
ಶಿವಮೊಗ್ಗ : ಡಿಸಿಸಿ ಬ್ಯಾಂಕ್ ನ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು ಇದರ ಸಂಬಂಧ ಸಚಿವ ಶಾಸಕರು ಜನಪ್ರತಿನಿಧಿಗಳಿಂದ ಹಾಗು ಸಿಬ್ಬಂದಿಗಳಿಂದಲೂ ಸಹ ಸಾಲು ಸಾಲು ದೂರಿನ ಪತ್ರಗಳು ರಾಜ್ಯ ಸರ್ಕಾರದ ಬಾಗಿಲು ತಟ್ಟಿದ್ದವು.

ಡಿಸಿಸಿ ಬ್ಯಾಂಕ್ ನ ವಿರುದ್ಧ ಕೇಳಿ ಬಂದ ದೂರನ್ನು ರಾಜ್ಯ ಸರ್ಕಾರ ಪುರಸ್ಕರಿಸಿದ್ದು ತನಿಖೆ ಮಾಡಲು ಆದೇಶ ನೀಡಿದೆ.
ದೂರಿನಲ್ಲಿರುವ ಅಂಶಗಳು.

ಈ ಹಿಂದೆ ಇದ್ದಂತಹ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು, ನಿರ್ದೇಶಕರು, ವ್ಯವಸ್ಥಾಪಕರ ನಿರ್ದೇಶಕರುಗಳ ವಿರುದ್ಧ ಅವ್ಯವಹಾರದ ಆರೋಪ ಕೇಳಿ ಬಂದಿದ್ದು ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಬೆಂಗಳೂರು ನಗರ ಜಿಲ್ಲೆಯ 4ನೇ ವಲಯ ಸಹಕಾರ ಸಂಘಗಳ ಉಪ ನಿಬಂಧಕರಾದ ಶಶಿಧರ್.ಪಿ ಹಾಗು ದಾವಣಗೆರೆ ಜಿಲ್ಲೆಯ ಲೆಕ್ಕ ಪರಿಶೋಧನ ಇಲಾಖೆ ಮತ್ತು ಸಹಕಾರ ಸಂಘಗಳ ಜಂಟಿ ನಿರ್ದೇಶಕರಾದ ಮಹೇಶ್ವರ ಇವರನ್ನು ತನಿಖಾಧಿಕಾರಿಗಳನ್ನಾಗಿ ನೇಮಿಸಿ 15ದಿನದ ಒಳಗಾಗಿ ರಾಜ್ಯ ಸರ್ಕಾರಕ್ಕೆ ವರದಿ ನೀಡಲು ಸೂಚಿಸಲಾಗಿದೆ.
ವರದಿ – ವಿನಯ್ ಕುಮಾರ್ ಹೆಚ್.ಎಮ್