
ಇಂದು ಶ್ರೀ ವರ ಮಹಾಲಕ್ಷ್ಮಿ ವ್ರತ ಆಚರಣೆ. ವಿಶೇಷವಾಗಿ ಸುಮಂಗಲಿಯರು ತಮ್ಮ ಆರ್ಥಿಕ ಸ್ಥಿತಿಯ ಸುಧಾರಣೆಗೆ ಲಕ್ಷ್ಮಿ ದೇವಿಯ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.
ವರ ಮಹಾಲಕ್ಷ್ಮಿ ವ್ರತ ಆಚರಣೆಯ ಮೂಲ ಹರಸುತ್ತಾ ಹೋದರೆ ನಮಗೆ ವ್ಯಾಸ ಮಹಾಮುನಿಗಳು ಸಿಗುತ್ತಾರೆ. ನಮ್ಮ ಹಿಂದೂ ಧರ್ಮ 18ಪುರಾಣಗಳ ಆಧಾರದ ಮೇಲೆ ನಿಂತಿದೆ. ಭಗವಂತನ ಪ್ರೇರಣೆಯಿಂದ ಈ ಪುರಾಣಗಳನ್ನು ವ್ಯಾಸ ಮಹರ್ಷಿಗಳು ರಚಿಸಿದರು.
ಮನುಕುಲದ ಉದ್ಧಾರಕ್ಕಾಗಿ ಈ ಎಲ್ಲಾ 18ಪುರಾಣಗಳಲ್ಲಿ ವ್ರತಗಳನ್ನು ಉಲ್ಲೇಖಿಸಿದ್ದಾರೆ ಅಂತಹ ವ್ರತಗಳಲ್ಲಿ ಒಂದು ಇಂದು ನಾವು ಆಚರಿಸುತ್ತಿರುವ ಶ್ರೀ ವರ ಮಹಾಲಕ್ಷ್ಮಿ ವ್ರತ.
ಉದ್ಯೋಗ, ವ್ಯಾಪಾರ, ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಈ ವ್ರತವನ್ನು ಆಚರಿಸಲಾಗುತ್ತದೆ. ವರ ಮಹಾ ಲಕ್ಷ್ಮಿ ವ್ರತ ಆಚರಣೆ ಪದ್ಧತಿ ಬಗ್ಗೆ ಸ್ಕಂಧ ಪುರಾಣದಲ್ಲಿ ಸೂತ ಮಹಾಮುನಿಗಳು ಹೇಳಿರುವಂತೆ ವ್ರತವನ್ನು ಆಚರಿಸುವವರು ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ತೈಲ ಅಭ್ಯಂಜನ ಮಾಡಿ ಹರಿಯುವ ನದಿಯಿಂದ ನೀರನ್ನು ತಂದು ಕಳಸ ಪ್ರತಿಷ್ಠಾಪಸಿ ನೀರನ್ನು ಕಳಸದಲ್ಲಿ ಹಾಕಬೇಕು ನಂತರ ಕಳಸಕ್ಕೆ ಮಂಟಪ ನಿರ್ಮಿಸಿ ಹೂಗಳಿಂದ ಅಲಂಕಾರ ಮಾಡಿ ಐದು ತರಹದ ಭಕ್ಷ್ಯಗಳನ್ನು ಅಂದರೆ ಐದು ಬಗೆಯ ಅನ್ನ ಪದಾರ್ಥಗಳನ್ನು ಸಿದ್ಧಪಡಿಸಿ ಐದು ಬಗೆಯ ಹಣ್ಣುಗಳನ್ನು ಲಕ್ಷ್ಮಿ ದೇವಿಗೆ ನೈವೇದ್ಯವಾಗಿ ಅರ್ಪಿಸಿ ಕನಿಷ್ಠ ಐದು ಮಂದಿ ಸುಮಂಗಲಿಯರಿಗೆ ಬಾಗಿನ ಅರ್ಪಿಸಿ ಅನ್ನದಾನವನ್ನು ಮಾಡಬೇಕು.
ಸಂಜೆ ಕಳಸಕ್ಕೆ ದೇವಿ ಸಂಬಂದಿಸಿದ ಹಾಡನ್ನು ಹಾಡುತ್ತಾ ಆರತಿ ಬೆಳಗಿ ಮರು ದಿನ ಕಳಸ ವಿಸರ್ಜನೆ ಮಾಡುವ ಮೂಲಕ ವರ ಮಹಾ ಲಕ್ಷ್ಮಿ ವ್ರತವನ್ನು ಆಚರಿಸಬಹುದು ಎಂದು ಸೂತ ಪುರಾಣದಲ್ಲಿ ಮುನುಗಳು ತಿಳಿಸಿದ್ದಾರೆ.
ಪ್ರಿಯ ಓದುಗರೆ ನಿಮಗೆಲ್ಲರಿಗೂ ಶ್ರಿ ವರ ಮಹಾಲಕ್ಷ್ಮಿ ವ್ರತ ಆಚರಣೆಯ ಶುಭಾಶಯಗಳು.
ಮಾಹಿತಿ- ಶ್ರೀನಿಧಿ ಭಟ್
ಪ್ರಧಾನ ಅರ್ಚಕರು ಪಿಳ್ಳಯ್ಯನ ಗಿರಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ.
ವಿವರಣೆ- ಹೆಚ್.ಎಮ್ ವಿನಯ್ ಕುಮಾರ್. ವರದಿಗಾರರು…