ಮಲೆನಾಡು ಹೆಬ್ಬಾಗಿಲಿನ ಯುವ ಉದಯೋನ್ಮುಖ ಉದ್ಯಮಿಗಳಿಗೆ ಭರವಸೆಯ ಬೆಳಕಾಗಿ ಮಾರ್ಗದರ್ಶನ ಮಾಡಲು ಅನ್ವೇಷಣ ಇನ್ನೋವೇಶನ್ ತಂಡ ಸೆ.9ರ ಶನಿವಾರ ಅನ್ವೇಷಣ ಇನ್ನೋವೇಶನ್ ಮತ್ತು ಎಂಟ್ರೆಪ್ರೆನ್ಯೂರಿಯಲ್ ಫೋರಂನ್ನು ಮಲೆನಾಡಿಗೆ ಪ್ರಥಮ ಬಾರಿಗೆ ಪರಿಚಯಿಸಲಿದೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅನ್ವೇಷಣ ತಂಡದ ಮ್ಯಾನೇಜಿಂಗ್ ಡೈರೆಕ್ಟರ್ ಸಿ.ಪಾಟೀಲ್ ರವರು ಮಲೆನಾಡ ಭಾಗದಲ್ಲಿ ಸ್ಟಾರ್ಟಪ್ ಸಂಸ್ಕ್ರತಿಯನ್ನು ಬೆಳೆಸುವ ಹಾಗು ತಂತ್ರಜ್ಙಾನ,ವ್ಯಾಪಾರ,ವಾಣಿಜ್ಯೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಸೆ.9ರ ಶನಿವಾರದಂದು ಸಾಗರ ರಸ್ತೆಯಲ್ಲಿರುವ ಪಿ.ಇ.ಎಸ್ ಕ್ಯಾಂಪಸ್ ನಲ್ಲಿ ಎಂಟ್ರೆಪ್ರೆನ್ಯೂರಿಯಲ್ ಫೋರಂ ಉದ್ಘಾಡನೆಯಾಗಲಿದೆ ಎಂದು ತಿಳಿಸಿದರು.

ಫೋರಂ ಉದ್ಘಾಟನೆಯ ಪ್ರಯೋಜನಗಳು?
ಹೊಸದಾಗಿ ಉದ್ಯಮ ಕ್ಷೇತ್ರಕ್ಕೆ ಕಾಲಿಡುವವರಿಗೆ ಹೊಸ ಶಕ್ತಿಯಾಗಿ ಜೊತೆಯಾಗಲಿದೆ.
ಉದ್ಯೋಗ ಸೃಷ್ಟಿ, ಸಣ್ಣ ಪಟ್ಟಣಗಳಿಂದ ಮೆಟ್ರೋ ನಗರಗಳ ಆಚೆಗಿನ ಉದ್ಯಮಿಗಳ ಸಾಮರ್ಥ್ಯ ಗುರುತಿಸುವಲ್ಲಿ ಸಹಕಾರಿಯಾಗಲಿದೆ.
ಉದ್ಯಮ ಲೋಕಕ್ಕೆ ಬರುವವರಿಗೆ ಏನೆಲ್ಲಾ ಸಹಕಾರ ಸಿಗಲಿದೆ ?
ಸ್ಟಾರ್ಟ್ ಅಪ್ ಗಳು ಅಭಿವೃದ್ಧಿಯಾಗಲು ಸೂಕ್ತ ವಾತವರಣ ಕಲ್ಪಿಸಲಾಗುತ್ತದೆ ಹಾಗು ಮಾರುಕಟ್ಟೆ ಪ್ರವೇಶ, ಹಣಕಾಸಿನ ಸೌಲಭ್ಯಗಳು ಒದಗಿಸಲಿದೆ.
ಉದ್ಯಮಿಗಳ ಕೌಶಲ್ಯ ಜ್ಙಾನ ಸಾಧನಗಳನ್ನು ಸಬಲೀಕರಣಗೊಳಿಸಲು ಶಿಕ್ಷಣ ಮತ್ತು ತರಬೇತಿ ನೀಡಲಾಗುವುದು.
ಉದ್ಯಮಕ್ಕೆ ಬೇಕಾದ ಹಣಕಾಸಿನ ದಾರಿ ಸುಗಮವಾಗಿಸಲು ಅನ್ವೇಷಣ ತಂಡವು ಹೂಡಿಕೆದಾರರು, ಉದ್ದಿಮೆ ಬಂಡವಾಳಗಾರರು ಮತ್ತು ಧನ ಸಹಾಯ ಸಂಸ್ಥೆಗಳ ಸಂಪರ್ಕ ಒದಗಿಸಿ ಸ್ಟಾರ್ಟ್ ಅಪ್ ಗಳಿಗೆ ಅಗತ್ಯವಿರುವ ಹಣಕಾಸಿನ ಬೆಂಬಲ ಪಡೆಯಲು ಸಹಾಯ ಮಾಡುತ್ತದೆ ಎಂದು ಸಿ.ಎಮ್ ಪಾಟೀಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದರಾದ ಬಿ.ವೈ ರಾಘವೇಂದ್ರ, ಅನ್ವೇಷಣ ನಿರ್ದೇಶಕರಾದ ಬಿ.ಆರ್ ಸುಭಾಷ್, ಪಿ.ಇ.ಎಸ್ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಉಪಸ್ಥಿತರಿದ್ದರು.
ವರದಿ – ವಿನಯ ಕುಮಾರ್ ಹೆಚ್.ಎಮ್