
ತೀರ್ಥಹಳ್ಳಿ : ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಮುಖ್ಯ ಶಿಕ್ಷಕ
ಮಂಜು ಬಾಬು ಹೆಚ್ ಪಿ ಇವರಿಗೆ ..
ಶೈಕ್ಷಣಿಕ ನಾಯಕತ್ವ, ಅತ್ಯುತ್ತಮ ಆಡಳಿತ, ಶಾಲೆಯ ಸಮಗ್ರ ಪ್ರಗತಿಗೆ ಶ್ರಮಿಸಿದ್ದಕ್ಕಾಗಿ,
ತೀರ್ಥಹಳ್ಳಿ ತಾಲೂಕಿನ ಅತ್ಯುತ್ತಮ ಪ್ರೌಢಶಾಲಾ ಮುಖ್ಯ ಶಿಕ್ಷಕ ಪ್ರಶಸ್ತಿಯನ್ನು ಶಿಕ್ಷಣ ಇಲಾಖೆ ನೀಡಿ ಗೌರವಿಸಿದೆ.
ಮಂಜು ಬಾಬು ಅವರ ಬದ್ದತೆ, ದೂರದೃಷ್ಟಿ, ಆಲೋಚನೆ, ಕಠಿಣ ಶ್ರಮ, ಅವರ ಶಾಲೆಯ ಶಿಕ್ಷಕರ ತಂಡದ ಕಾರ್ಯಕ್ಕೆ, ಊರಿನವರ, ಪೋಷಕರ, ಮಕ್ಕಳ, ದಾನಿಗಳ, ಸಹಕಾರಕ್ಕೆ, ಪ್ರೋತ್ಸಾಹ ಕ್ಕೆ ಸಿಕ್ಕ ಗೌರವ ಇದಾಗಿದೆ.
ಮಂಜು ಬಾಬು ಅವರಿಗೆ ಸಿಕ್ಕ ಈ ಗೌರವಕ್ಕೆ ಶಾಲೆಯ ಆಡಳಿತ ಮಂಡಳಿ ಸಹ ಶಿಕ್ಷಕರು ಪೋಷಕರು ಹಾಗೂ ವಿದ್ಯಾರ್ಥಿ ವೃಂದದವರು ಸ್ಥಳೀಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.