
ಶಿವಮೊಗ್ಗ : ನಟ ಸುನಾಮಿ ಕಿಟ್ಟಿ ಅಭಿನಯದ ಹಾಗೂ ಬಡವರ-ಶೋಷಿತರ ಧಮನಿತರ ದನಿ ಪಿ.ಮೂರ್ತಿ ನಿರ್ಮಾಣದ “ಕೋರ”ಚಿತ್ರಕ್ಕೆ ಶುಭ ಕೋರಿಕೆ , ನಟ ಸುನಾಮಿ ಕಿಟ್ಟಿಗೆ ಜನುಮ ದಿನದ ಹಾರೈಕೆಯನ್ನು ಶಿವಮೊಗ್ಗದ ಸ್ನೇಹ ಬಳಗದಿಂದ ಸೂರ್ಯಗಗನ ಕನ್ನಡ ದಿನಪತ್ರಿಕಾ ಕಛೇರಿ ಆವರಣದಲ್ಲಿ ಶ್ರಮಿಕ ವರ್ಗದ ಪೌರಕಾರ್ಮಿಕರ ಒಡಗೂಡಿ ಆಚರಿಸಲಾಯಿತು.
ನಟ ಸುನಾಮಿ ಕಿಟ್ಟಿಗೆ ಜನುಮ ದಿನದ ಹಾರೈಕೆ ಹಾಗೂ “ಕೋರ” ಚಿತ್ರಕ್ಕೆ ಶುಭ ಹಾರೈಸಿದ ಸ್ನೇಹ ಬಳಗ ಕೋರ ಚಿತ್ರದ ಪೋಸ್ಟರ್ ಗೆ ಪುಷ್ಪವನ್ನು ಅರ್ಪಿಸುವುದರ ಮುಖೇನ ತಿಳಿಸಿತು, ಅಲ್ಲದೆ ಗಾರಾ ಪೌಂಡೇಶನ್ ವತಿಯಿಂದ ನೆರೆದಿದ್ದ ಕಾರ್ಮಿಕರಿಗೆ ಉಚಿತವಾಗಿ ಖಾಕಿ ಬಟ್ಟೆಯನ್ನು ವಿತರಿಸಲಾಯಿತು,
ಈ ಸಂದರ್ಭದಲ್ಲಿ ಮಾತನಾಡಿದ ಜ್ಯೋತಿ ಅರಳಪ್ಪನವರು ಬಡವರು ಬೆಳೆಯಬೇಕು, ಎಲ್ಲಾ ಸಂಕಟಗಳ ಮೀರಿ ನಿಲ್ಲಬೇಕು ಅದಾಗಲೇ ಜೀವಿತ ಬದುಕಿನಲ್ಲಿ ಸಾಧಿಸಲು ಸಾಧ್ಯ, ಈ ನಿಟ್ಟಿನಲ್ಲಿ ಸುನಾಮಿ ಕಿಟ್ಟಿಯವರು ನಟನಾಗಿ ಕರುನಾಡಿನ ಜನತೆ ಮುಂದೆ ಅರಳಿದ್ದಾರೆ, ಅವರೇ ನಟಿಸಿರುವ ಕೋರ ಚಿತ್ರ ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿದೆ ಅದು ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮ, ಸೇವೆಗಳು ಆತ್ಮತೃಪ್ತಿ ತಂದುಕೊಡುತ್ತದೆ, ಇದರಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಬೇಕು ಎಂದು ಸದಾ ಪುಟಿದೇಳಿಸುತ್ತದೆ, ರಿಯಾಲಿಟಿ ಶೋ ಮೂಲಕ ಕನ್ನಡನಾಡಿಗೆ ಪರಿಚಿತರಾಗಿ, ಇದೀಗ ಬಹುದೊಡ್ಡ ಬೆಳ್ಳಿತೆರೆಯ ಮೇಲೆ ಸದ್ದು ಮಾಡಲಿರುವ “ಕೋರ” ಚಿತ್ರದ ಟೀಸರ್ ಈಗಾಗಲೇ ಧೂಳೆಬ್ಬಿಸಿದೆ, ಮಿಲಿಯನ್ ಸಂಖ್ಯೆಯನ್ನು ಮೀರಿ ವೀಕ್ಷಣೆ ಪಡೆದಿದೆ, ಇದಕ್ಕೆ ನಟ ಧೃವ ಸರ್ಜಾ ರವರು ತುಂಬು ಮನಸಿನ ಬಿಡುಗಡೆಯು ಕಾರಣವಾಗಿದೆ ಎಂದು ಪತ್ರಕರ್ತ ಹಾಗೂ ಲೇಖಕ ಗಾರಾ.ಶ್ರೀನಿವಾಸ್ ತಿಳಿಸಿದರು ಅಲ್ಲದೆ ಸುನಾಮಿ ಕಿಟ್ಟಿಯವರಿಗೆ ಹಾಗೂ “ಕೋರ” ಚಿತ್ರಕ್ಕೆ ಶುಭ ಹಾರೈಕೆ ತಿಳಿಸಿದರು.
ಈ ಸಂದರ್ಭದಲ್ಲಿ ಬಡವರ ಚಿರಂಜೀವಿ ಬಾಬು, ನಿಕಟ ಪೂರ್ವ ಅದ್ಯಕ್ಷರು ಮಲೆನಾಡು ಕನ್ನಡ ಪಡೆಯ ಮಲ್ಲಿಕಾರ್ಜುನ ಮರಡಿ, ಕ್ರಿಯೇಟಿವ್ ಗ್ರೂಪ್ ನ ಮ್ಯಾನೇಜ್ಮೆಂಟ್ ಟ್ರಸ್ಟಿ ಪರಮೇಶ್ವರ ಎಲ್.ಕೆ, ಪತ್ರಕರ್ತರಾದ ಹೆಚ್.ಎಸ್ ವಿಷ್ಣು ಪ್ರಸಾದ್, ಕರವೇ-ಯುವಸೇನೆಯ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್, ರಂಗಕರ್ಮಿ ಶಿವಕುಮಾರಯ್ಯ ಮಾರವಳ್ಳಿ, ಅಕ್ಷಯ್ ಕಾರ್ ಸ್ಪಾ ಮಾಲೀಕರಾದ ಚಂದ್ರಹಾಸ್ ಎನ್ ರಾಯ್ಕರ್, ಗೋಲ್ಡ್ ಸ್ಮಿತ್ ಹಾಗೂ ಧ್ಯಾನಿಗಳಾದ ಅನಿಲ್ ಕುಮಾರ್, ಹಾಗೂ ನಿಶಾಂತ್ ಎಸ್ ಗಾರಾ ಸೇರಿದಂತೆ ಪೌರ ಕಾರ್ಮಿಕರು ಉಪಸ್ಥಿತರಿದ್ದರು.