
ಶಿವಮೊಗ್ಗ : ಮಲೆನಾಡಿನಿಂದ ಲೋಹದ ಹಕ್ಕಿಗಳ ಹಾರಾಟ ಇಂದಿನಿಂದ ನಿರಂತರವಾಗಿರಲಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂದು ಇಂಡಿಗೋ ವಿಮಾನ ಭೂಸ್ಪರ್ಶ ಮಾಡಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ರಾಜ್ಯ ಸರ್ಕಾರದ ಸಚಿವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವರಾದ ಎಮ್.ಬಿ ಪಾಟೀಲ್, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಗಣ್ಯರು ಆಕಾಶ ಮಾರ್ಗದ ಮೂಲಕ ಇಂಡಿಗೋ ಫ್ಲೈಟ್ ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಗಮನ ಸೆಳೆದ ವಿಮಾನ ಸಂಚಾರದ ವೇಳಾಪಟ್ಟಿ.
ಬೆಂಗಳೂರಿನ ಕನ್ನಡ ಭಾಷಾಭಿಮಾನಿ ರೂಪೇಶ್ ರಾಜಣ್ಣ ಎಂಬುವರು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿರುವ ವಿಮಾನ ಸಂಚಾರದ ವೇಳಾಪಟ್ಟಿಯು ಎಲ್ಇಡಿ ಸ್ಕ್ರೀನ್ ನಲ್ಲಿ ಇಂಗ್ಲೀಷ್ ಹಾಗು ಹಿಂದಿ ಭಾಷೆಯಲ್ಲಿ ಬರುತ್ತಿರುವುದನ್ನು ಗಮನಿಸಿ ಸಚಿವ ಎಮ್.ಬಿ ಪಾಟೀಲ್ ರವರಿಗೆ ಟ್ವೀಟ್ ಮೂಲಕ ಗಮನಕ್ಕೆ ತಂದು ಎಲ್ಲಿದೆ ಕನ್ನಡ ಎಂದು ಕೇಳಿದ್ದಾರೆ.

ಸಚಿವ ಎಮ್.ಬಿ ಪಾಟೀಲ್ ಉತ್ತರ.
ಶಿವಮೊಗ್ಗ ಏರ್ ಪೋರ್ಟ್ ನ ವಿಮಾನ ಸಂಚಾರದ ವೇಳಾಪಟ್ಟಿ ಹಿಂದಿ ಹಾಗು ಇಂಗ್ಲೀಷ್ ಭಾಷೆಯಲ್ಲಿರುವುದು ಅರಿತ ಸಚಿವರು
ಇದು ನನ್ನ ಗಮನಕ್ಕೆ ಬಂದಿರಲಿಲ್ಲ ಸಂಬಂಧ ಪಟ್ಟ ಅಧಿಕಾರಿಗಳ ಬಳಿ ಈ ಕುರಿತು ಮಾತನಾಡುವೆ ಎಂದು ಟ್ವೀಟ್ ಮೂಲಕ ಉತ್ತರಿಸಿದ್ದಾರೆ.

ಕನ್ನಡಿಗ ರೂಪೇಶ್ ರಾಜಣ್ಣರ ಕನ್ನಡ ಬಗೆಗಿನ ಕಳಕಳಿ ಶ್ಲಾಘನೀಯ. ಸಚಿವರ ಗಮನಕ್ಕೆ ಬಂದ ನಂತರ ವಿಮಾನ ಸಂಚಾರ ವೇಳಾಪಟ್ಟಿ ಕನ್ನಡ ಭಾಷೆಯಲ್ಲಿ ಯಾವಾಗ ಆರಂಭ ಆಗುತ್ತದೆ ಎಂದು ಕಾದು ನೋಡಬೇಕಿದೆ.
ವರದಿ – ವಿನಯ್ ಕುಮಾರ್ ಹೆಚ್.ಎಮ್