
ಶಿವಮೊಗ್ಗ: ಚಕ್ರವರ್ತಿ ಸೂಲಿಬೆಲೆ ಒಬ್ಬ ಭಾರತೀಯನಾಗಿ ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡುವುದು ಎಷ್ಟು ಸರಿ ಅತ ಕೂಡಲೇ ಕ್ಷಮೆ ಕೇಳಬೇಕು. ನೆಮ್ಮದಿಯಾಗಿರುವ ಮಲೆನಾಡಿಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಬಾರದು ಪಕ್ಷಗಳು ಯಾವುದೇ ಇರಬಹುದು ಹೆಣ್ಣು ಮಕ್ಕಳಿಗೆ ಗೌರವ ಕೊಡುವುದು ಮುಖ್ಯ ಆತ ಒಬ್ಬ ಬಾಡಿಗೆ ಭಾಷಣಕಾರ ಎಂದು ಕಾಂಗ್ರೆಸ್ ಪಕ್ಷದ ಶಿವಮೊಗ್ಗ ಜಿಲ್ಲಾಧ್ಯಕ್ಷ ಹೆಚ್.ಎಸ್ ಸುಂದರೇಶ್ ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮುಂದುವರೆದು ಮಾತನಾಡುತ್ತಾ ಆತ ತೀರ್ಥಹಳ್ಳಿಯಲ್ಲಿ ಹತ್ತು ವರ್ಷಗಳ ಕಾಲ ಜೀವನ ನಡೆಸಿದ್ದಾನೆ ಮಲೆನಾಡಿನ ಸಂಸ್ಕೃತಿ ಆತನಿಗೆ ಗೊತ್ತು ಅದನ್ನು ಹಾಳು ಮಾಡುವುದು ಬೇಡ ಯಾವುದೇ ರಾಜಕೀಯದ ಒತ್ತಡದಿಂದ ಪೊಲೀಸರು ಕೇಸ್ ಹಾಕಿಲ್ಲ ಅದು ಆತನ ಅರಿವಿಗೆ ಇರಲಿ ಈ ಕೂಡಲೇ ಕ್ಷಮೆ ಕೇಳಲಿ ಎಂದು ಹೇಳಿದರು…