
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕರ್ನಾಟಕದ ಚಿರಾಪುಂಜಿ ಸುಸಂಸ್ಕೃತರ ನಾಡು ಆಗುಂಬೆ ಭಾಗದ ಹಳ್ಳಿಯಲ್ಲಿ ಹನಿ ಟ್ರ್ಯಾಪ್ ಆಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಹಿಂದಿನಿಂದಲೂ ಹನಿ ಟ್ರ್ಯಾಪ್ ನಡೆದುಕೊಂಡು ಬರುತ್ತಿದ್ದು ಅದು ಬೆಳಕಿಗೆ ಬರುತ್ತಿಲ್ಲ ಗಂಡನೇ ಹೆಂಡತಿಯನ್ನು ಬಳಸಿಕೊಂಡು ಈ ಕೃತ್ಯವನ್ನು ಮಾಡುತ್ತಿದ್ದಾನೆ ಎನ್ನುವ ಸುದ್ದಿಗಳು ಬರುತ್ತಿವೆ.
ಈಗ ಆತನದೇ ಊರಿನ ಇನ್ನೊಬ್ಬ ವ್ಯಕ್ತಿಗೆ ಹೆಂಡತಿಯನ್ನು ಬಳಸಿಕೊಂಡು ಹನಿ ಟ್ರ್ಯಾಪ್ ಮಾಡಲು ಹೊರಟಾಗ ಆತನ ಹೆಂಡತಿ ಇದರ ವಿರುದ್ಧ ತಿರುಗಿ ಬಿದ್ದಿದ್ದು ಪ್ರಕರಣ ಕುತೂಹಲಕಾರಿಯಾಗಿದೆ.
ಹಾಗಾದರೆ ಹೆಂಡತಿಯನ್ನೇ ಬಳಸಿಕೊಂಡು ಈ ಕೃತ್ಯವನ್ನು ಮಾಡುತ್ತಿದ್ದ ಆತ ಯಾರು..? ಈತನ ಮತ್ತು ಈತನ ಹೆಂಡತಿ ವಿರುದ್ಧ ತಿರುಗಿಬಿದ್ದ ಈತನದೇ ಊರಿನ ಆ ಮಹಿಳೆ ಯಾರು..? ಎನ್ನುವ ಎಲ್ಲಾ ಮಾಹಿತಿಯನ್ನು ಪತ್ರಿಕೆ ಸಂಗ್ರಹಿಸುತ್ತಿದ್ದು ಸಂಪೂರ್ಣ ಮಾಹಿತಿ ಸಿಕ್ಕ ಕೂಡಲೇ ಎಲ್ಲಾ ವಿವರ ತಿಳಿಸಲಾಗುವುದು..