
ಶಿವಮೊಗ್ಗ: ನಗರದ ಕಮಲಾ ನೆಹರೂ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಡಾ. ಬಾಲಕೃಷ್ಣ ಹೆಗಡೆ ಅವರಿಗೆ ಅತ್ಯುತ್ತಮ ಎನ್‌ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿ ಬಾಜನರಾಗಿದ್ದಾರೆ.
ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಹಕಾರ ಸಂಘದ 36ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ಅಧ್ಯಕ್ಷ ಯೋಗೇಶ್ ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಶ್ರೀಯುತರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ನಿರ್ದೇಶಕರಾದ ದಿವಾಕರ ಡಿ.ಕೆ. ಪ್ರಶಾಂತ ಎಸ್.ಎಚ್. ರಘು ಬಿ.ಎಂ. ಸುರೇಶ್, ಯಶವಂತಕುಮಾರ್ , ರುದ್ರಪ್ಪ ಮಾರ್ಕಳ್ಳಿ, ಗಿರಿಜಾ ತಹಸೀಲ್ದಾರ್, ಮಂಜಪ್ಪ ಎಸ್.ಆರ್, ಇಮ್ತಿಯಾಜ ಅಹಮ್ಮದ್, ಕೆಂಚಮ್ಮ, ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.