
ಶಿವಮೊಗ್ಗ: ನಾಳೆ ಅಹ್ಮದಬಾದ್ ನಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಅಂತಿಮ ಪಂದ್ಯದ ನೇರ ಪ್ರಸಾರದ ವೀಕ್ಷಣೆಗೆ ಇಡೀ ದೇಶವೇ ಸಜ್ಜಾಗಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಮಾಜಿ ನಾಯಕ ದೋಣಿ ಸಚಿನ್ ತೆಂಡೂಲ್ಕರ್ ಸೌರವ್ ಗಂಗೂಲಿ ಸೇರಿದಂತೆ ಘಟಾನುಘಟಿ ನಾಯಕರುಗಳು ಪಂದ್ಯ ವೀಕ್ಷಣೆಗೆ ಆಗಮಿಸುವ ಸಾಧ್ಯತೆ ಇದೆ.
ಇಡೀ ದೇಶಾದ್ಯಂತ ಸಂಭ್ರಮದ ವಾತಾವರಣ ಇದ್ದು ಎಲ್ಲೆಡೆ ಪಂದ್ಯ ವೀಕ್ಷಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಎಲ್ಇಡಿ ಸ್ಕ್ರೀನ್ಗಳನ್ನು ಬಳಸಿಕೊಂಡು ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಶಿವಮೊಗ್ಗದಲ್ಲೂ ಕೂಡ ನೆಹರೂ ಕ್ರೀಡಾಂಗಣದಲ್ಲಿ ನಾಳಿನ ಹೈವೋಲ್ಟೇಜ್ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು ನೆಹರೂ ಕ್ರೀಡಾಂಗಣದಲ್ಲಿ ಎಲ್ಇಡಿ ಸ್ಕ್ರೀನ್ ಬಳಕೆ ಮಾಡಿ ನಾಳಿನ ಪಂದ್ಯ ವೀಕ್ಷಣೆಗೆ ಸಕಲಸಿದ್ಧತೆ ನಡೆಸಿದ್ದಾರೆ.
ಕುತೂಹಲ ಕೆರಳಿಸಿರುವ ನಾಳಿನ ಪಂದ್ಯದಲ್ಲಿ ಇಡೀ ಪಂದ್ಯದಲ್ಲಿ ಸೋಲನ್ನೇ ಕಾಣದ ಭಾರತ ತಂಡ ಒಂದೆಡೆ ಆದರೆ ಇನ್ನೊಂದೆಡೆ ಒಂದಷ್ಟು ಸೋಲನ್ನು ಕಂಡು ಗೆಲುವನ್ನು ಕಂಡು ಫೈನಲ್ ಗೆ ತಲುಪಿರುವ ಆಸ್ಟ್ರೇಲಿಯಾ ಇನ್ನೊಂದೆಡೆ ಒಟ್ಟಿನಲ್ಲಿ ನಾಳಿನ ಪಂದ್ಯ ಕುತೂಹಲದಿಂದ ಕೂಡಿದ್ದು ಭಾರತಕ್ಕೆ ಗೆಲ್ಲುವ ಎಲ್ಲಾ ಅವಕಾಶಗಳು ಇವೆ ಎನ್ನುತ್ತಾರೆ ಕ್ರಿಕೆಟ್ ತಜ್ಞರು .
ರಘುರಾಜ್ ಹೆಚ್. ಕೆ.9449553305.