ಶಿವಮೊಗ್ಗ: ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿರುವ ಸಚಿವ ಶಿವಾನಂದ ಪಾಟೀಲ್ ಹಾಗು ರಾಜ್ಯ ಸರ್ಕಾರದ ವಿರುದ್ಧ ಸಂಸದ ಬಿ.ವೈ ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದರು ರಾಜ್ಯ ಸರ್ಕಾರದ ಸಚಿವರುಗಳಿಗೆ ಅಧಿಕಾರದ ಮದವೇರಿದೆ ಹಾಗಾಗಿ ರೈತರ ಬಗ್ಗೆ ಬಹಳ ಕೀಳಾಗಿ ಮಾತನಾಡುತ್ತಾರೆ, ರಾಜ್ಯ ಸರ್ಕಾರ ರೈತರ ಮನಸ್ಥಿತಿ ಹಾಳು ಮಾಡುವ ಕೆಲಸ ಮಾಡುತ್ತಿದೆ ಅನ್ನದಾತನ ಬಗ್ಗೆ ಆಡುತ್ತಿರುವ ಮಾತುಗಳನ್ನು ರಾಜ್ಯದ ಜನ ನೋಡುತ್ತಿದ್ದಾರೆ ಎಂದರು.

ಭಾರತ ಪದ ಬಳಕೆ ಬಗ್ಗೆ ಸಮರ್ಥನೆ.
ಜಿ20 ಶೃಂಗಸಭೆಗೆ ಸಂಧರ್ಭದಲ್ಲಿ ಅತಿಥಿಗಳನ್ನು ರಾಷ್ಟ್ರಪತಿಗಳು ಔತಣ ಕೂಟಕ್ಕೆ ಆಹ್ವಾನಿಸಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿದೆ.
ಭಾರತ್ ಎಂಬ ಪದದ ಬಳಕೆ ಬಗ್ಗೆ ಐ.ಎನ್.ಡಿ.ಐ.ಎ ಒಕ್ಕೂಟದ ನಾಯಕರುಗಳು ಬಿಜೆಪಿ ಹೆದರಿದೆ ಎಂದು ಹೇಳಿಕೆ ನೀಡಲಾರಂಭಿಸಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ಬಿ.ವೈ ರಾಘವೇಂದ್ರ ಔತಣ ಕೂಟದ ಆಮಂತ್ರಣ ಪತ್ರಿಕೆಯಲ್ಲಿ ಭಾರತ್ ಎಂಬ ಪದ ಬಳಕೆ ಮಾಡಿರುವ ಬಗ್ಗೆ ವಿಶೇಷ ಏನಿಲ್ಲ ಇದು ಸಾಮಾನ್ಯ ವಿಚಾರ, ಇದರಿಂದ ಐ.ಎನ್.ಡಿ.ಐ.ಎ ಸದಸ್ಯರು ಗಾಬರಿಯಾಗಿದ್ದಾರೆ. ಮೋದಿಯವರ ನೇತೃತ್ವದಲ್ಲಿ ಬರುವ ಚುನಾವಣೆಯಲ್ಲಿ ಎಲ್ಲರನ್ನು ಎದುರಿಸುವಲ್ಲಿ ಯಶಸ್ವಿಯಾಗುತ್ತೇವೆ ಎಂದರು.
ವರದಿ – ವಿನಯ್ ಕುಮಾರ್ ಹೆಚ್.ಎಮ್