
ಶಿವಮೊಗ್ಗ: ಸಿಮ್ಸ್ ಮೆಡಿಕಲ್ ಕಾಲೇಜಿನ ಮೂರನೇ ಮಹಡಿಯ ಡಾಕ್ಟರ್ ಕ್ವಾರ್ಟರ್ಸ್ ನಲ್ಲಿ ಇಂದು ಮುಂಜಾನೆ ಐದು ಮೂವತ್ತರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ವಾಸವಿದ್ದವರೇ ಪ್ರಾಥಮಿಕ ಹಂತದಲ್ಲಿ ಫೈರ್ ಎಕ್ಸ್ಚೇಂಜ್ ನಲ್ಲಿ ಇರುವ ಪೌಡರ್ ಸಿಂಪಡಿಸಿ ಬೆಂಕಿ ನಂದಿಸಲು ಪ್ರಯತ್ನ ಮಾಡಿದ್ದಾರೆ . ಆದರೆ ಅದು ಅಲ್ಲಿಗೆ ನಿಲ್ಲಲಿಲ್ಲ ಮತ್ತೆ ಬೆಂಕಿ ಹೊತ್ತಿಕೊಂಡಿದೆ. ನಂತರ 112ಕ್ಕೆ ಕಾಲ್ ಮಾಡಿದ್ದಾರೆ. ಅವರು ಅರ್ಧಗಂಟೆಯ ನಂತರ ಬಂದಿದ್ದಾರೆ ಅಷ್ಟರೊಳಗೆ ಬೆಂಕಿ ಹೂತ್ತಿಕೊಂಡಿರುವ ಬೆಂಕಿ ನಿಂತಿದೆ.
ಬೆಂಕಿ ಅವಘಡಕ್ಕೆ ಕಾರಣಗಳೇನು..?!
@ಫೈರ್ ಅಲರಾಂ ಕೂಗಲಿಲ್ಲ.
@ಫೈರ್ ಸೆನ್ಸರ್ ಹಾಕಿಲ್ಲ.
@ಮಲ್ಟಿ ಸ್ಟೋರ್ ಬಿಲ್ಡಿಂಗ್ ನಲ್ಲಿ ವಾಟರ್ ಟ್ಯಾಂಕ್ ಇರಬೇಕು ಆದರೆ ಇಲ್ಲಿ ಇಲ್ಲ.
@ಇಲಿಗಳ ಕಾಟ ತುಂಬಾ ಇರುವುದು ಪ್ರಮುಖ ಕಾರಣ ಎನ್ನಬಹುದು.
@ಏಕೆಂದರೆ ಇಲಿಗಳು ವೈರ್ ಗಳನ್ನು ಕಟ್ ಮಾಡಿದಾಗ ಅದರಿಂದ ಶಾರ್ಟ್ ಆಗಿರಬಹುದು.
@ಪವರ್ ಡಿಮ್ಯಾಂಡ್ ಜಾಸ್ತಿ ಇದ್ದು ವೈರ್ ಗಳು ಬಿಸಿಯಾಗಿ ಈ ಅವಘಡ ಸಂಭವಿಸಿರಬಹುದು.
ಒಟ್ಟಾರೆಯಾಗಿ ಸಿಮ್ಸ್ ನಂತಹ ದೊಡ್ಡ ಮೆಡಿಕಲ್ ಕಾಲೇಜಿನಲ್ಲಿ ಮಲ್ಟಿ ಸ್ಟೋರ್ ಬಿಲ್ಡಿಂಗ್ ಕ್ವಾರ್ಟರ್ಸ್ ನಲ್ಲಿ ಮುನ್ನೆಚ್ಚರಿಕೆ ಕ್ರಮಗಳು ಇಲ್ಲದಿರುವುದೇ ಈ ಅವಘಡಕ್ಕೆ ಪ್ರಮುಖ ಕಾರಣ ಎನ್ನಬಹುದು .