
ಶಿವಮೊಗ್ಗ: ಸ್ಮಾರ್ಟ್ ಸಿಟಿ ದಿನದಿಂದ ದಿನಕ್ಕೆ ಒಂದಿಲ್ಲೊಂದು ಸುದ್ದಿಯಿಂದ ಹೆಸರುವಾಸಿಯಾಗಿದೆ. ಈಗ ಅದಕ್ಕೆ ಮತ್ತೊಂದು ಹೊಸ ಸೇರ್ಪಡೆ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ಗೋಪಾಲಗೌಡ ಬಡಾವಣೆಯಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲು ಅಭಿಮಾನಿ ಒಬ್ಬರಿಗೆ ತಮ್ಮ ಒಡೆತನದ ಶರಾವತಿ ಡೆಂಟಲ್ ಕಾಲೇಜ್ ನಿವೇಶನದಲ್ಲಿ ಅನುಮತಿ ನೀಡಿದ್ದು ಅವರ ಅಭಿಮಾನಿ ಗುತ್ತಿಗೆದಾರಾದ ಈಶ್ವರ ರೆಡ್ಡಿ ಎಂಬುವರು ತಮ್ಮ ಸ್ವಂತ ಖರ್ಚಿನಲ್ಲಿ ಸುಸಜ್ಜಿತ ಬಸ್ ನಿಲ್ದಾಣವನ್ನು “ಎಸ್ ಬಂಗಾರಪ್ಪ ಸಾರ್ವಜನಿಕ ಬಸ್ ನಿಲ್ದಾಣ” ಎಂದು 1996- 97 ರಲ್ಲಿ ನಿರ್ಮಿಸಿದ್ದರು.
ಆದರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ನವರು ಅದನ್ನು “ಗೋಪಾಲಗೌಡ ಬಡಾವಣೆ ಬಸ್ ನಿಲ್ದಾಣ” ಎಂದು ಮರು ನಾಮಕರಣ ಮಾಡಿ ನಕಲಿ ಬಿಲ್ಲು ಸೃಷ್ಟಿಸಿ ಬಾರಿ ಅವ್ಯವಹಾರ ಮಾಡಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ ಹಾಗೂ ಬಂಗಾರಪ್ಪ ಅವರ ಅಭಿಮಾನಕ್ಕಾಗಿ ಅವರ ಹೆಸರಿನಲ್ಲಿ ಬಸ್ ನಿಲ್ದಾಣ ಮಾಡಿರುವುದನ್ನು ತೆಗೆದು ಹಾಕಿರುವುದು ಅವರ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶವನ್ನುಂಟುಮಾಡಿದೆ ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಸಂಬಂಧಪಟ್ಟವರಿಗೆ ಶಿಕ್ಷೆ ಆಗಬೇಕು ಮತ್ತೆ ಬಂಗಾರಪ್ಪ ಹೆಸರಿನಲ್ಲಿ ಮರುನಾಮಕರಣ ಆಗಬೇಕು ಎಂದು ದಿವಂಗತ ಬಂಗಾರಪ್ಪ ಅಭಿಮಾನಿಗಳ ಬಳಗ ಹಾಗೂ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕರಾದ ಜಿಡಿ ಮಂಜುನಾಥ್ ಅವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ರಘುರಾಜ್ ಹೆಚ್.ಕೆ.944955305.