ವಲಯ ಮಟ್ಟದ ಕ್ರೀಡಾಕೂಟದಲ್ಲಿ ದುರ್ಗಿಗುಡಿ ಆಂಗ್ಲ ಮಾಧ್ಯಮ ಶಾಲೆಯ ಜಯಭೇರಿ.
ಇತ್ತೀಚೆಗೆ ನಡೆದ ಹಿರಿಯ ಪ್ರಾಥಮಿಕ ಶಾಲೆಗಳ 14 ವರ್ಷದೊಳಗಿನ ಬಾಲಕ ಬಾಲಕಿಯರ ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ನಗರದ ದುರ್ಗಿಗುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ಬಾಲಕರು ಒಟ್ಟು ಆರು ಪ್ರಥಮ ಸ್ಥಾನಗಳನ್ನು ಹಾಗೂ ಎರಡು ದ್ವಿತೀಯ ಸ್ಥಾನಗಳನ್ನು ಗಳಿಸುವುದರ ಮೂಲಕ ಶಾಲೆಗೆ ಕೀರ್ತಿ ತಂದಿರುತ್ತಾರೆ.
ಬಾಲಕರ 600 ಮೀಟರ್ ಓಟದಲ್ಲಿ ಪವನ್ ಹಾಗೂ ಚಿನ್ಮಯ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ್ದಾರೆ. 400 ಮೀಟರ್ ಓಟದಲ್ಲಿ ಹಝರುಲ್ ಹಾಗೂ ಪವನ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಷಾಟ್ ಪುಟ್ ಹಾಗೂ ಡಿಸ್ಕಸ್ ಥ್ರೋ ಸ್ಪರ್ಧೆಗಳಲ್ಲಿ ಪ್ರಸನ್ನ ಪ್ರಥಮ ಸ್ಥಾನ ಗಳಿಸಿದರೆ, ಖೊಖೊ ಮತ್ತು 100x4 ರೀಲೆ ಸ್ಪರ್ಧೆಗಳಲ್ಲಿ ಸಹ ಪ್ರಥಮ ಸ್ಥಾನಗಳನ್ನು ಶಾಲೆಯು ತನ್ನದಾಗಿಸಿಕೊಂಡಿದೆ.
ಮಕ್ಕಳ ಗೆಲುವಿಗೆ ಪ್ರಮುಖ ಪಾತ್ರ ವಹಿಸಿರುವ ಶಿಕ್ಷಕಿಯರಾದ ಕನ್ಯಾಕುಮಾರಿ, ನಂದಾ, ರಾಧಾ, ಲಾವಣ್ಯ ಹಾಗೂ ದೈಹಿಕ ಶಿಕ್ಷಕರಾದ ರವಿ ಇವರುಗಳನ್ನು ಹಾಗೂ ವಿಜೇತ ಮಕ್ಕಳನ್ನು ಮುಖ್ಯಶಿಕ್ಷಕಿ ಶ್ರೀಮತಿ ಭಾರತಿ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ಶೆಟ್ಟರ್ ಅಭಿನಂದಿಸಿದ್ದಾರೆ.