ಶಿವಮೊಗ್ಗ : ಇಂದಿನಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಯಾನ ಸೇವೆಗಳು ಅಧಿಕೃತವಾಗಿ ಆರಂಭವಾಗಿದೆ. ವಿಮಾನ ಹಾರಾಟ ಆರಂಭದ ಕಾರ್ಯಕ್ರಮವು ಏರ್ ಪೋರ್ಟ್ ನಲ್ಲಿ ನಡೆಯುತ್ತಿರುವಾಗ ಸಂಸದ ಬಿ.ವೈ ರಾಘವೇಂದ್ರ ರವರು ನಿಲ್ದಾಣ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸಾಂಕೇತಿಕವಾಗಿ ಕೃಷ್ಣಪ್ಪ ಮತ್ತು ಗೋವಿಂದರಾಜು ಎಂಬ ಇಬ್ಬರು ರೈತರನ್ನು ಸನ್ಮಾನಿಸಲು ವೇದಿಕೆ ಮೇಲೆ ಆಹ್ವಾನಿಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡ ವಿಜಯ್ ಕುಮಾರ್(ದನಿ) ವೇದಿಕೆ ಮೇಲೆ ಬಂದು ಇವರಿಬ್ಬರೇನಾ ರೈತರು ಇರೋದು ಎಂದು ಆಕ್ರೋಶ ವ್ಯಕ್ತಪಡಿಸಿದರು ತಕ್ಷಣ ಭದ್ರತಾ ಸಿಬ್ಬಂದಿಯವರು ವಿಜಯ್ ಕುಮಾರ್ ರವರನ್ನು ವಶಕ್ಕೆ ಪಡೆದರು.


ಇನ್ನೊಂದು ಭಾಗದಲ್ಲಿ ರೈತರ ಗುಂಪಿನಿಂದ ಸನ್ಮಾನಕ್ಕೆ ನೀವು ಕರೆದವರು ರೈತರಲ್ಲ ಬ್ರೋಕರ್ ಗಳು ಎಂದು ತಮ್ಮ ಅಸಮಧಾನ ಹೊರ ಹಾಕಿದರು.
ವೇದಿಕೆ ಮೇಲಿಂದ ಸಂಸದ ಬಿ.ವೈ.ರಾಘವೇಂದ್ರ ರೈತರು ಪಕ್ಷ, ಧರ್ಮ, ಜಾತಿಗಳಗಿಂತ ಮಿಗಿಲಾದವರು ಎಂದು ಹೇಳಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರಿಂದ ಇಬ್ಬರಿಗೆ ಸನ್ಮಾನ ಮಾಡಿಸಿದರು.
ವರದಿ – ವಿನಯ್ ಕುಮಾರ್ ಹೆಚ್.ಎಮ್