
ತಿರ್ಥಹಳ್ಳಿ: ತಾಲೂಕಿನ ಪಟ್ಟಣಕ್ಕೆ ಹೊಂದಿಕೊಂಡಿರುವ ಮೇಲಿನ ಕುರವಳ್ಳಿಯ ಸರ್ವೆ ನಂ 75ರಲ್ಲಿ ನಿರಂತರವಾಗಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಪತ್ರಿಕೆ ನಿರಂತರವಾಗಿ ಸುದ್ದಿ ಪ್ರಕಟಿಸುತಿತ್ತು.
ಇದು ಸಾಲದೆಂಬಂತೆ ನೈಸರ್ಗಿಕವಾಗಿ ಸಿಗುವ ಕಲ್ಲುಗಳು ಮುಂದಿನ ಪೀಳಿಗೆಗೂ ಬಳಕೆಯಾಗಲಿ ಎನ್ನುವ ಉದ್ದೇಶದಿಂದ ಈ ಅಕ್ರಮ ಕಲ್ಲುಗಾಣಿಗಾರಿಕೆ ತಡೆಯುವ ಉದ್ದೇಶದಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ರಕ್ಷಣಾ ಧಿಕಾರಿಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಿಗೆ ಪತ್ರ ಬರೆದು ದೂರು ನೀಡಿದ್ದು ನಿರಂತರವಾಗಿ ಶಿವಮೊಗ್ಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನವೀನ್ ಗಮನಕ್ಕೆ ತರಲಾಗಿದ್ದು ಅವರುಗಳು ಸಹ ನಿರಂತರವಾಗಿ ದಾಳಿ ಮಾಡುತ್ತಿದ್ದು ಆದರೂ ಸಹ ನಿರಂತರವಾಗಿ ಆ ಭಾಗದಲ್ಲಿ ಅಕ್ರಮ ನಡೆಯುತ್ತಿದ್ದು ಇಂದು ಹಿರಿಯ ಭೂ ವಿಜ್ಞಾನಿ ನವೀನ್ ಮತ್ತು ಅವರ ತಂಡ ಸರ್ವೆ ನಂ 75 ರ ಮೇಲೆ ದಾಳಿ ಮಾಡಿ 2 ಕಲ್ಲು ತುಂಬಿದ ಲಾರಿಗಳನ್ನು ವಶಪಡಿಸಿಕೊಂಡು ತಿರ್ಥಹಳ್ಳಿ ಟೌನ್ ಠಾಣೆಯ ಸುಪರ್ದಿಗೆ ಒಪ್ಪಿಸಿ ಆ ಸ್ಥಳಕ್ಕೆ ಹೋಗದಂತೆ ಟ್ರೆಂಚ್ ಹೊಡೆಸಿದ್ದಾರೆ.

ಹಿಂದೆ ಕೂಡಾ ಇದೇ ತರಹ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೋಲಿಸ್ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ಇದೇ ರೀತಿ ಟ್ರೆಂಚ್ ಹೊಡೆದು ಅಕ್ರಮವನ್ನು ನಿಲ್ಲಿಸಿದರು .
ಆದರೆ ಸರ್ಕಾರಿ ಅಧಿಕಾರಿಗಳಿಗೂ ಬೆಲೆ ನೀಡದೆ ಮತ್ತೆ ಟ್ರಂಚ್ ಅನ್ನು ಮುಚ್ಚಿ ತಮ್ಮ ಅಕ್ರಮವನ್ನು ಮುಂದುವರಿಸಿದ್ದರು.
ಈಗ ಮತ್ತೆ ಟ್ರಂಚ್ ಹೊಡೆದು ತಡೆ ಹಾಕಿದ್ದಾರೆ ಈಗಲೂ ಕೂಡ ಅದೇ ತರ ಮಾಡುತ್ತಾರಾ ಈಗ ಅದೇ ತರ ಮಾಡಿದರೆ ಗಣಿ ಮತ್ತೊಬ್ಬ ವಿಜ್ಞಾನ ಇಲಾಖೆ ಟ್ರಸ್ ಪಾಸ್ ಕೇಸ್ ಹಾಕಿ ಆ ಅಕ್ರಮ ಕೋರರನ್ನು ಜೈಲಿಗೆ ಕಳಿಸುತ್ತಾ ರ ಕಾದು ನೋಡಬೇಕು.
ರಘುರಾಜ್ ಹೆಚ್.ಕೆ.9449553305.