
ಶಿವಮೊಗ್ಗ: ಈದ್ ಮಿಲಾದ್ ಹಬ್ಬಕ್ಕಾಗಿ ಇಂದು ಸೆಂಟ್ರಲ್ ಜೈಲಿನಲ್ಲಿ ಮಾಂಸದೂಟ ಮಾಡಲಾಗಿದೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು.ಆದು ಕೂಡ ಒಬ್ಬ ಖೈದಿಯ ಸಾರಥ್ಯದಲ್ಲಿ ಚಿಕನ್ ಮತ್ತು ಮಟನ್ ಅನ್ನು ತರಿಸಲಾಗಿದೆ ಎನ್ನುವ ಸುದ್ದಿ ಹಬ್ಬಿತು.
ಆದರೆ ಸೆಂಟ್ರಲ್ ಜೈಲ್ ನ ಮುಖ್ಯ ಅಧೀಕ್ಷಿಕಿಯಾದ ಡಾಕ್ಟರ್ ಅನಿತಾ ಅವರು ಹೇಳುವ ಪ್ರಕಾರ ನಮ್ಮ ಶಿವಮೊಗ್ಗ ಜೈಲು ಸೇರಿದಂತೆ ರಾಜ್ಯದ ವಿವಿಧ ಜೈಲುಗಳಲ್ಲಿ ಪ್ರತಿ ಹಬ್ಬಗಳನ್ನು ಆಚರಿಸುತ್ತೇವೆ ಉದಾಹರಣೆಗೆ ಗಣಪತಿ ಹಬ್ಬ, ಕ್ರಿಸ್ಮಸ್, ಹಾಗೂ ಮುಸ್ಲಿಂ ಹಬ್ಬಗಳು ಆ ಸಮಯದಲ್ಲಿ ಆ ಸಮುದಾಯದ ಕೈದಿಗಳು ಆಚರಣೆ ನಡೆಸುತ್ತಾರೆ ಉಳಿದ ಕೈದಿಗಳು ಸಹ ಭಾಗವಹಿಸುತ್ತಾರೆ.
ವಿಶೇಷವಾಗಿ ಕೈದಿಗಳಿಗೆ ಸರ್ಕಾರ ನೀಡುವ ಇಂಡೆಂಟ್ ನಲ್ಲಿ ಸ್ವೀಟ್ಗಳನ್ನು, ಪಾಯಸಗಳನ್ನು ಮಾಡಿ ನೀಡಲಾಗುತ್ತದೆ.
ಜೈಲಿನಲ್ಲಿ ಪ್ರತಿ ಗುರುವಾರ ಅಥವಾ ಶುಕ್ರವಾರ ನಾನ್-ವೆಜ್ ಊಟವನ್ನು ಕೊಡಲಾಗುತ್ತದೆ.ಆದರೆ ಕೆಲವು ಸಂದರ್ಭಗಳಲ್ಲಿ ಹಲವು ಕೈದಿಗಳ ಬೇಡಿಕೆಯ ಮೇರೆಗೆ ಬೇರೆ ದಿನದಂದು ನೀಡಲಾಗುತ್ತದೆ.
ಇಂದು ಸಹ ಅಷ್ಟೇ ಶುಕ್ರವಾರದ ನಾನ್ ವೆಜ್ ಊಟವನ್ನು ಕೈದಿಗಳ ಕೋರಿಕೆಯ ಮೇರೆಗೆ ಭಾನುವಾರ ನೀಡಲಾಗಿದೆ ಅಷ್ಟೇ ಇದರಲ್ಲಿ ಅಂತ ವಿಶೇಷತೆ ಏನು ಇಲ್ಲ ಹಾಗೆ ಮೊನ್ನೆ ನಡೆದ ಗಣಪತಿ ಹಬ್ಬದಂದು ಕೂಡ ಕೈದಿಗಳಿಗೆ ಸಿಹಿ ಊಟವನ್ನು ನೀಡಲಾಗಿದೆ ಎಂದು ಪತ್ರಿಕೆಗೆ ಮಾಹಿತಿ ತಿಳಿಸಿದರು.

ರಘುರಾಜ್ ಹೆಚ್. ಕೆ. 9449553305.