
ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ ವಿರೋದ ವ್ಯಕ್ತ ಪಡಿಸಿದ್ದ ಪಾಲಿಕೆ ಸದಸ್ಯ ಹೆಚ್.ಸಿ ಯೋಗೀಶ್ ನಿನ್ನೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಪಡೆದ ಆಯನೂರು ಮಂಜುನಾಥ್ ರವರ ಬಗ್ಗೆ ತೀಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.
ಇಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಸಿ ಯೋಗೀಶ್ ಮನೆ ಮನೆ ಸುತ್ತಾಡಿ ಬಂದವರನ್ನ ಸೊಸೆಯಾಗಿ ಒಪ್ಪಿಕೊಳ್ಳಲು ಆಗಲಿಲ್ಲ ಹಾಗಾಗಿ ಬೆಂಗಳೂರಿಗೆ ಹೋಗಿ ಹಿರಿಯರ ಬಳಿ ಮನವಿ ಮಾಡಿದ್ದೆವು.
ಮನೆಯಲ್ಲಿರುವ ಮನೆಯಲ್ಲಿರುವ ಹಿರಿಯರು ತೀರ್ಮಾನ ಮಾಡಿ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದಾರೆ ಬಂದಿರುವ ಸೊಸೆ ಹೇಗೆ ಮನೆ ನಡೆಸಿಕೊಂಡು ಹೋಗಬೇಕೆಂದು ಹೇಳಿಕೊಟ್ಟಿದ್ದಾರೆ.
ದೇವರ ಮನೆಯಲ್ಲಿರುವ ಭಗವದ್ಗೀತೆ, ಕುರಾನ್, ಬೈಬಲ್ ಮೇಲೆ ಪ್ರಮಾಣ ಮಾಡಿ ಹೇಗೆ ಮನೆಯಲ್ಲಿ ನಡೆದುಕೊಂಡು ಹೋಗಬೇಕೆಂದು ಹೇಳಿಕೊಟ್ಟಿದ್ದಾರೆ ಕಾದು ನೋಡೋಣ ಬಂದಿರುವ ಸೊಸೆ ಹೇಗೆ ಮನೆ ನಡೆಸಿಕೊಂಡು ಹೋಗುತ್ತಾರೆ ಎಂದರು.
ವರದಿ- ವಿನಯ್ ಕುಮಾರ್ ಹೆಚ್.ಎಮ್