
ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲಿನಲ್ಲಿ ಆಗಸ್ಟ್ 31ರಿಂದ ಲೋಹದ ಹಕ್ಕಿಗಳು ಅಧಿಕೃತವಾಗಿ ಹಾರಾಡಲಿವೆ.
ಈ ಕುರಿತು ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರರವರು ಆಗಸ್ಟ್ 31ರಿಂದ ವಿಮಾನ ನಿಲ್ದಾಣದಿಂದ ಅಧಿಕೃತವಾಗಿ ವಿಮಾನಗಳು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಅಂದು ಬೆಳಗ್ಗೆ ಬೆಂಗಳೂರಿನಿಂದ ಹೊರಟ ವಿಮಾನವು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿದಲ್ಲಿ 11.05ಕ್ಕೆ ಲ್ಯಾಂಡ್ ಆಗಲಿದ್ದು ಶಿವಮೊಗ್ಗ ವಿಮಾನ ನಿಲ್ದಾಣ ಆರಂಭಕ್ಕೆ ಶ್ರಮಿಸಿದ್ದ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಬಿ.ಎಸ್ ಯಡಿಯೂರಪ್ಪರವರ ಉಪಸ್ತಿತಿಯಲ್ಲಿ ಏರ್ ಪೋರ್ಟ್ ಅಧಿಕೃತವಾಗಿ ಆರಂಭವಾಗಲಿದೆ.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಸಚಿವರು, ಶಾಸಕರು, ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಂತಹ ಉಡಾಣ್ ಯೋಜನೆಯಿಂದ ದೇಶದಲ್ಲಿ ಹಲವು ಏರ್ ಪೋರ್ಟ್ ಗಳು ಆರಂಭವಾಗಿದೆ.
ಸದ್ಯ ಈಗ ಶಿವಮೊಗ್ಗ ಬೆಂಗಳೂರಿಗೆ ಸೇವೆ ಲಭ್ಯವಿದ್ದು ಇನ್ನು ಒಂದು ತಿಂಗಳಲ್ಲಿ ಹೈದರಾಬಾದ್ ಹಾಗು ತಿರುಪತಿಗೆ ವಿಮಾನ ಸೇವೆಗಳು ಆರಂಭವಾಗಲಿದೆ ಎಂದು ತಿಳಿಸಿದರು.
ಸಂಸದರಿಂದ ವಿಮಾನ ನಿಲ್ದಾಣದಲ್ಲಿ ಕೊನೇ ಹಂತದ ಸಿದ್ದತೆ ವೀಕ್ಷಿಣೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಇದ್ದು ಡಿಸಂಬರ್ ವೇಳೆಗೆ ಸಾರ್ವಜನಿಕ ಸೇವೆಗೆ ಸಿಗಲಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರ ಕವಿ ಕುವೆಂಪು ಹೆಸರನ್ನು ಕೇಂದ್ರಕ್ಕೆ ಕಳಿಸಲಾಗಿದೆ.
ಕೇಂದ್ರ ಸರ್ಕಾರದಿಂದ ಗೆಜೆಟ್ ನೋಟಿಫಿಕೇಶನ್ ಕೆಲಸ ಆಗಬೇಕಿದೆ ನಾವು ಕುವೆಂಪು ಹೆಸರನ್ನು ಅಂತಿಮವಾಗಿ ಕಳಿಸಿಕೊಟ್ಟಿದ್ದೇವೆ.
ಕಾರ್ಗೋ ಏರಲೈನ್ಸ್ ವ್ಯವಸ್ಥೆ ಇದೆ ಇದರಿಂದ ಶಿವಮೊಗ್ಗ ದಾವಣಗೆರೆ ಭಾಗದ ಅಡಿಕೆ ಬೆಳೆಗಾರರಿಗೆ ಮತ್ತು ಚಿಕ್ಕಮಗಳೂರಿನ ಕಾಫಿ ಬೆಳೆಗಾರರಿಗೆ ಫಸಲನ್ನು ದೇಶ ವಿದೇಶಗಳಿಗೆ ರಫ್ತು ಮಾಡಲು ಅನುಕೂಲವಾಗಲಿದೆ ಎಂದರು.



ವರದಿ- ವಿನಯ್ ಕುಮಾರ್ ಹೆಚ್.ಎಮ್