
ತೀರ್ಥಹಳ್ಳಿ:- ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದ ಗೀತಾ ರಮೇಶ್ ವಿರೋಧವಾಗಿ ಆಯ್ಕೆಯಾಗಿದ್ದು.
ಒಟ್ಟು ಸದಸ್ಯ ಬಲ :
ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಸದಸ್ಯ ಬಲ ಹೊಂದಿದ್ದು,
ಬಿಜೆಪಿ 6 ಸದಸ್ಯರ ಬಲ ಹೊಂದಿದೆ.
13 ನೇ ವಾರ್ಡಿನ ಗೀತಾ ರಮೇಶ್ ಅವಿರೋಧ ಆಯ್ಕೆ :
ಗೀತಾ ರಮೇಶ್ ಅವರು ಪಟ್ಟಣದ 13ನೇ ವಾರ್ಡ್ ಸದಸ್ಯರಾಗಿದ್ದು, ಎರಡನೇ ಬಾರಿಗೆ ಪಟ್ಟಣ ಪಂಚಾಯಿತಿಗೆ ಆಯ್ಕೆಯಾಗಿ ಸದಸ್ಯರಾಗಿದ್ದಾರೆ.
ಗೀತಾ ರಮೇಶ್ ಎರಡು ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ 13ನೇ ವಾರ್ಡಿನಲ್ಲಿ ಉತ್ತಮ ಜನಸ್ನೇಹಿ ಸೇವೆ ಸಲ್ಲಿಸಿ, ವಾರ್ಡಿನ ಮೂಲಭೂತ ಸೌಕರ್ಯ ಮತ್ತು ವಾರ್ಡ್ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ, ಸ್ಥಳೀಯ ಸಮಸ್ಯೆಗೆ ಆದ್ಯತೆ ಕೊಡುವ ನಿಟ್ಟಿನಲ್ಲಿ ವಿಶೇಷವಾಗಿ ಪ್ರಯತ್ನಿಸಿ ವಾರ್ಡಿನ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಟ್ಟಣ ಪಂಚಾಯಿತಿಯ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು ತಮ್ಮ ಸ್ವಪಕ್ಷ ಹಾಗೂ ವಿರೋಧಪಕ್ಷವನ್ನು ಜೊತೆಯಾಗಿ ತೆಗೆದುಕೊಂಡು ಹೋಗಿ ಸಮಸ್ಯೆಗಳಿಗೆ ಸಕ್ರಿಯವಾಗಿ ಸ್ಪಂದಿಸಿ ಪಟ್ಟಣ ಪಂಚಾಯಿತಿಗೆ ನೂತನ ಕಾಯಕಲ್ಪ ಕೊಡುವ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಪ್ರಯತ್ನಿಸುತ್ತಾರ ಕಾದುನೋಡಬೇಕು.