
ಶಿವಮೊಗ್ಗ : ನಿನ್ನೆ ನಗರದ ಬಾಲರಾಜ್ ಅರಸ್ ರಸ್ತೆಯ ಎದುರು ಜಿಲ್ಲಾ ಬಿಜೆಪಿ ವತಿಯಿಂದ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿಯ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು .
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾತಾನಾಡಿದ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಹರ್ಷನ ಕೊಲೆಯ ನಂತರ ಹಿಂದೂಗಳು ಮನಸ್ಸು ಮಾಡಿದರೆ ಮುಸ್ಲೀಂರ ವಿರುದ್ಧ ಮಾರಿ ಹಬ್ಬದಲ್ಲಿ ಕುರಿಕೊಚ್ಚಿ ಹಾಕಿದ ಹಾಗೆ ಕೊಚ್ಚಬಹುದಿತ್ತು. ಆದರೆ ಹಿಂದೂ ಸಮಾಜ ಆ ರೀತಿ ಪ್ರತಿಕ್ರಿಯಸದೆ ಶಾಂತಿ ರೀತಿಯಲ್ಲಿ ನಡೆದುಕೊಂಡಿದೆ.
ನಮ್ಮಲ್ಲಿನ ಹಿಂದೂ ಹೆಣ್ಣುಮಕ್ಕಳು ಝಾನ್ಸಿ ರಾಣಿ, ಕಿತ್ತೂರು ಚೆನ್ನಮ್ಮಳನ ರಕ್ತ ಹಂಚಿಕೊಂಡು ಬೆಳೆದವರು. ಅಂತಹವರನ್ನ ಕೆಣಕಿದರೆ ಕೆಣಕಿದವರನ್ನ ಕೊಚ್ಚಿ ಹಾಕುತ್ತಾರೆ.
ಹೀಗೆ ಒಂದು ಸಮಾಜವನ್ನು ಕೆಣಕಿ ಸಮಾಜಗಳ ನಡುವೆ ವಹಿಮನಸ್ಸಿಗೆ ಕಾರಣವಾಗುವಂತಹ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ ಹಿನ್ನೆಲೆಯಲ್ಲಿ ಸೆಕ್ಷನ್ 153 ಎ ಮತ್ತು ಸೆಕ್ಷನ್ 504 ಸುಮೋಟೋ ಪ್ರಕರಣ ಜಯನಗರ ಠಾಣೆಯಲ್ಲಿ ದಾಖಲಾಗಿದೆ.