
ವಿಶ್ವದ ಕಣ್ಣು ಈಗ ಭಾರತ-ಆಸ್ಟ್ರೇಲಿಯಾ ವರ್ಲ್ಡ್ ಕಪ್ ಫೈನಲ್ ಮ್ಯಾಚ್ ಮೇಲೆ ನೆಟ್ಟಿದೆ..
ಗುಜರಾತ್ ನ ಅಹ್ಮದಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿರುವ ಕ್ರೀಡಾಂಗಣದಲ್ಲಿ ಇಂದು ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ಯಾರಾಗುತ್ತಾರೆ ವಿಜಯಶಾಲಿ ಎನ್ನುವುದು ಕುತೂಹಲ ಕೆರಳಿಸಿದೆ.
ಒಂದೆಡೆ ಭಾರತ ಗೆಲ್ಲಲಿ ಎಂದು ವಿಶ್ವದ ಭಾರತದ ಕ್ರಿಕೆಟ್ ಅಭಿಮಾನಿಗಳು ಬಯಸುತ್ತಿದ್ದರೆ ಇನ್ನೊಂದೆಡೆ ಆಸ್ಟ್ರೇಲಿಯಾ ಗೆಲ್ಲಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ ಸಮ ಬಲದಿಂದ ಕೂಡಿರುವ ಎರಡು ತಂಡಗಳ ನಡುವೆ ಹೋಲಿಸಿದರೆ ಭಾರತವೇ ಸ್ವಲ್ಪಮಟ್ಟಿಗೆ ಆಸ್ಟ್ರೇಲಿಯಕ್ಕಿಂತ ಉತ್ತಮ ತಂಡ ಎನಿಸಿಕೊಂಡಿದೆ.
ಈ ಬಾರಿ ಭಾರತ ವರ್ಲ್ಡ್ ಕಪ್ ಫೈನಲ್ ಗೆಲ್ಲುವ ನೆಚ್ಚಿನ ತಂಡವಾಗಿದೆ ಒಂದು ಸೋಲನ್ನು ಕಾಣದೆ ನೇರವಾಗಿ ಫೈನಲ್ ಗೆ ತಲುಪಿರುವ ಭಾರತ ತಂಡ ಒಂದುವೇಳೆ ಈ ಬಾರಿ ವಿಶ್ವಕಪ್ ಗೆಲ್ಲದಿದ್ದರೆ ಮುಂದಿನ ಹನ್ನೆರಡು ವರ್ಷಗಳ ಕಾಲ ವಿಶ್ವಕಪ್ ಗೆಲ್ಲುವುದು ಕಷ್ಟ ಎನ್ನುವುದು ಕ್ರಿಕೆಟ್ ತಜ್ಜರ ಅಭಿಪ್ರಾಯ ಏಕೆಂದರೆ ಭಾರತದಲ್ಲಿ ಈಗ ಇರುವ ಆಟಗಾರರ ಮೇಲೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಎಲ್ಲರೂ ಕ್ರಿಕೆಟ್ ಅಭಿಮಾನಿಗಳೆ ಆದರೆ ಒಂದೆಡೆ ಅಭಿಮಾನಕೋಸ್ಕರ ಕ್ರಿಕೆಟ್ ನೋಡುವರು ಒಂದು ಕಡೆಯಾದರೆ ಇನ್ನೊಂದು ಕಡೆ ಕ್ರಿಕೆಟನ್ನು ಬಾಜಿ ಕಟ್ಟಿ ನೋಡುವವರು ಇದ್ದಾರೆ ಆ ಬಾಜಿ ಕಟ್ಟಿ ನೋಡುವವರು ಎಂದು ಭಾರತ ಗೆಲ್ಲಲಿ ಎಂದು ಭಾಜಿ ಕಟ್ಟಿದ್ದಾರೆ ಒಂದು ವೇಳೆ ಭಾರತ ಗೆದ್ದರೆ ಅವರಿಗೆ ಖುಷಿಯೋ ಖುಷಿ ಒಂದು ವೇಳೆ ಭಾರತ ಸೋತು ಆಸ್ಟ್ರೇಲಿಯಾ ಗೆದ್ದರೆ ಬಾಜಿ ಕಟ್ಟಿದವರ ಪರಿಸ್ಥಿತಿ ಅದೋಗತಿ.
ಬಾಜಿಯ ವಿಷಯ ಏನೇ ಇರಲಿ ಭಾರತ ಗೆಲ್ಲಲಿ ವಿಶ್ವದೆಲ್ಲೆಡೆ ಭಾರತದ ವಿಜಯ ಪಾತಕಿ ಹಾರಲಿ ಎಂದು ಹಾರೈಸೋಣ.
ರಘುರಾಜ್ ಹೆಚ್. ಕೆ.9449553305.