
ತೀರ್ಥಹಳ್ಳಿ: ರಾಜ್ಯ ಮಟ್ಟದ ಕಬಡ್ಡಿ ಕ್ರೀಡೆಗೆ ಆಯ್ಕೆಯಾದ ಕಲ್ಲುಕೊಪ್ಪ ಶಾಲೆಯ ವಿಧ್ಯಾರ್ಥಿಗಳು ತನ್ನ ಊರಿನ ಮಕ್ಕಳಿಗೆ ಸನ್ಮಾನಿಸಿ ಗೌರವಾರ್ಥ ಅವರಿಗೆ ಟೂರ್ನಮೆಂಟ್ ಗೆ ತೆರಳಲು ವ್ಯವಸ್ಥೆಗೆ ದೇಣಿಗೆ ನೀಡಿ ರಾಜ್ಯ ಮಟ್ಟದಲ್ಲಿ ಕೂಡ ಗೆದ್ದು ನಮ್ಮ ತೀರ್ಥಹಳ್ಳಿ ತಾಲ್ಲೂಕಿಗೆ ಕೀರ್ತಿ ತರಬೇಕು ಎಂದು. ಡಿಸಿಸಿ ಬ್ಯಾಂಕ್ ಬ್ಯಾಂಕ್ ಅಧ್ಯಕ್ಷರು ಡಾ ಆರ್ ಎಂ ಮಂಜುನಾಥ ಗೌಡ ಅವರು ಹಾರೈಸಿದರು.
ಕಲ್ಲುಕೊಪ್ಪ ಹಾಲು ಉತ್ಪಾದಕರ ಸಹಕಾರದ ಸಂಘ ಆವರಣದಲ್ಲಿ ಈ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಲೋಕೇಶ್ ಕರಕುಚ್ಚಿ ಅವರ ಅಧ್ಯಕ್ಷತೆಯಲ್ಲಿ ಈ ಮಕ್ಕಳಿಗೆ ಉತ್ತಮ ತರಬೇತಿ ನೀಡಿದ ದೈಹಿಕ ಶಿಕ್ಷಕರು ರೇವಣ್ಣಪ್ಪ ಡಿ ಮತ್ತು ಗ್ರಾಮಸ್ಥರು ಮತ್ತು ಸಂಘದ ಎಲ್ಲಾ ನಿರ್ದೇಶಕರು ಭಾಗವಹಿಸಿದ್ದರು.