ಬಿಜೆಪಿ ಪಕ್ಷವನ್ನು ಬಿಟ್ಟು ಜೆಡಿಎಸ್ ಪಕ್ಷದಲ್ಲಿ ಅಭ್ಯರ್ಥಿಯಾಗಿ ನಿಂತು 8 ಸಾವಿರ ಮತಗಳನ್ನು ಪಡೆದುಕೊಂಡಿದ್ದರು.
ಹೋರಾಟದ ಮೂಲಕವೇ ಮುಂಚೂಣಿಗೆ ಬಂದ ಕಾರ್ಮಿಕ ನಾಯಕರಾದ ಆಯನೂರು ಮಂಜುನಾಥ್ ಗೆ ಈ ಸೋಲು ನಿರೀಕ್ಷಿಸಿರಲಿಲ್ಲ .
ಆದರೆ ಈಗ ಮತ್ತೆ ರಾಜಕೀಯದಲ್ಲಿ ಏನಾದರೂ ನಡೆಯಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಮಂಜುನಾಥ್ ಮರಳುತ್ತಿದ್ದಾರೆ. ಇಂದು ಅಥವಾ ಇನ್ನೂ ಎರಡು ಮೂರು ದಿನಗಳ ಒಳಗೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಮಂಜುನಾಥ್ ಸೇರ್ಪಡೆಗೊಳ್ಳಲಿದ್ದಾರೆ. ಹಾಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನೈರುತ್ಯ ಪದವೀಧರ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.
ಆಯನೂರು ಮಂಜುನಾಥ್ ಜೊತೆಗೆ ಶಿಕಾರಿಪುರದಿಂದ ಬಿವೈ ವಿಜಯೇಂದ್ರ ವಿರುದ್ಧ ಸ್ಪರ್ಧಿಸಿ ಅತ್ಯಂತ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ನಾಗರಾಜ್ ಗೌಡ ಕೂಡ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಪತ್ರಿಕೆ ಜೊತೆ ಮಾತನಾಡಿದ ಆಯನೂರು ಮಂಜುನಾಥ್ ಬಿಜೆಪಿ ಪಕ್ಷದಲ್ಲಿ ಆದ ಕೆಲವೊಂದು ಅಸಮಾಧಾನಗಳಿಂದ ಹೊರಬಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದುಕೊಂಡಿದ್ದೆ ಆಗ ಕೂಡ ಕಾಂಗ್ರೆಸ್ ಪಕ್ಷ ನನ್ನನ್ನು ಸಂಪರ್ಕಿಸಿತ್ತು ನಂತರ ಜೆಡಿಎಸ್ ಪಕ್ಷದ ಕರೆಯ ಮೇರೆಗೆ ಕುಮಾರಸ್ವಾಮಿ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡು ಚುನಾವಣೆಯಲ್ಲಿ ನಿಂತಿರುವುದು ಇತಿಹಾಸ ಈಗ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೋಗಬೇಕು ಎಂದುಕೊಂಡಿದ್ದೇನೆ ಆದರೆ ಯಾವುದೇ ಷರತ್ತುಗಳನ್ನು ಹಾಕಿಲ್ಲ ಪಕ್ಷ ಅವಕಾಶ ಕೊಟ್ಟರೆ ನೈರುತ್ಯ ಪದವೀಧರ ಕ್ಷೇತ್ರದಿಂದ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಎನ್ನುತ್ತಾರೆ ಆಯನೂರು ಮಂಜುನಾಥ್..
ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದ ಹೆಚ್ ಸಿ ಯೋಗೇಶ್:
ಮಾಜಿ ಶಾಸಕರಾದ ಚಂದ್ರಶೇಖರಪ್ಪನವರ ಪುತ್ರ ಹಾಗೂ ಕಳೆದ ಚುನಾವಣೆಯಲ್ಲಿ ಬಿಜೆಪಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೆಚ್ ಸಿ ಯೋಗೀಶ್ ದಿಡೀರ್ ಪತ್ರಿಕಾಗೋಷ್ಠಿಯನ್ನು ನಡೆಸಿ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದರು. ಬಹಳ ಕಟುವಾದ ಮಾತುಗಳಿಂದಲೇ ಮಂಜುನಾಥ್ ಅವರನ್ನು ಟೀಕಿಸಿದ್ದರು ಇವರ ಟೀಕೆಗಳಿಗೆ ಮಂಜುನಾಥ್ ನಗುವಿನಿಂದಲೇ ಉತ್ತರಿಸಿದ್ದರು. ಆ ನಗುವಿನ ಉತ್ತರ ಪಕ್ಷದ ಸೇರ್ಪಡೆನಾ ಕಾದುನೋಡಬೇಕು..
ರಘುರಾಜ್ ಹೆಚ್. ಕೆ…9449553305…