
ಹಾಸನ: ಜಿಲ್ಲೆಯ ಕಾರಾಗೃಹದಲ್ಲಿ ಅಂತಾರಾಷ್ಟ್ರೀಯ ಆತ್ಮಹತ್ಯೆ ತಡೆ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ – ಡಾ. ಸಂತೋಷ ಎಸ್, ವಿ. ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಮನೋವೈದ್ಯಕೀಯ ವಿಭಾಗ, ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ HIMS
ಅಧ್ಯಕ್ಷರು – ಆರ್,. ಪ್ರಸನ್ನ, ಅಧಿಕ್ಷಕರು ಜಿಲ್ಲಾ ಕಾರಾಗೃಹ ಹಾಸನ ,ಜೈಲರ್ ಗಳಾದ ಅನಿಲ್ ಬಡಿಗೇರ್, ಬಾಲಪ್ಪ ತೆನಗಿ ಉಪಸ್ಥಿತರಿದ್ದರು.
ಡಾಕ್ಟರ್ ಸಂತೋಷ್ ಅವರು ಮಾತನಾಡಿ- ಯಾವುದೇ ವ್ಯಕ್ತಿ ತನ್ನ ಜೀವವನ್ನು ತಾನೇ ತೆಗೆದುಕೊಳ್ಳುವಂತಹ ನಿರ್ಧಾರ ಮಾಡಬಾರದು, ಸಮಸ್ಯೆ ಎಲ್ಲರ ಜೀವನದಲ್ಲೂ ಇರುತ್ತವೆ, ಅದನ್ನು ನಿವಾರಣೆ ಮಾಡಿಕೊಳ್ಳುವ ಹಾದಿಯನ್ನು ನಾವು ಕಂಡುಕೊಳ್ಳಬೇಕು, ಉತ್ತಮ ಮನಸ್ಸು ಹಾಗೂ ಉತ್ತಮ ದೇಹವನ್ನು ಎಲ್ಲ ಬಂದಿಗಳು ಹೊಂದಬೇಕು. ಬಂದಿಗಳು ಏನಾದರೂ ಸಮಸ್ಯೆಗಳು ಇದ್ದಲ್ಲಿ ಸಹ ಬಂದಿಗಳ ಹತ್ತಿರ ಹಾಗೂ ಪೊಲೀಸ್ ಸಿಬ್ಬಂದಿ ಹತ್ತಿರ ಹಂಚಿಕೊಳ್ಳಬೇಕು. ಸಕಾರಾತ್ಮಕ ಚಿಂತನೆಯನ್ನು ಹೊಂದಬೇಕು. ಎಂದು ವಿವಿಧ ಕಾರಣಗಳಿಗೆ ಜೈಲಿಗೆ ಬಂದಿರುವ ಕೈದಿಗಳಿಗೆ ಮಾರ್ಗದರ್ಶನ ಮಾಡಿದರು.
ರಘುರಾಜ್ ಹೆಚ್.ಕೆ.9449553305.