
ಸೊರಬ :ತಾಲ್ಲೂಕು ಕುಂಸಿ ಗ್ರಾಮದ ಮಲ್ಲಿಕಾರ್ಜುನ ರೈತ ಕೆರೆಯಲ್ಲಿ ಎತ್ತು ಮೈ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದೂ ಮೃತಪಟ್ಟಿದ್ದಾನೆ – ಸೊರಬ ಅಗ್ನಿಶಾಮಕ ಸಿಬ್ಬಂದಿಗಳು ಮೃತ ರೈತ ಮಲ್ಲಿಕಾರ್ಜುನ ದೇಹವನ್ನೂ ಕೆರೆಯಿಂದ ಮೇಲಕ್ಕೆ ಎತ್ತಿ ಕುಟುಂಬಸ್ಥರಿಗೆ ಕಾನೂನು ಕ್ರಮಗಳೊಂದಿಗೆ ಹಸ್ತಾಂತರ
ಸೊರಬ :- ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಕುಂಸಿ ಗ್ರಾಮದ ನಿವಾಸಿಯಾದ ಮಲ್ಲಿಕಾರ್ಜುನ ವಯಸ್ಸು 32 ವಯಸ್ಸು ರೈತ ಈ ದಿನ ಮುಂಜಾನೆ ತನ್ನ ಎತ್ತುಗಳನ್ನೂ ಕೆರೆಯಲ್ಲಿ ಮೈ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದು, ಅಗ್ನಿಶಾಮಕ ದಳದ ಅಧಿಕಾರಿಯಾದ ಮಹಾಬಲೇಶ್ವರ ಹಾಗೂ ಸಹ ಸಿಬ್ಬಂದಿಗಳು ಕೆರೆಯಲ್ಲಿ ಮೃತ ಪಟ್ಟ ಮಲ್ಲಿಕಾರ್ಜುನ ರೈತನ ಮೃತ ದೇಹವನ್ನು ಕೆರೆಯಿಂದ ಮೇಲಕ್ಕೆ ಎತ್ತಿ ಕಾನೂನು ಕ್ರಮದೊಂದಿಗೆ ಕುಟುಂಬಕ್ಕೆ ಮೃತ ದೇಹವನ್ನು ಹಸ್ತಾಂತರ ಮಾಡಿರುವ ಮಾಹಿತಿ ಲಭ್ಯವಾಗಿದೆ.
ಮೃತ ರೈತ ಮಲ್ಲಿಕಾರ್ಜುನ ನಿಧನಕ್ಕೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದೂ, ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮೃತ ಮಲ್ಲಿಕಾರ್ಜುನ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ
ವರದಿ:ಓಂಕಾರ ಎಸ್. ವಿ. ತಾಳಗುಪ್ಪ..